ಕೋಮು ವೈಶಮ್ಯ ಬಿತ್ತಿದ ಮೋದಿ!
ಗಂಗಾವತಿ ಠಾಣೆಯಲ್ಲಿ ಪ್ರಕರಣ ದಾಖಲು.
ತುಂಗಾವಾಣಿ ಕೊಪ್ಪಳ . ಅ -01 ಕೋಮು ವೈಶಮ್ಯ ಸೃಷ್ಟಿಸಿ ಜಿಲ್ಲೆಯ ಶಾಂತಿಭಂಗ ಮಾಡಲು ಯತ್ನಿಸಿದ ಮಧುಗಿರಿ ಮೋದಿ ಅಲಿಯಾಸ್ ಅತುಲ್ ಕುಮಾರ್ ಸಭರವಾಲ ಎಂಬ ವ್ಯಕ್ತಿಯ ಮೇಲೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿನ್ನೆ ದಿ 30-09-21 ರಂದು ತುಮಕೂರು ಜಿಲ್ಲೆಯ ಮಧುಗಿರಿಯ ನಿವಾಸಿಯಾದ ತನ್ನನ್ನು ತಾನು ಪ್ರಧಾನ ಮಂತ್ರಿ ಮೋದಿಯ ಪರಮ ಭಕ್ತನೆಂದು ಹೇಳಿ ಕೊಳ್ಳುವ ಮಧುಗಿರಿ ಮೋದಿ ಎಂದು ಪ್ರಚಲಿತದಲ್ಲಿರುವ ಅತುಲ್‌ಕುಮಾರ ಗಂಗಾವತಿ ತಾಲೂಕಿನ ಶೃಧ್ಧಾ ಕೇಂದ್ರವಾದ ಆಂಜನೇಯ ಹುಟ್ಟಿದ ಪವಿತ್ರ ಸ್ಥಳವಾದ ಆಂಜನಾದ್ರಿ ದೇವಸ್ಥಾನಕ್ಕೆ ಬಂದು ಅಂಜನಾದ್ರಿ ಬೆಟ್ಟದ ರಸ್ತೆಯ ಅಕ್ಕಪಕ್ಕದಲ್ಲಿರುವ ಅಂಗಡಿ ಕಾರರನ್ನುದ್ದೇಶಿಸಿ ಕೋಮು ವೈಷಮ್ಯ ಪ್ರೇರಿತ ಭಾಷಣ ಮಾಡಿ ಅದನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ವಿಕೃತಿ ಮೆರೆದಿದ್ದಾನೆ, ಇಂದು ಮಧುಗಿರಿ ಮೋದಿ ಅಲಿಯಾಸ್ ಅತುಲಕುಮಾರನ ಕೋಮು ವೈಷಮ್ಯದ ವಿಡಿಯೋ ವೈರಲ್ ಆಗಿದ್ದು ಗಂಗಾವತಿ ತಹಶಿಲ್ದಾರ ಎಂ ನಾಗರಾಜ ರವರಿಗೆ ವಿಷಯ ತಿಳಿದಿದ್ದು ಜಿಲ್ಲೆಯಲ್ಲಿ ಧಾರ್ಮಿಕ ಭಾವನೆಗಳಿಗೆ ದಕ್ಕೆತಂದು ಜಾತಿ ವರ್ಗಗಳ ಮಧ್ಯೆ ವೈಷಮ್ಯ ತಂದು ಸಾರ್ವಜನಿಕರ ಕೆಡುಕಿಗೆ ಕಾರಣವಾಗುವ ರೀತಿಯಲ್ಲಿ ಹೇಳಿಕೆ ನೀಡುತ್ತಾ ಶಾಂತಿಭಂಗ ಮಾಡುವ ಉದ್ಧೇಶದಿಂದ ವಿಡಿಯೋ ಮಾಡಿ ವೈರಲ್ ಮಾಡಿದ್ದಕ್ಕಾಗಿ ಮಧುಗಿರಿ ಮೋದಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಗಂಗಾವತಿ ಗ್ರಾಮೀಣ ಠಾಣೆಯಲ್ಲೆ ತಹಶೀಲ್ದಾರ ಎಂ ನಾಗರಾಜ ಪ್ರಕರಣ ದಾಖಲಿಸಿದ್ದಾರೆ.
ಪೋಲಿಸರು ಮಧುಗಿರಿ ಮೋದಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿಯನ್ನು ಬಂಧಿಸಿಲ್ಲ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದುರಿ.