Breaking News

ಕರೋನಾ ಜಾಗೃತಿ ಕುರಿತ ಬೀದಿನಾಟಕ

ಕರೋನಾ ಜಾಗೃತಿ ಕುರಿತ ಬೀದಿನಾಟಕ

ಗಂಗಾವತಿ 10-06-2020
ತುಂಗಾವಾಣಿ

ಗಂಗಾವತಿ ನಗರಸಭೆ ಮತ್ತು‌ ಲಲಿತಾ ಕಲಾ ಅಕಾಡಮಿ ಗಂಗಾವತಿ ವತಿಯಿಂದ ಕರೋನಾ ಜಾಗೃತಿ ಕುರಿತು ಬೀದಿ ನಾಟಕವನ್ನು ಏರ್ಪಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ನಗರಸಭೆ ಕಾರ್ಯಾಲಯದ ಆವರಣದಲ್ಲಿ ಪೌರಾಯುಕ್ತ ಕೆಸಿ ಗಂಗಾಧರ್ ಬೀದಿ ನಾಟಕಕ್ಕೆ ಚಾಲನೆ ನೀಡಿದರು.

ಲಲಿತಾ ಕಲಾ ಅಕಾಡಮಿಯ ಕಲಾವಿದ ವಿರೇಶ ಮುತ್ತಿನಮಠ ಕರೋನ ವೈರಸ್ ವೇಷ ಧರಸಿ ಸಾರ್ವಜನಿಕರಿಗೆ ಕರೊನ ಸೊಂಕು ಹರಡುವ ರೀತಿ ಹಾಗು ಅದರಿಂದ ಬಚಾವಾಗಿ ಸುರಕ್ಷಿತವಾಗಿರಲು ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ನಾಟಕೀಯವಾಗಿ ಪ್ರದರ್ಶನ ನೀಡಿದರು.

ಗಂಗಾವತಿ ನಗರದ ಹಲವಡೆ ಮತ್ತು ಕರೋನ ಸೊಂಕು ಪತ್ತೆಯಾಗಿರುವ ವಾರ್ಡ್ ಸಂಖ್ಯೆ ೨೧ ರಲ್ಲಿನ ವಿವಿದ ಕಡೆ ಪ್ರದರ್ಶನ ನೀಡಿ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಇನ್ನೆರಡು ದಿನ ನಗರದ ಪ್ರಮುಖ ವೃತ್ತಗಳಲ್ಲಿ ಪ್ರದರ್ಶನ ನೀಡಲಿದ್ದಾರೆ

ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ ಕೆ ಸಿ ಗಂಗಾಧರ್, ವ್ಯವಸ್ಥಾಪಕ ಷಣ್ಮುಕಪ್ಪ, ನೈರ್ಮಲ್ಯ ನಿರೀಕ್ಷಕರಾದ ದತ್ತಾತ್ರೇಯ ಹೆಗ್ಡೆ, ನಾಗರಾಜ ಇನ್ನಿತರರು ಇದ್ದರು.

ನೈಜ ಸುದ್ದಿಗಾಗಿ ತುಂಗಾವಾಣಿ ನ್ಯೂಸ್ ಓದಿರಿ

Check Also

ಕೊಪ್ಪಳ ಜಿಲ್ಲೆಯಲ್ಲಿ ಇಂದು ಕರೊನಾಗೆ ಮೂರು ಬಲಿ. 139 ಪಾಜಿಟಿವ್ ಪತ್ತೆಯಾಗಿವೆ.!

ಕೊಪ್ಪಳ ಜಿಲ್ಲೆಯಲ್ಲಿ ಇಂದು ಕರೊನಾಗೆ ಮೂರು ಬಲಿ. 139 ಪಾಜಿಟಿವ್ ಪತ್ತೆಯಾಗಿವೆ.! ತುಂಗಾವಾಣಿ. ಕೊಪ್ಪಳ: ಆ,17, ಜಿಲ್ಲೆಯಲ್ಲಿ, ಮತ್ತೆ ಸಾವಿನ …