ಜಿಲ್ಲೆಯಲ್ಲಿ ಇಂದಿನ ಪಾಜಿಟಿವ್ ಪ್ರಕರಣಗಳು ಎಷ್ಟು ಅಂತಿರಾ..?
ಸಂಪೂರ್ಣ ವಿವರ ಇಲ್ಲಿದೆ ನೋಡಿ..!
ತುಂಗಾವಾಣಿ.
ಕೊಪ್ಪಳ: ಸೆ-19, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೊಂಕಿತರು ಹೆಚ್ಚುತ್ತಲೆ ಇದೆ, ಇಂದು ಬರೋಬ್ಬರಿ 308 ಸೊಂಕಿತರು ಪತ್ತೆಯಾಗಿದ್ದಾರೆ, ಅದರೊಂದಿಗೆ ಜಿಲ್ಲೆಯಲ್ಲಿ ಹತ್ತುಸಾವಿರ ಗಡಿ ದಾಟಿದೆ, ಒಟ್ಟಾರೆ ಜಿಲ್ಲೆಯಲ್ಲಿ 10434 ಸೊಂಕಿತರು ಪತ್ತೆಯಾಗಿದ್ದಾರೆ,
ಅದರಲ್ಲಿ ಇಂದು 188 ಜನರು ಗುಣಮುಖರಾಗಿ ಬಿಡುಗಡೆ ಯಾಗಿದ್ದಾರೆ,
ಜಿಲ್ಲೆಯಲ್ಲಿ ಒಟ್ಟಾರೆ ಬಿಡುಗಡೆಯಾದವರ ಸಂಖ್ಯೆ: 8089
ಸಕ್ರಿಯ ಪ್ರಕರಣಗಳು 2345
ಇಂದು ಮೃತಪಟ್ಟವರು ಒಬ್ಬರು,
ಇದುವರೆಗೆ ಜಿಲ್ಲೆಯಲ್ಲಿ ಕ್ರೂರಿ ಕರೊನಾ ಸೊಂಕಿಗೆ ಮೃತಪಟ್ಟವರು ಸಂಖ್ಯೆ: 223
ತಾಲ್ಲೂಕಾವಾರು ವಿವರ,
ಗಂಗಾವತಿ ತಾಲ್ಲೂಕಿನಲ್ಲಿ ಇಂದು ಪಾಜಿಟಿವ್ ರಿಪೋರ್ಟ್ 104 ಸೊಂಕಿತರು ಪತ್ತೆಯಾಗಿದ್ದಾರೆ,
ಒಟ್ಟಾರೆ ಇದುವರೆಗೂ ಗಂಗಾವತಿ ತಾಲ್ಲೂಕಿನಲ್ಲಿ 4795+104=4899 ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ,
ಕೊಪ್ಪಳ ತಾಲೂಕಿನಲ್ಲಿ 108 ಪಾಜಿಟಿವ್ ಪ್ರಕರಣಗಳು ವರದಿ ಬಂದಿವೆ,
ಒಟ್ಟಾರೆ ಕೊಪ್ಪಳ ತಾಲ್ಲೂಕಿನಲ್ಲಿ 2918+108= 3026 ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ,
ಕುಷ್ಟಗಿ ತಾಲ್ಲೂಕಿನಲ್ಲಿ ಪಾಜಿಟಿವ್ ಪ್ರಕರಣಗಳ ಸಂಖ್ಯೆ: 50,
ಒಟ್ಟಾರೆ ಕುಷ್ಟಗಿ ತಾಲ್ಲೂಕಿನಲ್ಲಿ 1408+50=1458 ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ,
ಯಲಬುರ್ಗಾ ತಾಲ್ಲೂಕಿನಲ್ಲಿ 46 ಪಾಜಿಟಿವ್ ವರದಿ ಬಂದಿವೆ,
ಒಟ್ಟಾರೆ ಯಲಬುರ್ಗಾ ತಾಲ್ಲೂಕಿನಲ್ಲಿ 1015+46=1061 ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ,
ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ 169 ಜನ ಚಿಕಿತ್ಸೆ ಪಡೆಯುತ್ತಿದ್ದರೆ,
ವಿವಿಧ ಖಾಸಗಿ ಆಸ್ಪತ್ರೆಯಲ್ಲಿ 67 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ,
131 ಸೊಂಕಿತರನ್ನು ವಿವಿಧ ಕೊವಿಡ್ ಆಸ್ಪತ್ರೆಗಳಿಗೆ ಅಥವಾ ಹೋಂ ಐಶುಲೇಷನ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ,
ಜಿಲ್ಲೆಯಲ್ಲಿ ಒಟ್ಟು 1755 ಸೊಂಕಿತರು ತಮ್ಮ ತಮ್ಮ ಮನೆಗಳಲ್ಲೆ ವೈದ್ಯರಿಂದ ಸಲಹೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ,
ಆತ್ಮೀಯ ಓದುಗರರೇ. ತುಂಗಾವಾಣಿ ನ್ಯೂಸ್
ಕರೊನಾ ಸಂಬಂಧಿಸಿದ ಸೊಂಕಿತರ, ಗುಣಮುಖರಾಗಿದ್ದವರ, ಮೃತಪಟ್ಟವರ ಮಾಹಿತಿಯನ್ನು ಕಾಲ ಕಾಲಕ್ಕೆ ತಮ್ಮ ಮುಂದೆ ಸುದ್ದಿ ಬಿತ್ತರಿಸುತ್ತಾ ಬಂದಿದೆ, ನಾವು ನೀಡುವ ಮಾಹಿತಿ ಓದಿ ಯಾರು ಆತಂಕ ಗೊಳ್ಳ ಬೇಡಿ,
ಕರೊನಾ ಸಂದರ್ಭವನ್ನು ಎದುರಿಸುವುದು ಹೇಗೆ, ಸೊಂಕು ಬಂದಾಗ ಏನು ಮಾಡಬೇಕು..? ಇನ್ನೂ ಹಲವು ಮಾಹಿತಿಗಳನ್ನು ನುರಿತ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ, ಹಲವು ವೈದ್ಯರು ಬರೆದಿರುವ ಲೇಖನಗಳನ್ನು ಓದಿ, ಯಾವುದೇ ಕಾರಣಕ್ಕೂ ಆತಂಕಕ್ಕೆ, ಉದ್ವೇಗಕ್ಕೆ ಒಳಗಾಗದಿರಿ, ಗಾಬರಿಗೊಳ್ಳಬೇಡಿ, ಧೈರ್ಯದಿಂದ ಎದುರಿಸಿ, ಕಾಲ ಕಾಲಕ್ಕೆ ಸ್ಯಾನಿಟೈಸರ್ ನಿಂದ ಕೈ ತೊಳೆದುಕೊಳ್ಳುತ್ತಾ, ಮಾಸ್ಕ್ ಧರಿಸಿ ಹೊರಗಡೆ ಬನ್ನಿ, ಸುರಕ್ಷಿತ ಅಂತರ ಕಾಪಾಡಿಕೊಳ್ಳಿ,
ಧೈರ್ಯದಿಂದಲೇ ಕರೊನಾವನ್ನು ಎದುರಿಸೋಣ ಇದು ತುಂಗಾವಾಣಿ ಬಳಗದ ಕಳಕಳಿ..!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.