ಕುರಿ ಕದ್ದು ಬಕ್ರಾ ಆದ ಕಳ್ಳರು..!
ತುಂಗಾವಾಣಿ
ಕೊಪ್ಪಳ ಜೂ 13 ಕೊಪ್ಪಳದ ಚಿಲವಾಡಿಗಿ ಮಲ್ಲೇಶ ಕಂಬಳಿ ಎಂಬ ಕರಿಗಾಹಿಯು ದೇವಲಾಪುರ ಸೀಮೆಯಲ್ಲಿ ತನ್ನ ಕುರಿ ಹಿಂಡನ್ನು ಮೇಯಲು ಬಿಟ್ಟು ಮಧ್ಯಾನ್ಹದ ಸಮಯದಲ್ಲಿ ನಿದ್ದೆಗೆ ಜಾರಿದ್ದಾನೆ ಆ ಅವಕಾಶದ ಲಾಭ ಪಡೆದ ಧಾರವಾಡ ಜಿಲ್ಲೆಯ ಅಳಗವಾಡಿಯ ಅಣ್ಣಪ್ಪ ಹರಿಣಶಿಕಾರಿ, ತಿರ್ಲಾಪುರದ ರವಿ ಮದನ್ನವರ್ ಕೊಪ್ಪಳ ಜಿಲ್ಲೆಯ ಮಾಳೆಕೊಪ್ಪದ ಮನೋಜ ಹರಿಣಶಿಕಾರಿ ಹಾಗೂ ಕಲ್ಲಪ್ಪ ಹರಿಣಶಿಕಾರಿ ಎಂಬ ಕಳ್ಳ ಕುರಿಹಿಂಡಿನಲ್ಲಿದ್ದ ರೂ 1.56 ಲಕ್ಷ ಮೌಲ್ಯದ 28 ಕುರಿ 2 ಟಗರು ಹಾಗು 12 ಆಡುಗಳನ್ನು ಹೊತ್ತೈದಿದ್ದಾರೆ.
ನಿದ್ದೆಯಿಂದೆದ್ದ ಕುರಿಗಾಹಿ ಮಲ್ಲೇಶ ತಕ್ಷಣ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
ಖಚಿತ ಮಾಹಿತಿ ಮೇರೆಗೆ ಕೊಪ್ಪಳ ಜಿಲ್ಲಾವರಿಷ್ಠಾಧಿಕಾರಿಗಳಾದ ಸಂಗೀತ, ಡಿವೈಎಸ್ಪಿ ವೆಂಕಟಪ್ಪ ನಾಯಕ ರವರ ಮಾರ್ಗದರ್ಶನದಲ್ಲಿ ಗ್ರಾಮೀಣ ಸಿಪಿಐ ರವಿ ಉಕ್ಕುಂದ ನೇತೃತ್ವದಲ್ಲಿ ಪಿಎಸ್ಐ ಸುರೇಶ್ ಮತ್ತು ತಂಡ ಕುಕನೂರು ಬಳಿಯ ವಿನಾಯಕ ಪೆಟ್ರೋಲ್ ಬಂಕ್ ಹತ್ತಿರ ದಾಳಿ ಮಾಡಿ ಕದ್ದ ಕುರಿಗಳನ್ನು ವಶಪಡಿಸಿಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಜಿಲ್ಲೆಯ ಅನೇಕ ಕಡೆ ಆಡು ಕುರಿಗಳನ್ನು ಕಳ್ಳತನ ಮಾಡಿದ್ದು ಒಪ್ಪಿಕೊಂಡಿದ್ದು ಹನುಮಸಾಗರದ ಪೋಲಿಸ್ ಠಾಣೆಯಲ್ಲಿಯೂ ಸಹ ಇವರ ಮೇಲೆ ಪ್ರಕರಣ ದಾಖಲಾಗಿದ್ದು ತಿಳಿದುಬಂದಿದೆ.
ಒಟ್ಟಿನಲ್ಲಿ ಕುರಿಗಳನ್ನು ಕದ್ದು ಮೋಜು ಪಾರ್ಟಿ ಮಾಡುವ ಸಂಚಿನಲ್ಲಿದ್ದ ಕಳ್ಳ ಖದೀಮರು ಕೊಪ್ಪಳ ಜಿಲ್ಲಾ ಪೋಲಿಸರ ತೀರ್ವ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದು ಬಕ್ರಾ ಆಗಿ ಸದ್ಯ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.