ರಾಜಕೀಯ ಮಾಡುತ್ತಿದ್ದಾರೆ ಪ್ರಭಾರಿ ಈ.ಓ. ಪಶುವೈದ್ಯ ಡಾ.ಮೋಹನ.!?
ಅಷ್ಟಕ್ಕೂ ಇ,ಓ ಮಾಡಿದ್ದೆನು.!?
ತುಂಗಾವಾಣಿ.
ಗಂಗಾವತಿ: ಪೆ-20 ತಾಲ್ಲೂಕಿನ ತಾಲ್ಲೂಕು ಪಂಚಾಯತನ ಪ್ರಭಾರಿ ಕಾರ್ಯ ನಿರ್ವಾಹಕ ಅಧಿಕಾರಿ ವೆಂಟೆನೆರಿ ಡಾಕ್ಟರ್ ಮೋಹನ ರವರು ರಾಜಕೀಯ ಮಾಡುತ್ತಿದ್ದಾರೆ ಎಂದು CPIM ಜಿಲ್ಲಾ ಕಾರ್ಯದರ್ಶಿ ನಾಗರಾಜ ಆರೋಪ ಮಾಡಿದ್ದಾರೆ,
ಇಂದು ಪಕ್ಕದ ಕಾರಟಗಿ ಪಟ್ಟಣದಲ್ಲಿ ಬಿಜೆಪಿ ಪಕ್ಷ ಆಯೋಜಿಸಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಅಭಿನಂದನಾ ಬೃಹತ್ ಸಮಾವೇಶ ಮತ್ತು ಮಾಜಿ ಸಚಿವ ಶಿವರಾಜ್ ತಂಗಡಗಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಇದಕ್ಕೆ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಕಳುಹಿಸದೆ ರಾಜಕೀಯ ಪಕ್ಷಗಳು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲು ಗಂಗಾವತಿ ತಾಲ್ಲೂಕು ಪಂಚಾಯತ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಪಶುವೈದ್ಯ ಡಾಕ್ಟರ್ ಮೋಹನ ಮೌಖಿಕವಾಗಿ ಎಲ್ಲಾ ಗ್ರಾಮ ಪಂಚಾಯತಿ PDO ಗಳಿಗೆ ಆದೇಶ ನೀಡಿದ್ದಾರೆ NMR ಚಾಲ್ತಿಯಲ್ಲಿರುವ ಕೂಲಿ ಕಾರ್ಮಿಕರನ್ನು ರಾಜಕೀಯ ಪಕ್ಷಗಳ ಕಾರ್ಯಕ್ರಮಕ್ಕೆ ಕಳುಹಿಸಿದ್ದು ಇಂದು ಯಾವ ಗ್ರಾಮ ಪಂಚಾಯತಿ ಯಲ್ಲೂ ಸಹ ಉದ್ಯೋಗಕ್ಕೆ ಕಳುಹಿಸದೆ ರಾಜಕೀಯ ಪಕ್ಷಗಳ ಕಾರ್ಯಕ್ರಮಕ್ಕೆ ಕಳುಹಿಸಿದ್ದು ಆಡಳಿತ ಪಕ್ಷದ ಜೊತೆಗೆ ರಾಜಕೀಯ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ ಗಂಗಾವತಿ ಇಓ ಡಾಕ್ಟರ್ ಮೋಹನ ವಿರುದ್ಧ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದ್ದಾರೆ,
“ಅನೇಕ ವರ್ಷಗಳಿಂದ ಠಿಕಾಣಿ ಹೂಡಿದ ಡಾಕ್ಟರ್ ಮೋಹನ, ಇವರು ಮೂಲತಃ ಪಶುವೈದ್ಯ ಆದರೆ ರಾಜಕೀಯ ಪಕ್ಷಗಳ ಬೆಂಬಲದಿಂದ ರಾಜಕಾರಣಿಗಳ ಒಲೈಸಿ ತಾಲ್ಲೂಕು ಪಂಚಾಯತ ಯಲ್ಲೇ ಠಿಕಾಣಿ ಹೂಡಿದ ಇಓ ಮತ್ತೆ ತಮ್ಮ ಸ್ವ ಸ್ಥಾನಕ್ಕೆ ಹೋಗುವ ಮನಸ್ಸು ಮಾಡುತ್ತಿಲ್ಲ ಎಂದರೆ ಅರ್ಥೈಸಿಕೊಳ್ಳಿ, ಈ ಡಾಕ್ಟರ್ ಮೋಹನ ಗೆ ರಾಜಕೀಯ ಪವರ್ ಮತ್ತು ಮೇಲಾಧಿಕಾರಿಗಳನ್ನು ಮಸ್ತ್ ಮೆಂಟೆನ್ ಮಾಡುತ್ತಾ ಅದೇ (ಪ್ರಭಾರಿ ಇಓ) ಸ್ಥಾನದಲ್ಲಿ ಮುಂದೊರೆಯಲು ಸಾಕಷ್ಟು ಪ್ರಯತ್ನ ನಡೆಸುತ್ತಿರುವುದು ಕಂಡು ಬರುತ್ತಿದೆ” ಎಂದು ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಮಾತನಾಡಿಕೊಳ್ಳುತ್ತಿದ್ದಾರೆ .!?
ಈ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿಯ ಇನ್ನಷ್ಟು ಕಹಾನಿಗಳು ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ.!
ತುಂಗಾವಾಣಿ ಇದು ಸತ್ಯ-ಸಮರ