ನೆರೆದಿದ್ದ ಜನರಿಗೆ PSI ಏನ್ ಹೇಳಿದ್ರು..?
ಜನರು ಏನ್ ಮಾಡಿದ್ರು ಗೊತ್ತೆ..?
ತುಂಗಾವಾಣಿ.
ಕುಷ್ಟಗಿ: ಜ-19 ಪಟ್ಟಣದ ಸಂತೆ ಬಜಾರ್ ನಲ್ಲಿ ವಜೀರ್ ಬಿ, ಗೋನಾಳರ ಮಾಲಿಕತ್ವದ ನಿಸರ್ಗ ಕರೊಕೆ ಸಿಂಗಿಂಗ್ ಸ್ಟೂಡಿಯೋ ಉದ್ಘಾಟನಾ ಸಮಾರಂಭ ನಡೆಯಿತು.
ಅಷ್ಟಕ್ಕೂ ಅಲ್ಲಿ ನಡೆದದ್ದು ಏನು ಅಂತಿರಾ.
ಸ್ಟೂಡಿಯೋ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಗಂಗಾವತಿ ಉಪ ವಿಭಾಗದ DYSP ಉಜ್ಜಿನಕೊಪ್ಪರ ಜೊತೆಗೆ ವೇದಿಕೆ ಹಂಚಿಕೊಂಡ ಪಿ,ಎಸ್,ಐ, ಅಶೋಕ ಬೇವೂರು, ಸಿಪಿಐ,ನಿಂಗಪ್ಪ ರಿಗೆ ನೆರೆದಿದ್ದ ಜನರು ಒಂದು ಡೈಲಾಗ್ ಹೇಳಲು ಆಗ್ರಹಿಸಿದರು, ಆಗ ಕುಷ್ಟಗಿ CPI ನಿಂಗಪ್ಪರವರು ಮಾತನಾಡಿ, ನಮ್ಮ ಇಲಾಖೆಯ ಹನಮಸಾಗರ PSI ಅಶೋಕ ಬೇವೂರು ನಿಮಗೆ ಒಂದು ಡೈಲಾಗ್ ಹೇಳ್ತಾರೆ ಕೇಳಿ ಎಂದು ತಿಳಿಸಿದರು, ಅದನ್ನ ಸ್ವೀಕರಿಸಿದ ಹನುಮಸಾಗರ PSI ಅಶೋಕ ಬೇವೂರು, ಅಗ್ನಿ IPS ಚಲನಚಿತ್ರದ ಒಂದು ಡೈಲಾಗ್ ಹೇಳಿಯೇ ಬಿಡ್ರು..
ಅದು ಇಲ್ಲಿದೆ ನೋಡಿ.
ಅಶೋಕ ಬೇವೂರು ಹೇಳಿದ ಡೈಲಾಗ್ ಗೆ ನೇರೆದಿದ್ದ ಜನರು ಅತೀ ಉತ್ಸಾಹದಿಂದ ಸಿಳ್ಳೆ ಚಪ್ಪಾಳೆ ಮಹಾಪೂರವೆ ಹರೆಯಿತು,
ಡೈಲಾಗ್ ಹೇಳಿದ ಮೇಲೆ DYSP ಉಜ್ಜಿನಕೊಪ್ಪ ಮಾತನಾಡಿ ನಮ್ಮಲ್ಲಿಯೂ ಸಹ ಎಲೆ ಮರೆಯ ಕಾಯಿಗಳಂತೆ ಕಲಾವಿದರು ಇದ್ದಾರೆ, ಅವರು ಸಹ ಬೆಳಕಿಗೆ ಬರಲಿ, ಯಾವುದೇ ಫಲಾ ಪೇಕ್ಷೆ ಇಲ್ಲದ ವಜೀರ್ ಗೋನಾಳರಂತಹ ಸಮಾಜ ಸೇವಕರು ಇದ್ದೆರೆ ಸಾವಿರಾರು ಕಲಾವಿದರು ಬೆಳಕಿಗೆ ಬಂದೆ ಬರ್ತಾರೆ ಎಂದು ತಿಳಿಸಿದರು,
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.