Breaking News

ತರಾತುರಿಯಲ್ಲಿ ವೃತ್ತ ನಿರ್ಮಾಣಕ್ಕೆ ತೀರ್ವ ವಿರೋಧ. ಸ್ಥಳದಲ್ಲಿ ಬಿಗುವಿನ ವಾತಾವರಣ.

ತರಾತುರಿಯಲ್ಲಿ ವೃತ್ತ ನಿರ್ಮಾಣಕ್ಕೆ ತೀರ್ವ ವಿರೋಧ.
ಸ್ಥಳದಲ್ಲಿ ಬಿಗುವಿನ ವಾತಾವರಣ.

ತುಂಗಾವಾಣಿ
ಗಂಗಾವತಿ ಡಿ 16 ಗಂಗಾವತಿ ನಗರದ ಜನನಿಬಿಡ ಮುಖ್ಯರಸ್ತೆಯಲ್ಲಿನ ವೃತ್ತವೊಂದಕ್ಕೆ ನಾಮಕರಣ ಮಾಡುವ ವಿಚಾರವಾಗಿ ತೀರ್ವ ವಿರೋದ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಸಿಬಿಎಸ್ ವೃತ್ತದ ಹತ್ತಿರ ವಿರುವ ಇಸ್ಲಾಂಪುರ ವೃತ್ತಕ್ಕೆ ಹೊಸದಾಗಿ ಜನರಲ್ ಬಿಪಿನ್ ರಾವತ್ ವೃತ್ತವೆಂದು ನಾಮಫಲಕ ಹಾಕಲು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಆಗಮಿಸಿದ್ದರು ಅದೇ ವೇಳೆ ಸ್ಥಳೀಯ ನಾಗರೀಕರು ವಿರೋಧ ವ್ಯಕ್ತಪಡಿಸಿ ಸದ್ರಿ ವೃತ್ತಕ್ಕೆ ಈಗಾಗಲೆ ಇಸ್ಲಾಂಪುರ ವೃತ್ತವೆಂದು ದಿನಾಂಕ 03-08-2015 ರಂದು ಗಂಗಾವತಿ ನಗರಸಭೆ ಅನುಮೋದನೆ ನೀಡಲಾಗಿದ್ದು ಈಗ ಏಕಾಏಕಿ ವೃತ್ತದ ಹೆಸರು ಬದಲಾವಣೆ ಮಾಡಿ ನಾಮಫಲಕ ಹಾಕಬೇಡಿ ಎಂದು ಪಟ್ಟು ಹಿಡಿದರು.


ಇಸ್ಲಾಂಪುರ ಕಮೀಟಿ ಸದಸ್ಯರು ಹಾಗು ಮುಖಂಡರಾದ ಮಹ್ಮದ್ ರಫೀಕ್ ಸುಲ್ತಾನ್, ರಾಜಮಹ್ಮದ್, ಮಹ್ಮದ್ ಫಾರೂಕ್ ಮತ್ತು ಇತರರು ಸ್ಥಳದಲ್ಲಿದ್ದ ತಹಶೀಲ್ದಾರ ಆರ್ ನಾಗರಾಜ ಮತ್ತು ಡಿವೈಎಸ್‌ಪಿ ರುದ್ರೇಶ್ ಉಜ್ಜಿನಕೊಪ್ಪ ಅವರಿಗೆ ನಗರಸಭೆಯಿಂದ ಕರ್ನಾಟಕ ಪುರಸಭೆಗಳ ಕಾಯ್ದೆ 1964 ಕಲಂ 211(1) ರ ಅಡಿಯಲ್ಲಿ ಅನುಮೋದನೆಯಾದ ದಾಖಲೆಯನ್ನು ನೀಡಿ ಈ ವೃತ್ತದ ಹೆಸರನ್ನು ಎಥಾರೀತಿ ಬಿಟ್ಟು ಹುತಾತ್ಮರಾದ ಜನರಲ್ ಬಿಪಿನ್ ರಾವತ್ ಅವರ ಹೆಸರಿನಲ್ಲಿ ಬೇರೆ ಕಡೆ ವೃತ್ತವನ್ನು ನಿರ್ಮಿಸಿ ನಾವು ಕೂಡ ಸಂಪೂರ್ಣ ಸಹಕಾರ ನೀಡಿ ತನು ಮನ ಧನದಿಂದ ಸಹಕರಿಸುತ್ತೇವೆ ಎಂದರು.
ಸ್ಥಳದಲ್ಲಿ ಬಿಗುವಿನ ವಾತಾವಾರಣವಿದ್ದು ಪೋಲಿಸ್, ಕಂದಾಯ ಇಲಾಖೆ ಹಾಗು ನಗರಸಭೆ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.

ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ಚಾಣಾಕ್ಷತೆ ಮೆರೆದ ನಗರಸಭೆ ಪೌರಾಯುಕ್ತ.! ನಾಮಫಲಕ ವಿವಾದ ಸುಖಾಂತ್ಯ.!?

ಚಾಣಾಕ್ಷತೆ ಮೆರೆದ ನಗರಸಭೆ ಪೌರಾಯುಕ್ತ.! ನಾಮಫಲಕ ವಿವಾದ ಸುಖಾಂತ್ಯ.!? ತುಂಗಾವಾಣಿ ಗಂಗಾವತಿ ಡಿ-17 ಹಿಂದೂಪರ ಸಂಘಟನೆಯ ಮುಖಂಡರು ಶಾಸಕ ಪರಣ್ಣ …

error: Content is protected !!