ಭೀಕರ ರಸ್ತೆ ಅಪಘಾತ
ಸ್ಥಳದಲ್ಲೇ ಸವಾರ ದುರ್ಮರಣ.!
ತುಂಗಾವಾಣಿ.
ಗಂಗಾವತಿ: ಆ-24 ತಾಲೂಕಿನ ಅರಳಹಳ್ಳಿ & ಸುಳೆಕಲ್ ಗ್ರಾಮಗಳ ಮಧ್ಯ ಭಾಗದ ರಾಜ್ಯ ಹೆದ್ದಾರಿಯಲ್ಲಿ ಸ್ವಿಫ್ಟ್ ಕಾರ್ ಮತ್ತು ಹೊಂಡಾ ಸೈನ್ ವಾಹನಗಳ ಮಧ್ಯ ಭೀಕರ ರಸ್ತೆ ಅಪಘಾತ ಸಂಬಂಧಿಸಿದ್ದು ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ-10 ರ ಸಮಯದಲ್ಲಿ ನಡೆದಿದೆ.
ಯಲಬುರ್ಗಾ ತಾಲೂಕಿನ ವಡ್ಡರಕಲ್ ಪಕ್ಕದ ಕಟ್ಟಗಿಹಳ್ಳಿ ಗ್ರಾಮದ ಹನುಮೇಶ (29) ಮೃತ ದುರ್ದೈವಿ. ಆಟೋಮೊಬೈಲ್ಸ್ ಸಾಮಾನುಗಳನ್ನು ತರಲು ಗಂಗಾವತಿ ನಗರಕ್ಕೆ ಬಂದಿದ್ದು. ವಾಪಸ್ಸು ತೆರಳುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದ್ದು ವೇಗದ ಚಾಲನೆ ಮಾಡಿದ ಸವಾರರು. ಡಿಕ್ಕಿ ರಭಸಕ್ಕೆ ದ್ವಿಚಕ್ರ ವಾಹನದ ಮುಂಭಾಗದ ಚಕ್ರ. ಕಾರಿನ ಒಳಗಡೆ ಸಿಲುಕಿದ್ದು ಬೈಕ್ ಸವಾರನು ಮೂವತ್ತು ಮೀಟರ್ ದೂರದಲ್ಲಿ ಬಿದ್ದು ಸ್ಥಳದಲ್ಲೇ ಸಾವನಪ್ಪದ್ದಾನೆ. ಕುಟುಂಬಸ್ಥರು ಕನಕಗಿರಿ ಸಮುದಾಯ ಕೇಂದ್ರಕ್ಕೆ ಆಗಮಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ಥಳಕ್ಕೆ: ಗಂಗಾವತಿ ಸಿ.ಪಿ.ಐ.ಉದಯರವಿ ರವರು ಆಗಮಿಸಿದ್ದು ಅಪಘಾತದ ಮಾಹಿತಿ ಪಡೆದು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ