ಚಿತ್ರನಟ ಜಿರಂಜೀವಿ ಸರ್ಜಾ ಇನ್ನಿಲ್ಲ.
ಬೆಂಗಳೂರು: ವಾಯುಪುತ್ರ ಚಿತ್ರ ದೊಂದಿಗೆ ಸ್ಯಾಂಡಲ್ ಹುಡ್ ಗೆ ಎಂಟ್ರಿ ಮಾಡಿ ಇಪ್ಪತ್ತೆರಡಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ತನ್ನದೇ ಛಾಪು ಮೂಡಿಸಿದ್ದ ಚಿರಂಜೀವಿ ಸರ್ಜಾ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿದಿವಶರಾದರು.
ಹೃದಯಾಘಾತವಾಗಿ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು
40 ವರ್ಷ ವಯಸ್ಸಿನ ಚಿರಿಂಜೀವಿ 2018 ರಲ್ಲಿ ನಟಿ ಮೆಘನಾ ರಾಜ್ ಜೊತೆ ಮದುವೆಯಾಗಿದ್ದರು.
ಸಹೊದರ ಮಾವ ಅರ್ಜುನ ಸರ್ಜಾ ಜೊತೆ ಸಹಾಯಕ ನಿರ್ದೇಶಕರಾಗಿ 2006 ರಿಂದ ಕನ್ನಡ ಚಿತ್ರ ರಂಗದಲ್ಲಿ ಪ್ರವೇಶಿಸಿ ಉತ್ತಮ ನಟನಾಗಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರು ಈಗ ಏಕಾಎಕಿ ನಿರ್ಗಮಿಸಿದ್ದು ಕನ್ನಡ ಚಿತ್ರಲೋಕಕ್ಕೆ ನುಂಗಲಾರದ ತುತ್ತಾಗಿದೆ.
ಚಿತ್ರರಂಗದ ಬಹುತೇಕ ಗಣ್ಯರು ತಮ್ಮ ಕಂಬನಿ ಮಿಡಿದಿದ್ದಾರೆ