ಜಾಲತಾಣದಲ್ಲಿ ಜಾನಪದ.
ತುಂಗಾವಾಣಿ
ಕೊಪ್ಪಳ ಜುಲೈ 07 ಸಾಮಾಜಿಕ ಜಾಲತಾಣವನ್ನು ಹೀಗೂ ಉಪಯೋಗಿಸಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ದಿ 08-07-20 ರಂದು ಸಂಜೆ 4 ಗಂಟೆಗೆ ZOOM app ನಲ್ಲಿ “ಜನಪದರ ಗ್ರಹಿಕೆಯಲ್ಲಿ ತವರಿನ ಪರಿಕಲ್ಪನೆ” ಎಂಬ ವಿಷಯದ ಕಾರ್ಯಕ್ರಮವನ್ನು ಕನ್ನಡ ಜಾನಪದ ಪರಿಷತ್ ಜಾನಪದ ಯುವ ಬ್ರಿಗೇಡ್ ಬೆಂಗಳೂರ್ ರವರು ಆಯೋಜಿಸಿದ್ದಾರೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎಸ್ ಬಾಲಾಜಿ ರಾಜ್ಯಾಧ್ಯಕ್ಷರು ಕನ್ನಡ ಜಾನಪದ ಪರಿಷತ್ ರವರು ವಹಿಸಿಕೊಳ್ಳಲಿದ್ದು ಉದ್ಘಾಟನೆ ಯನ್ನು ಡಾ.ಮುಮ್ತಾಜ್ ಬೇಗಂ ಸಹಾಯಕ ಪ್ರಾಧ್ಯಾಪಕರು ಎಸ್ ಕೆ ಎನ್ ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಂಗಾವತಿ ರವರು ಮಾಡಲಿದ್ದಾರೆ ಮುಖ್ಯ ಅತಿಥಿಗಳಾಗಿ ಡಾ.ಪುಷ್ಪ ಜಿಲ್ಲಾಧ್ಯಕ್ಷರು ಕನ್ನಡ ಜಾನಪದ ಪರಿಷತ್ ಬೆಂಗಳೂರು ಗ್ರಾಮಾಂತರ ಹಾಗು ಶಾಂತಕುಮಾರ್ ಜಿಲ್ಲಾಧ್ಯಕ್ಷರು ಕನ್ನಡ ಜಾನಪದ ಪರಿಷತ್ ಗದಗ ರವರು ಭಾಗವಹಿಸಲಿದ್ದಾರೆ.
Zoom app ನಲ್ಲಿ meeting Id 74660034412 ಹಾಗು password 12345 ಹಾಕಿ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಬಹುದಾಗಿದೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ