ಮತ್ತೆ ಬಂದ ರಾಜಾಹುಲಿ..!
ಮರು ನೇಮಕಗೊಂಡ ಜೆ,ಇ, ಡಿ ಎಮ್,ರವಿ,
ಯಾವ ಶಾಸಕರ ಮೇಲುಗೈ..!?
ತುಂಗಾವಾಣಿ.
ಗಂಗಾವತಿ:ಆ,5, ಗಂಗಾವತಿ ಜಿಲ್ಲಾ ಪಂಚಾಯತ್ ನ (ರಾಜಾಹುಲಿ) ಎಂದೆ ಖ್ಯಾತಿ ಪಡೆದಿದ್ದ ಜೆ ಇ, ಡಿ,ಎಮ್, ರವಿ, ರವಿಕುಮಾರ್ ಕಳೆದ ಜೂನ್ 12 ರಂದು ಜಿಲ್ಲಾ ಪಂಚಾಯತ್ ರಾಜ್ ಇಲಾಖೆ ಗಂಗಾವತಿ ಯಿಂದ ಅಮಾನತ್ತಾಗಿದ್ದರು, ಈಗ ಮತ್ತೆ ಜೆಇ ಯಾಗಿ ಡಿ,ಎಮ್, ರವಿ, ಪ್ರಭಾರಿ ಮಾತೃ ಸ್ಥಳಕ್ಕೆ ಮರು ನೇಮಕಗೊಂಡಿದ್ದಾರೆ, ತುಂಗಾವಾಣಿಯು ಗಂಗಾವತಿಯ ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ ಗಲ್ಗಿನ್ ಗೆ ಸಂರ್ಪಕಿಸಿದಾಗ ಡಿ,ಎಮ್, ರವಿಕುಮಾರ್ ಎರಡು ದಿನಗಳ ಹಿಂದೆ ಪಂಚಾಯತ್ ನ ಇಲಾಖೆಗೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಆದೇಶ ನೀಡಿರುತ್ತಾರೆ, ಎಂದು AEE ಸುರೇಶ್ G ತಿಳಿದಿದ್ದಾರೆ,
JE ಡಿ,ಎಮ್,ರವಿಕುಮಾರ್ ವಿರುದ್ಧ ಹಲವಾರು ಪ್ರಕರಣಗಳು,
ಜಿಲ್ಲಾ ಪಂಚಾಯತ್ ಅಂದರೆ ಸಾಕು ಬಗಿದಷ್ಟು ಹಲವಾರು ಪ್ರಕರಣಗಳು ಬರ್ತಾವೆ, ಅದರಲ್ಲಿ ಮುಂಚೂಣಿ ರಾಜಾಹುಲಿ, ಅಲಿಯಾಸ್ JE ಡಿ,ಎಮ್,ರವಿ, ಬಹಳಷ್ಟು ಪ್ರಕರಣಗಳು ಇದ್ದಾವೆ ಎನ್ನುವುದು ಗೊತ್ತಿರುವ ಸಂಗತಿ,
ಹಾಲಿ ಮತ್ತು ಮಾಜಿ ಶಾಸಕರ ಆಪ್ತ..!
ಹಾಲಿ ಶಾಸಕ ದಡೆಸೂಗುರು ಬಸವರಾಜ ಮತ್ತು ಮಾಜಿ ಸಚಿವ ಶಿವರಾಜ್ ತಂಗಡಗಿ ಈ ಇಬ್ಬರಲ್ಲೂ ಆತ್ಮೀಯತೆ ಹೊಂದಿರುವ ಡಿ,ಎಮ್,ರವಿ, ಎಷ್ಟು ಬಾರಿಯಾದರು ಅಮಾನತ್ತು ಮಾಡಿ, ಆದರೆ ಅಮಾನತ್ತು ವಾಪಸ್ಸು ರದ್ದು ಮಾಡುವ ತಾಕ್ಕತ್ತು ಇರುವುದು ರಾಜಾಹುಲಿ JE ಡಿ,ಎಮ್, ರವಿಗೆ ಮಾತ್ರ ಎಂದು ಸಾರ್ವಜನಿಕರು ಹೇಳುತ್ತಿರುವುದು ಸಾಮನ್ಯವಾಗಿದೆ,
ಈಗ ಜನರಿಗೆ ಏನ್ ಹೇಳ್ತಾರೆ,ಹಾಲಿ ಮತ್ತು ಮಾಜಿ ಶಾಸಕರು..?
ಕೆಲ ದಿನಗಳ ಹಿಂದೆ ಇದೆ ಪಂಚಾಯತ್ ರಾಜ್ ಇಲಾಖೆಯ ಬಹುತೇಕ ಹಗರಣಗಳು ಬಯಲಿಗೆ ಬಂದಿದ್ದವು, ಅವು ಸಹ ಸಾಕ್ಷಾಧಾರ ಸಮೇತ ಅಧಿಕಾರಿಗಳು ವರದಿ ಕೊಟ್ಟಿದ್ದರು, ಈಗ
ಹಾಲಿ ಶಾಸಕ ಬಸವರಾಜ ದಡೆಸೂಗುರು ಮತ್ತು ಮಾಜಿ ಸಚಿವ ಶಿವರಾಜ್ ತಂಗಡಗಿ ಇರ್ವರು ಶಾಸಕರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ಕೊಡುತ್ತಾರೆ, ಯಾವ ಸಮರ, ನಾಂದಿಯಾಗಲಿದೆ, ಎಂದು ಕಾದು ನೋಡಬೇಕಾಗಿದೆ..!?
ಎಸ್,ಹೆಚ್,ಮುಧೋಳ, ಸಂಪಾದಕರು,
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.