ವಿಘ್ನ ವಿನಾಶಕನಿಗೆ ಕರೊನಾ ಕಾಟ.
ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾನ ನಿಷೇಧ..!
ತುಂಗಾವಾಣಿ.
ಕೊಪ್ಪಳ, ಆ.13 ಹಿಂದು ಧರ್ಮದಲ್ಲಿ ಪ್ರತಿಯೊಂದು ಕಾರ್ಯಕ್ರಮ ಇರಲಿ ಅಲ್ಲಿ ಮುಂದೆ ಬರುವವನೆ ಗಜಾನನ ಗಣೇಶ ವಿಘ್ನ ವಿನಾಶಕ ವಿನಾಯಕ, ವಿಘ್ನೇಶ್ವರನ ಪೂಜೆ ಆದ ಮೇಲೆನೆ ಮುಂದಿನ ಕಾರ್ಯಕ್ರಮ ಅಲ್ವಾ..?
ಆದರೆ ಈಗ ವಿಘ್ನ ವಿನಾಶಕ ಗಜಾನನನಿಗೂ ಕುತ್ತು ಬಂದಿದೆ, ಕರೊನಾ ಎನ್ನುವ ಹೆಮ್ಮಾರಿ ವಿನಾಯಕನ ಹಬ್ಬವನ್ನು ಸಾರ್ವಜನಿಕ ವಾಗಿ ಆಚರಣೆಗೆ ಅಡ್ಡಗಾಲು ಹಾಕಿದೆ, ಅಷ್ಟು ಪವರ್ ಪುಲ್ ಆಯ್ತು ಕೊರೊನಾ..?
ಹೌದಾ ನಿನ್ನೆ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ಕರೆದು ಕರೊನಾ ಸೋಂಕು ಹರಡುವಿಕೆ ನಿಯಂತ್ರಣ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಬಾರಿಯ ಗೌರಿ-ಗಣೇಶ ಹಬ್ಬದಲ್ಲಿ ಜಿಲ್ಲೆಯಾದ್ಯಂತ ಸಾರ್ವಜನಿಕ ಗಣೇಶ ಪ್ರತಿಷ್ಠಾನವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುರಳ್ಕರ್ ಆದೇಶಿಸಿದ್ದಾರೆ,
ಗೌರಿ-ಗಣೇಶ ಹಾಗೂ ಮೊಹರಂ ನಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ಪಾಲ್ಗೊಳ್ಳುವುದರಿಂದ ಸೋಂಕು ಹರಡುವಿಕೆ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಕಡ್ಡಾಯ ಮಾಸ್ಕ್ ಧಾರಣೆಯಂತಹ ಸೂಚನೆಗಳನ್ನು ನೀಡಿದರೂ ಹೆಚ್ಚಿನ ಜನರು ಭಾಗವಹಿಸುವುದರಿಂದ ನೂಕು ನುಗ್ಗಲು ಉಂಟಾಗುವ ಸಂಭವವಿರುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಹಾಗೂ ಮೊಹರಂ ಹಬ್ಬಗಳನ್ನು ನಿಷೇಧಿಸಲಾಗಿದೆ, ಸಾರ್ವಜನಿಕರು ವೈಯಕ್ತಿಕವಾಗಿ ಹೆಚ್ಚು ಜನರು ಸೇರದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ತಮ್ಮ ಮನೆಗಳಲ್ಲಿಯೇ ಗಣೇಶ ಪ್ರತಿಷ್ಠಾಪನೆ ಹಾಗೂ ಮೊಹರಂ ಹಬ್ಬವನ್ನು ಆಚರಣೆ ಮಾಡಬಹುದು. ಜಿಲ್ಲೆಯ ಎಲ್ಲಾ ಸಾರ್ವಜನಿಕ ಗಣೇಶ ಪ್ರತಿಷ್ಠಾನ ಮಂಡಳಿಯವರು ಜಿಲ್ಲಾಡಳಿತದ ಆದೇಶವನ್ನು ಪಾಲಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು,
ಈ ಸಭೆಯಲ್ಲಿ ಅನೇಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.