ಜಿಲ್ಲೆಯಲ್ಲೊಂದು ವಿಚಿತ್ರ ಅಭಿಮಾನಿಗಳ ಸಂಘ.!
ತುಂಗಾವಾಣಿ
ಕೊಪ್ಪಳ ಮಾ 21 ಸಿನಿ ತಾರೆಯರ ಅಭಿಮಾನಿಗಳು, ಕ್ರಿಕೆಟ್ ಪ್ರೇಮಿಗಳು, ರಾಜಕಾರಣಿಗಳ ಅಭಿಮಾನಿಗಳನ್ನು ನಾವು ನೀವೆಲ್ಲರೂ ನೋಡಿದ್ದೇವೆ. ಆದರೆ ಅಮೇರಿಕಾ ಸಂಜಾತೆ ಹಿಂದಿ ಸಿನಿಮಾ ತಾರೆ ಪಡ್ಡೆ ಹುಡುಗರ ಮನದನ್ನೆಯಾಗಿರುವ ಸನ್ನಿ ಲಿಯೋನಿ ಅಭಿಮಾನಿಗಳ ಸಂಘ ಜಿಲ್ಲೆಯ ಪುಟ್ಟ ಗ್ರಾಮದಲ್ಲಿರುವುದು ವಿಚಿತ್ರ ವೆನೆಸಿದರೂ ಇದು ಸತ್ಯ.
ಹೌದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಾಬಲಕಟ್ಟೆ ಗ್ರಾಮದಲ್ಲಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನಿ ಬಾಯ್ಸ್ ಅಂತ ಒಂದು ಅಭಿಮಾನಿ ಬಳಗವಿದ್ದು ಗ್ರಾಮದ ಶ್ರೀ ಶರಣಬಸವೇಶ್ವರ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಆಹ್ವಾನಿಸುವ ದೊಡ್ಡ ಪ್ಲೆಕ್ಸ್ ಬ್ಯಾನರ್ ನಲ್ಲಿ ಸನ್ನಿ ಲಿಯೋನಿಯ ಚಿತ್ರ ಹಾಕಿಸಿ ಸ್ವಾಗತ ಕೋರಿದ್ದಾರೆ,
ಸಾರ್ವಜನಿಕವಾಗ ಆ ಸುಂದರಿಯ ಹೆಸರು ಹೇಳಲು ಮುಜುಗರ ಪಡುವವರ ನಡುವೆ ಅವಳ ಹೆಸರಿನಲ್ಲಿ ಪ್ಲೆಕ್ಸ್ ಹಾಕಿಸಿದ್ದು ಜಾತ್ರೆಗೆ ಬರುತ್ತಿರುವ ಭಕ್ತರಿಗೆ ಮುಜುಗರದ ಜೊತೆ ಮುಗುಳುನಗೆ ತರೆಸುತ್ತಿದೆ.
ಯುವಕರು ಈ ಹಿಂದೆ 2021 ರಲ್ಲಿ ಮಂಡ್ಯದ ಕೊಮ್ಮೇರಹಳ್ಳಿಯ ಯುವಕರು ಸನ್ನಿ ಲಿಯೋನ್ ಹುಟ್ಟುಹಬ್ಬಕ್ಕೆ ಸನ್ನಿ ಲಿಯೋನ್‌ಳ ದೊಡ್ಡ ಕಟೌಟ್ ಮಾಡಿಸಿ ಊರ ಮಧ್ಯೆ ನಿಲ್ಲಿಸಿದ್ದರು . ಕಟೌಟ್ ಮೇಲೆ ‘ ಅನಾಥ ಮಕ್ಕಳ ತಾಯಿ ಸನ್ನಿ ಲಿಯೋನ್‌ಗೆ ಹುಟ್ಟುಹಬ್ಬದ ಶುಭಾಶಯ ‘ ಎಂದು ಬರೆಸಿದ್ದರು . ಮಂಡ್ಯದ ಕೊಮ್ಮೇರಹಳ್ಳಿಯ ಯುವಕರ ಪ್ರೀತಿಗೆ ಮನಸೋತ ಸನ್ನಿ ಲಿಯೋನ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಕಟೌಟ್‌ನ ಚಿತ್ರವನ್ನು ಹಂಚಿಕೊಂಡು ಯುವಕರಿಗೆ ಧನ್ಯವಾದ ಹೇಳಿದ್ದರು.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.