ಕೊಪ್ಪಳ ಶಾಸಕ ಹಿಟ್ನಾಳ ಗೆ ಸೊಂಕು ದೃಡ.
ಹಿಂಬಾಲಕರಿಗೆ ಆತಂಕ..!
ತುಂಗಾವಾಣಿ.
ಕೊಪ್ಪಳ: ಜು30, ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ ಗೆ ಕರೊನಾ ಸೊಂಕು ದೃಢಪಟ್ಟಿದೆ, ಕಳೆದ ಎರಡು ದಿನಗಳ ಹಿಂದೆಯಷ್ಟೆ ಶಾಸಕ ಹಿಟ್ನಾಳಗೆ ಸೊಂಕು ತಗುಲಿದೆ ಎಂದು ಕ್ಷೇತ್ರದಾಧ್ಯಂತ ಗಾಳಿ ಸುದ್ದಿ ಹರಡಿತ್ತು, ಈಗ ಸ್ವತಃ ಕೊಪ್ಪಳ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಬಹಿರಂಗ ಪಡಿಸಿದ್ದಾರೆ, ಕೆಲ ದಿನಗಳ ಹಿಂದೆ ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಯವರಿಗೆ ಕರೊನಾ ವೈರಸ್ ಸೊಂಕು ದೃಢಪಟ್ಟಿತ್ತು, ಒಂದು ಕಾರ್ಯಕ್ರಮದಲ್ಲಿ ಪರಣ್ಣ ಮನವಳ್ಳಿ ಯವರ ಜೊತೆಗೆ ಇದ್ದರು ಹಾಗಾಗಿ ಹಿಟ್ನಾಳ ಸ್ವಯಂ ಹೋಮ್ ಕ್ವಾರೆಂಟೈನ್ ಒಳಗಾಗಿದ್ದರು,ಪರೀಕ್ಷೆ ಮಾಡಿಸಲಾಗಿ ಅವರಿಗೆ ಪಾಜಿಟಿವ್ ವರದಿ ದೃಢವಾಗಿದೆ, ಶಾಸಕ ಹಿಟ್ನಾಳ ಕಾರ್ಯಕರ್ತರು ಹಾಗು ಹಿಂಬಾಲಕರಿಗೆ ಆತಂಕ ಶುರುವಾಗಿದೆ..!
ಆತ್ಮೀಯ ಓದುಗರರೇ.
ತುಂಗಾವಾಣಿ ನ್ಯೂಸ್..
ಕರೊನಾ ಸಂಬಂಧಿಸಿದ ಸೊಂಕಿತರ, ಗುಣಮುಖರಾಗಿದ್ದವರ, ಮೃತಪಟ್ಟವರ ಮಾಹಿತಿಯನ್ನು ಕಾಲ ಕಾಲಕ್ಕೆ ತಮ್ಮ ಮುಂದೆ ಸುದ್ದಿ ಬಿತ್ತರಿಸುತ್ತಾ ಬಂದಿದೆ, ನಾವು ನೀಡುವ ಮಾಹಿತಿ ಓದಿ ಯಾರು ಆತಂಕ ಗೊಳ್ಳ ಬೇಡಿ,
ಕರೊನಾ ಸಂದರ್ಭವನ್ನು ಎದುರಿಸುವುದು ಹೇಗೆ, ಸೊಂಕು ಬಂದಾಗ ಏನು ಮಾಡಬೇಕು..? ಇನ್ನೂ ಹಲವು ಮಾಹಿತಿಗಳನ್ನು ನುರಿತ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ, ಹಲವು ವೈದ್ಯರು ಬರೆದಿರುವ ಲೇಖನಗಳನ್ನು ಓದಿ, ಯಾವುದೇ ಕಾರಣಕ್ಕೂ ಆತಂಕಕ್ಕೆ, ಉದ್ವೇಗಕ್ಕೆ ಒಳಗಾಗದಿರಿ, ಗಾಬರಿಗೊಳ್ಳಬೇಡಿ, ಧೈರ್ಯದಿಂದ ಎದುರಿಸಿ, ಕಾಲ ಕಾಲಕ್ಕೆ ಸ್ಯಾನಿಟೈಸರ್ ನಿಂದ ಕೈ ತೊಳೆದುಕೊಳ್ಳುತ್ತಾ, ಮಾಸ್ಕ್ ಧರಿಸಿ ಹೊರಗಡೆ ಬನ್ನಿ, ಸುರಕ್ಷಿತ ಅಂತರ ಕಾಪಾಡಿಕೊಳ್ಳಿ,
ಧೈರ್ಯದಿಂದಲೇ ಕರೊನಾವನ್ನು ಎದುರಿಸೋಣ ಇದು ತುಂಗಾವಾಣಿ ಬಳಗದ ಕಳಕಳಿ..!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ