THO ವಿರುದ್ದ ಆಕ್ರೋಶ. ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮಕ್ಕೆ ಆಗ್ರಹ.

THO ವಿರುದ್ದ ಆಕ್ರೋಶ.
ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮಕ್ಕೆ ಆಗ್ರಹ.

ತುಂಗಾವಾಣಿ
ಗಂಗಾವತಿ:ಜು.5 ಕರೊನಾ ಸೊಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೊಂಕಿತ ಮಹಿಳೆಯನ್ನ ಸರಕಾರಿ ಆಸ್ಪತ್ರೆಯ ಅಂಬುಲೆನ್ಸ್ ನಲ್ಲಿ ಸಾಗಿಸಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು ಚಿಕಿತ್ಸೆ ಕೊಡಬೇಕಾಗಿರುವುದು ಆರೋಗ್ಯ ಇಲಾಖೆ ಅಧಿಕಾರಿಗಳ ಕರ್ತವ್ಯ. ಆದರೆ ಗಂಗಾವತಿ THO (ತಾಲೂಕ ಹೆಲ್ತ್ ಆಫೀಸರ್) ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ‌ ಪಾಸಿಟಿವ್ ಬಂದ ಮಹಿಳೆ ಮನೆಯಿಂದ ಸುಮಾರು ಮೂರ್ನಾಲ್ಕು ಕಿ.ಮೀ ದೂರದಲ್ಲಿರುವ ಗಂಗಾವತಿ ಕೋವಿಡ್-19 ಆಸ್ಪತ್ರೆಗೆ ನಡೆದುಕೊಂಡು ಹೋಗಿ ದಾಖಲಾದ ಘಟನೆ ನಿನ್ನೆ ಗಂಗಾವತಿ ನಗರದಲ್ಲಿ ಜರುಗಿದೆ.
33 ವರ್ಷದ ಮಹಿಳೆಗೆ ಕೋವಿಡ್-19 ಪಾಸಿಟಿವ್ ದೃಢವಾಗಿದ್ದು, ನೀವೆ ಬಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಎಂದು ಸರಕಾರಿ ಆಸ್ಪತ್ರೆಯ ಅಧಿಕಾರಿಗಳು ಮಹಿಳೆಯ ಪತಿಗೆ ಕರೆ ಮಾಡಿ ತಿಳಿಸಿದ್ದಾರೆ. ಒಂದು ವೇಳೆ ಆ್ಯಂಬುಲೆನ್ಸ್ ಮನೆ ಹತ್ತಿರ ಬಂದರೆ ಗಲಾಟೆ ಆಗುತ್ತದೆ, ನೀವೇ ಬಂದು ಆನೆಗೊಂದಿ ರಸ್ತೆಯಲ್ಲಿನ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿ ಎನ್ನುವ ಉದ್ದಟತನದ ಮಾತನ್ನ ಹೇಳಿದ್ದಾರೆ
ಸೋಂಕಿತ ಮಹಿಳೆ ಯಾವುದಾದರ ವಾಹನದಲ್ಲಿ ಹೋದರೆ ಸೊಂಕು ಹರಡುವ ಭೀತಿಯಿಂದ ನಡೆದುಕೊಂಡೆ ಆನೆಗೊಂದಿ ರಸ್ತೆಯಲ್ಲಿನ ಆಸ್ಪತ್ರೆಗೆ ಸೇರಿದ್ದಾರೆ
ಕೋವಿಡ್-19 ಪಾಸಿಟಿವ್ ಬಂದ ಮಹಿಳೆಗೆ ನಡೆದುಕೊಂಡು ಬಂದು ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದ್ದು ಸರಿಯಲ್ಲ. ಎಂದು ಕರವೇ ಜಿಲ್ಲಾಧ್ಯಕ್ಷ ಪರಶುರಾಮ್ ನಾಯಕ ಖಂಡಿಸಿದ್ದಾರೆ. ತುಂಗಾವಾಣಿ ಯೊಂದಿಗೆ ಮಾತನಾಡಿದ DHO ಜಿಲ್ಲಾ ಆರೋಗ್ಯಾಧಿಕಾರಿ ಪಾಸಿಟಿವ್ ಬಂದವರನ್ನು ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಬೇಕು. ಮಹಿಳೆ ನಿವಾಸದಿಂದ ನಡೆದುಕೊಂಡು ಬಂದು ದಾಖಲಾಗಿರುವ ಬಗ್ಗೆ ಪರಿಶೀಲನೆ ಮಾಡಿ ನೋಟೀಸ್ ಜಾರಿ ಮಾಡಲಾಗುವುದು ಎಂದು DHO ತಿಳಿಸಿದ್ದಾರೆ

ಏನೆ ಇರಲಿ
ಕೋವಿಡ್ ಸೋಂಕಿತರನ್ನ ಇತರ ನಡೆಸಿಕೊಂಡ ರೀತಿ ಸರಿಯಲ್ಲ ನಿರ್ಲಕ್ಷ್ಯ ತೋರಿದವರ ವಿರುದ್ದ ಕ್ರಮ ಕೈಗೊಳ್ಳಲಿ ಎಂದು ಪರಶುರಾಮ ನಾಯಕ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Check Also

ಕೊಪ್ಪಳ ಜಿಲ್ಲೆಯಲ್ಲಿ ಇಂದು ಕರೊನಾಗೆ ಮೂರು ಬಲಿ. 139 ಪಾಜಿಟಿವ್ ಪತ್ತೆಯಾಗಿವೆ.!

ಕೊಪ್ಪಳ ಜಿಲ್ಲೆಯಲ್ಲಿ ಇಂದು ಕರೊನಾಗೆ ಮೂರು ಬಲಿ. 139 ಪಾಜಿಟಿವ್ ಪತ್ತೆಯಾಗಿವೆ.! ತುಂಗಾವಾಣಿ. ಕೊಪ್ಪಳ: ಆ,17, ಜಿಲ್ಲೆಯಲ್ಲಿ, ಮತ್ತೆ ಸಾವಿನ …