ಕೊಪ್ಪಳ : ವ್ಯಕ್ತಿಗೆ ಚಪ್ಪಲಿ ಮೆರವಣಿಗೆ.
ಕಾರಣ ಕೇಳಿದರೆ ದಂಗಾಗುತ್ತೀರಿ.!
ತುಂಗಾವಾಣಿ
ಕೊಪ್ಪಳ ಡಿ 15 ಮಹಿಳೆಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯೋರ್ವನನ್ನು ಗ್ರಾಮಸ್ಥರು ಚಪ್ಪಲಿಹಾರ ಹಾಕಿ ಗ್ರಾಮದ ರಸ್ತೆಯಲ್ಲಿ ಮೆರವಣಿಗೆ ಮಾಡಿದ ಘಟನೆ ಕುಷ್ಟಗಿ ತಾಲೂಕಿನ ಹನುಮಸಾಗರ ಠಾಣೆ ವ್ಯಾಪ್ತಿಯ ಬೊಮ್ಮನಾಳ ಗ್ರಾಮದಲ್ಲಿ ದಿ 13-12-2021 ರಂದು ನಡೆದಿದೆ.
ಬೊಮ್ಮನಾಳ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಪಕ್ಕದ ಹೊಲದ ಪ್ರಕಾಶ ತಂದೆ ರಂಗಪ್ಪ ಪೂಜಾರ ಎಂಬ ವ್ಯಕ್ತಿಯು ಗೊಬ್ಬರದ ಪುಟ್ಟಿಯನ್ನು ಎತ್ತಿಕೊಡಲು ಹತ್ತಿರ ಕರೆದು ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದಾನೆ, ಮಹಿಳೆಯ ಕೂಗಾಟ ಕೇಳಿದ ಗ್ರಾಮಸ್ಥರು ಮಹಿಳೆಯನ್ನು ವ್ಯಕ್ತಿಯಿಂದ ರಕ್ಷಿಸಿ ಧರ್ಮದೇಟು ನೀಡಿ ಕೊರಳಿಗೆ ಚಪ್ಪಲಿಹಾರ ಹಾಕಿ ಚಪ್ಪಲಿಯಿಂದ ಹೊಡೆಯುತ್ತಾ ಗ್ರಾಮದ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ. ಚಪ್ಪಲಿಹಾಕಿ ಮೆರವಣಿಗೆ ಮಾಡುತ್ತಿರುವ ದೃಶ್ಯಾವಳಿ ತುಂಗಾವಾಣಿಗೆ ಲಭ್ಯವಾಗಿದೆ.
ಈ ಸಂಬಂದವಾಗಿ ಹನುಮಸಾಗರ ಪೋಲಿಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು ಅತ್ಯಾಚಾರಕ್ಕೆ ಒಳಗಾಗುತ್ತಿದ್ದ ಮಹಿಳೆಯು ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿದ್ದರೆ, ಆರೋಪಿತನ ಹೆಂಡತಿ ಪಾರ್ವತೆಮ್ಮ ಗಂ ರಂಗಪ್ಪ ಕ್ಷುಲ್ಲಕ ಕಾರಣಕ್ಕೆ ತನ್ನ ಗಂಡನನ್ನು ಹೊಡಿಬಡಿ ಮಾಡಿ ಚಪ್ಪಲಿ ಮೆರವಣಿಗೆ ಮಾಡಿದ್ದಾರೆ ಎಂದು ಜಾತಿ ನಿಂದನೆ ಹಾಗು ಇತರೆ ಕಲಂ ನಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಎರಡು ಪ್ರಕರಣದಲ್ಲಿ ಸುಮಾರು 55 ಜನರ ಮೇಲೆ ವಿವಿದ ಕಲಂ ಅಡಿ ಪ್ರಕರಣ ದಾಖಲಾಗಿದ್ದು ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.