ಜಿಲ್ಲೆಯಲ್ಲಿ ಇಂದು 23 ಕರೋನಾ ಸೊಂಕು.!
ಗ್ರಾಮೀಣ ಭಾಗಕ್ಕೆ ಲಗ್ಗೆ ಇಟ್ಟ ಕ್ರೂರಿ ಕರೋನಾ.!
ತುಂಗಾವಾಣಿ
ಕೊಪ್ಪಳ ಜುಲೈ 05 ಕೊಪ್ಪಳ ಜಿಲ್ಲೆಯಲ್ಲಿ ಇಂದು ಎರಡು ವರ್ಷದ ಮಗು ಹಾಗು ಒಬ್ಬ ಪೋಲಿಸ್ ಪೇದೆ ಸೇರಿ 23 ಕೊವಿಡ್ 19 ಸೊಂಕಿತರು ಪತ್ತೆಯಾಗಿದ್ದಾರೆ.
ಕೊವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೊಪ್ಪಳ ನಗರ ಪೋಲಿಸ್ ಠಾಣೆಯ ಒಬ್ಬ ಪೇದೆಗೆ ಸೊಂಕು ಕಾಣಿಸಿಕೊಂಡಿದೆ. ಗಂಗಾವತಿ ನಗರದಲ್ಲಿ 7, ಗಂಗಾವತಿ ತಾಲೂಕಿನಲ್ಲಿ 11 ಕುಷ್ಟಗಿ ತಾಲೂಕಿನಲ್ಲಿ 2, ಯಲಬುರ್ಗಾ ತಾಲೂಕು ಹಾಗು ಕುಕನೂರು ತಾಲೂಕಿನಲ್ಲಿ ತಲಾ ಒಂದೊಂದು ಪ್ರಕರಣಗಳು ಕಂಡು ಬಂದಿವೆ.
ಜಿಲ್ಲೆಯ ಗ್ರಾಮಗಳಿಗೆ ಕ್ರೂರಿ ಕರೋನಾ ಲಗ್ಗೆ ಇಟ್ಟಿದ್ದು ದಿನದಿಂದ ದಿನಕ್ಕೆ ಗ್ರಾಮೀಣ ಭಾಗದ ಜನರಲ್ಲಿ ಕರೋನಾ ಸೊಂಕು ಉಲ್ಬಣಗೊಳ್ಳುತ್ತಿರುವುದು ವರದಿಯಿಂದ ಗೊತ್ತಾಗುತ್ತಿದೆ.
ಈ ಬಗ್ಗೆ ಜಿಲ್ಲಾಡಳಿತ ಗ್ರಾಮಸ್ಥರಿಗೆ ಕೊವಿಡ್19 ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.