ಕೊಪ್ಪಳ ಜಿಲ್ಲೆಯ ಜನತೆಗೆ ಮೆಗಾ ಎಕ್ಸಕ್ಲ್ಯೂಜಿವ್ ಸುದ್ದಿ
ಮಾಧ್ಯಮ ಲೋಕದಲ್ಲಿಯೇ ಅತೀ ದೊಡ್ಡ ಕುಟುಕು ಕಾರ್ಯಚರಣೆ
ಕಡುಭ್ರಷ್ಟ ಅಧಿಕಾರಿಯೊಬ್ಬನ ಲಂಚಬಾಕತನದ ಇಂಚಿಂಚು ದೃಶ್ಯಗಳು
ತುಂಗಾವಾಣಿಯ ಖೆಡ್ಡಕ್ಕೆ ಬಿದ್ದ ಲಂಚಕೋರ ಅಧಿಕಾರಿ
ಇಲ್ಲಿನ ಕುರುಡು ಕಾಂಚಾಣದ ನಾಟ್ಯಕ್ಕೆ ನೀವು ಬೆಸ್ತು ಬೀಳುತ್ತೀರಿ
ತುಂಗಾವಾಣಿ.
ಕೊಪ್ಪಳ: ಜಿಲ್ಲೆ ಭ್ರಷ್ಟ ಅಧಿಕಾರಿಗಳ ತವರಿನಂತಾಗಿದೆ. ಪ್ರತಿಯೊಂದರಲ್ಲೂ ಅವ್ಯವಹಾರ, ಭ್ರಷ್ಟಚಾರ, ಲಂಚಬಾಕತನ ತಾಂಡವಾಡುತ್ತಿದೆ. ಇತ್ತೀಚಿಗಷ್ಟೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಪ ವಿಭಾಗ ಅಧಿಕಾರಿಗಳನ್ನು ತರಾತುರಿಯಲ್ಲಿ ವರ್ಗಾವಣೆ ಮಾಡಿ ಕೈತೊಳೆದುಕೊಂಡ ರಾಜ್ಯ ಸರಕಾರ ಭ್ರಷ್ಟ ಅಧಿಕಾರಿಗಳನ್ನು ಮಾತ್ರ ಭರ್ಜರಿ ಲೂಟಿಗೆ ಬಿಟ್ಟು ಕಣ್ಮುಚ್ಚಿ ಕುಳಿತಿದೆ. ಈ ಕುರಿತ ತನಿಖಾ ವರದಿಯನ್ನು ತುಂಗಾವಾಣಿ ಬಿತ್ತರಿಸುತ್ತಿದೆ. ಭ್ರಷ್ಟ ಅಧಿಕಾರಿಗಳ ಕೊಡು-ತೆಗೆದುಕೊಳ್ಳುವಿಕೆಯ ವ್ಯವಹಾರ ಹೇಗಿದೆ ನೀವೇ ಒಮ್ಮೆ ಕಣ್ತುಂಬ ನೋಡಿ…
ಈತ ಕೆ.ಆರ್.ಐ.ಡಿ.ಎಲ್.ನ ಕಾರ್ಯನಿರ್ವಾಹಕ ಅಭಿಯಂತರ. ಅದೆಂತಹ ನಿರ್ಭೀತಿಯ ಮನುಷ್ಯನೆಂದರೆ ನೇರಾ-ನೇರಾವಾಗಿಯೇ ಡೀಲಿಗೆ ಇಳಿದುಬಿಡುತ್ತಾನೆ. ಗುತ್ತಿಗೆದಾರನ ಯೋಗ್ಯತೆ ಈತನ ಲೆಕ್ಕಕ್ಕೆ ಇಲ್ಲ. ಆ ವ್ಯಕ್ತಿ ಗುತ್ತಿಗೆದಾರನೋ, ಇನ್ಯಾರೋ ಎಂಬ ಕನಿಷ್ಠ ಅರಿವು ಕೂಡ ಇಲ್ಲದಂತೆಯೇ ಲೆಕ್ಕಪತ್ರ ಶುರುವಿಟ್ಟುಕೊಳ್ಳುತ್ತಾನೆ. ಈತನಿಗೆ ಮತ್ತು ಈತನ ಪಟಾಲಂಗೆ ಅದೆಷ್ಟು ನೀಡಬೇಕೆಂಬುವುದನ್ನು ಪಿನ್ ಟು ಪಿನ್ ವಿವರಿಸಿ ಹೇಳುವ ಈ ಪುಣ್ಯಾತ್ಮ ಅವೆಲ್ಲವೂ ಸರಕಾರದ ಅಧಿಕೃತ ಮಾರ್ಗಸೂಚಿಗಳೇನೋ ಎಂಬಂತೆ ವಿವರಿಸುತ್ತಾನೆ. ಅಷ್ಟಕ್ಕೂ ಈ ಮಹನೀಯ ಕೇಳುವ ಪರ್ಸೆಂಟೇಜ್ ಎಷ್ಟೆಂಬುವುದನ್ನು ಕೇಳಿದರೆ ಮೂರ್ಛೇ ಹೋಗುತ್ತೀರಿ. ಪ್ರತಿಯೊಂದೂ ಕಾಮಗಾರಿಗೆ ಶೇಕಡಾ 45 ಪರ್ಸೆಂಟ್ ಕೇಳುವ ಈತ ಪ್ರಭಾವಿಗಳ ಹಿಂಭಾಲಕರಿಗೆ ಮಾತ್ರ ಕೇವಲ 40 ಪರ್ಸೆಂಟೇಜ್ ಕೇಳುತ್ತಾನೆ. ಒಂದು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯಲ್ಲಿ 45 ಲಕ್ಷ ಈ ಪುಣ್ಯಾತ್ಮನಿಗೆ ಕೊಟ್ಟರೆ ಉಳಿದ 55 ಲಕ್ಷದಲ್ಲಿ ಗುತ್ತಿಗೆದಾರ ಅದೆಂತಹ ಕಾಮಗಾರಿ ನಿರ್ವಹಿಸಬಹುದು ನೀವೇ ಊಹಿಸಿ.
ಈತನೊಬ್ಬನೇ ಅಷ್ಟೂ ಹಣವನ್ನು ಜೇಬಿಗೆ ಇಳಿಸುವುದಿಲ್ಲವಂತೆ. ನಿಯತ್ತಾಗಿ ಇಲಾಖೆಯ ಮೇಲಿನ ಹಂತದಿಂದ ಹಿಡಿದು ಕೆಳ ಹಂತದ ಪ್ರತಿಯೊಬ್ಬರಿಗೂ ಹಂಚುವ ಹೊಣೆಯೂ ಈತನದ್ದೇ. ಇನ್ನು ಕಾಮಗಾರಿಗಳ ವಿಷಯದಲ್ಲಿ ವರದಿ ನೀಡುವ ಥರ್ಡ್ ಪಾರ್ಟಿಗಳಿಗೂ ಈತನೇ ನಿಭಾಯಿಸುತ್ತಾನಂತೆ. ಅದೆಲ್ಲವನ್ನೂ ಖುಲ್ಲಂ ಖುಲ್ಲಾ ಬಿಡಿಸಿ ಹೇಳುವ ಈತನ ಅವಧಿಯಲ್ಲಿ ನೂರಾರು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳು ನಡೆದಿವೆ ಎಂದರೆ ಈತ ಅದೆಷ್ಟೂ ಲೂಟಿ ಮಾಡಿರಬಹುದು ಮತ್ತು ಆ ಕಾಮಗಾರಿಗಳು ಅದೆಷ್ಟು ಗುಣಮಟ್ಟದ್ದಾಗಿರಬಹುದು ಎಂಬುವುದನ್ನು ನಿಮ್ಮ ತುಂಗಾವಾಣಿ ದಾಖಲೆ ಸಮೇತ ಬಯಲಿಗೆಳೆದಿದೆ. ಇನ್ನಾದರೂ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಜಿಲ್ಲೆಯ ನೂತನ ಉಸ್ತುವಾರಿ ಮಂತ್ರಿಗಳು ಈತನನ್ನು ಮನೆಗೆ ಕಳಿಸುವ ಮನಸ್ಸು ಮಾಡಬೇಕು ಮತ್ತು ಈತನ ಅಧಿಕಾರವಧಿಯಲ್ಲಿ ನಡೆದಂತಹ ಕಾಮಗಾರಿಗಳ ಗುಣಮಟ್ಟದ ಕುರಿತು ತನಿಖೆಯಾಗಬೇಕು. ಇಷ್ಟೇಲ್ಲಾ ದಾಖಲಾತಿಗಳೊಂದಿಗೆ ವರದಿ ಮಾಡುತ್ತಿರುವ ತುಂಗಾವಾಣಿಗೆ ಸಂಬಂಧಿಸಿದ ಜನಪ್ರತಿನಿಧಿಗಳು ಸ್ಪಂದಿಸುತ್ತಾರಾ…? ಬಿಜೆಪಿ ಸರಕಾರ ತಮ್ಮ ಅಧಿಕಾರ ಅವಧಿಯಲ್ಲಿ ಒಬ್ಬೆ ಒಬ್ಬ ಭ್ರಷ್ಟ ಅಧಿಕಾರಿಯನ್ನು ಜೈಲಿಗೆ ಕಳುಹಿಸುವ ಎದೆಗಾರಿಕೆಯನ್ನು ತೋರುತ್ತದೆಯಾ…? ಕಾದುನೋಡಬೇಕು.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.