ಗಂಗಾವತಿ ನಗರದ ವ್ಯವಹಾರಿಕ ಪ್ರದೇಶ ಸಂಪೂರ್ಣ ಸೀಲ್ ಡೌನ್..!
ತುಂಗಾವಾಣಿ
ಗಂಗಾವತಿ ಜೂ 11 – ಇಂದು ಬೆಳಿಗ್ಗೆ ಬಂದ ಕೊವಿಡ್ 19 ಕರೋನ ಪರೀಕ್ಷಾ ವರದಿಯಲ್ಲಿ ಗಂಗಾವತಿ ನಗರದ ವಾರ್ಡ್ ಸಂಖ್ಯೆ 5 ರಲ್ಲಿ ಬರುವ ವೆಂಕಟರಮಣ ದೇವಸ್ಥಾನ ಹಿಂಭಾಗದಲ್ಲಿ ವಾಸವಾಗಿದ್ದ ಹಾಗು ಮಸೀದಿಯ ಇಮಾಮ್ ಆಗಿದ್ದ 32 ವರ್ಷ ವಯಸ್ಸಿನ ವ್ಯಕ್ತಿಗೆ ಕರೋನ ಪಾಜಿಟಿವ್ ಕಂಡು ಬಂದಿದ್ದು ಸೊಂಕಿತ ವ್ಯಕ್ತಿಯನ್ನು ಕೊಪ್ಪಳ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿತ್ತು.
ವೈರಸ್ ಹರಡದಂತೆ ತಡೆಯುವ ಸಲುವಾಗಿ ಸದರಿ ಏರಿಯಾದಲ್ಲಿ ಸೀಲ್ ಡೌನ್ ಹಾಗು ಬಫರ್ ಜೋನ್ ಗಳನ್ನಾಗಿ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ.
ಅದರಂತೆ ನಗರಸಭೆ ಸಿಬ್ಬಂದಿ ಸದ್ರಿ ಏರಿಯಾವನ್ನು ಲಿಕ್ವಿಡ್ ಸಾನಿಟೈಜ್ ಮಾಡಿ ಬಫರ್ ಜೋನ್ ನಲ್ಲಿ ಬರುವ ಗಾಂಧಿ ವೃತ್ತ, ಮಹಾವೀರ ವೃತ್ತ,ಬಸವಣ್ಣ ಸರ್ಕಲ್, ಕಿಲ್ಲಾ ಏರಿಯಾ ಮುಖ್ಯರಸ್ತೆಯನ್ನು ಹಾಗು ಡೈಲಿ ಮಾರ್ಕೇಟ್ ಏರಿಯಾ ಸೀಲ್ ಮಾಡಿ ಜನರ ಹಾಗು ವಾಹನ ಓಡಾಟವನ್ನು ಸಂಪೂರ್ಣವಾಗಿ ಬಂದ್ ಮಾಡಿದರು.
ನಗರಸಭೆ ಪೌರಾಯುಕ್ತರಾದ ಕೆ ಸಿ ಗಂಗಾಧರ ರವರು ಮಾಹಿತಿ ನೀಡುತ್ತಾ ಸೀಲ್ ಡೌನ್ ಬಫರ್ ಜೋನ್ ನಲ್ಲಿ ಬರುವ ಸುಮಾರು 2690 ಜನಸಂಖ್ಯೆ ಉಳ್ಳ ಪ್ರದೇಶದ 548 ಮನೆಗಳು 206 ವಾಣಿಜ್ಯ ಮಳಿಗೆಗಳು ಕಿರಾಣಿ ಅಂಗಡಿಗಳು ದೇವಸ್ಥಾನ ಮದರಸಾಗಳು ಸೇರಿದಂತೆ ಶಾಲೆಗಳು ಅಂಗನವಾಡಿಗಳು 28 ದಿನಗಳ ಕಾಲ ಅಥವಾ ಮುಂದಿನ ಆದೇಶ ಬರುವವರೆಗೆ ಬಂದ್ ಮಾಡಿಸಲಾಗಿದೆ, ಆ ಪ್ರದೇಶದ ನಾಗರೀಕರು ಮನೆಯಿಂದ ಹೊರಬರದಂತೆ ಮೈಕ್ ಗಳ ಮೂಲಕ ಪ್ರಚುರ ಪಡಿಸಲಾಗಿದೆ ಎಂದರು.
ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗು ಆಶಾ ಕಾರ್ಯಕರ್ತೆಯರು ಸೊಂಕಿತ ವ್ಯಕ್ತಿಯ ಪ್ರಥಮ ಹಾಗು ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡುವ ಕಾರ್ಯದಲ್ಲಿ ಮಗ್ನರಾಗಿದ್ದು ಅಂಕಿಅಂಶಗಳು ಹೊರಬರಬೇಕಿದೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ