Breaking News

ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ಪಾಜಿಟಿವ್ ಪತ್ತೆ. ನೂರು ಮೀಟರ್ ಸೀಲ್ ಡೌನ್.

ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ಪಾಜಿಟಿವ್ ಪತ್ತೆ. ನೂರು ಮೀಟರ್ ಸೀಲ್ ಡೌನ್.

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಐದು ಕೊರೊನಾ ಕೇಸ್‌ಗಳು ಪತ್ತೆಯಾಗಿದ್ದು, ಮೂವರು ಗುಣಮುಖರಾಗಿದ್ದಾರೆ. ಇದೀಗ ಕೊಪ್ಪಳ ಜಿಲ್ಲೆಯ ಗಂಗಾವತಿ‌ ತಾಲೂಕಿನ ಚಿಕ್ಕಜಂತಕಲ್ ಗ್ರಾಮದಲ್ಲಿ ಓರ್ವ ಮಹಿಳೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಚಿಕ್ಕಜಂತಕಲ್ ಗ್ರಾಮದ 28 ವರ್ಷದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದ್ದು,
ಮಹಿಳೆಯ ಪತಿ, ಮಕ್ಕಳು ಸೇರಿ 5 ಜನರನ್ನು ಪ್ರಾಥಮಿಕ ಸಂಪರ್ಕಿತರು ಎಂದು ಗುರುತಿಸಲಾಗಿದೆ. ಮಹಿಳೆಯ ಅಣ್ಣನ ಮನೆಯವರು ಸೇರಿ ನಾಲ್ವರನ್ನು ಎರಡನೆಯ ಸಂಪರ್ಕಿತರು ಎಂದು ಪತ್ತೆ ಹಚ್ಚಲಾಗಿದೆ. ಕೊರೊನಾ ಸೋಂಕಿತ ಮಹಿಳೆ ಗಂಗಾವತಿಯ ಖಾಸಗಿ ಆಸ್ಪತ್ರೆ, ಮೆಡಿಕಲ್ ಶಾಪ್ ಗೂ ಭೇಟಿ ನೀಡಿರುವ ಬಗ್ಗೆ ಮಾಹಿತಿ ದೊರಕಿದ್ದು, ಜಿಲ್ಲಾಡಳಿತ CDR ಮೂಲಕ ಸಂಪರ್ಕ ಪತ್ತೆ ಹಚ್ಚುತ್ತಿದೆ. ಆ ಮಹಿಳೆ ಕೆಮ್ಮುವಿನಿಂದ ಬಳಲುತ್ತಿದ್ದಳು ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ತೆರಳಿ ಟೆಸ್ಟ್ ಕೊಟ್ಟು ಬಂದಿದ್ದು, ಇದೀಗ ಕೊರೊನಾ ದೃಢಪಟ್ಟಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಚಿಕ್ಕಜಂತಕಲ್ ಗ್ರಾಮದಲ್ಲಿ 100 ಮೀಟರ್ ಸೀಲ್ ಡೌನ್ ಮಾಡಲಾಗಿದೆ. ಮಹಿಳೆ ಗ್ರಾಮಕ್ಕೆ ಬಂದ ನಂತರ ಕೂಲಿ ಕೆಲಸಕ್ಕೂ ಸಹ ಹೋಗಿದ್ದರು, ಈಗ ಜಿಲ್ಲಾಡಳಿತ ಸಂಪೂರ್ಣ ಮಾಹಿತಿಕಲೆ ಹಾಕುತ್ತಿದೆ.

Get Your Own News Portal Website 
Call or WhatsApp - +91 84482 65129

Check Also

ಜಿಲ್ಲೆಯಲ್ಲಿ ಇಂದು ಐದು ಸಾವು..! ಒಟ್ಟಾರೆ ಕರೊನಾಗೆ 90 ಸಾವು..! ಏನಾಗುತ್ತಿದೆ ಕೊಪ್ಪಳ ಜಿಲ್ಲೆ..? ಇಂದು ಜಿಲ್ಲೆಯಲ್ಲಿ 134 ಪಾಜಿಟಿವ್ ಪತ್ತೆ.!

ಜಿಲ್ಲೆಯಲ್ಲಿ ಇಂದು ಐದು ಸಾವು..! ಒಟ್ಟಾರೆ ಕರೊನಾಗೆ 90 ಸಾವು..! ಏನಾಗುತ್ತಿದೆ ಕೊಪ್ಪಳ ಜಿಲ್ಲೆ..? ಇಂದು ಜಿಲ್ಲೆಯಲ್ಲಿ 134 ಪಾಜಿಟಿವ್ …

error: Content is protected !!