ಸ್ಕೂಟಿಗೆ ಟ್ಯಾಕ್ಟರ್ ಡಿಕ್ಕಿ ಸ್ಥಳದಲ್ಲೆ ವ್ಯಕ್ತಿ ಸಾವು..!
ತುಂಗಾವಾಣಿ.
ಕೊಪ್ಪಳ: ಆ14,ಜಿಲ್ಲೆಯ ಗಂಗಾವತಿ ನಗರ ವ್ಯಾಪ್ತಿಯಲ್ಲಿ ಬರುವ ವಿದ್ಯಾನಗರದ ಬಳಿ ಅಡಿಗಾಸ್ ಹೋಟೆಲ್ ಹತ್ತಿರ ಟ್ಯಾಕ್ಟರ್ ಮತ್ತು ಸ್ಕೂಟಿ ನಡುವೆ ರಸ್ತೆ ಅಪಘಾತ ನಡೆದಿದ್ದು ಸ್ಥಳದಲ್ಲೆ ವ್ಯಕ್ತಿ ಸಾವನ್ನಪ್ಪಿದ್ದ ಘಟನೆ ನಡೆದಿದೆ,
ಗಂಗಾವತಿ ನಗರದ ಹಿರೇ ಜಂತಕಲ್ ಪಂಪಾಪತಿ ಗುಡಿ ಹತ್ತಿರದ ನಿವಾಸಿ ಮಹೆಬೂಬು ಸಾಬ (63) ಇವರು ಗಂಗಾವತಿಯ ಖಾಸಗಿ ಸಮೃದ್ಧಿ ಬ್ಯಾಂಕ್ ನಲ್ಲಿ ಪಿಗ್ಮಿ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಪ್ರತಿ ದಿನದಂತೆ ನಗರದ ಹತ್ತಿರ ವಿರುವ ವಿದ್ಯಾನಗರದಲ್ಲಿ ಪಿಗ್ಮಿ ಕಲೆಕ್ಷನ್ ಮಾಡಲು ಹೋದ ಸಮಯದಲ್ಲಿ ಸ್ಕೂಟಿ ಮತ್ತು ಟ್ಯಾಕ್ಟರ್ ನಡುವೆ ಅಪಘಾತದಲ್ಲಿ ವ್ಯಕ್ತಿ ಸ್ಥಳದಲ್ಲೆ ಸಾವನಪ್ಪಿದ್ದಾರೆ, ಟ್ಯಾಕ್ಟರ್ ಚಾಲಕ ತನ್ನ ವಾಹನ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ,
ಸ್ಕೂಟಿ ನಂ: KA37-S2387 ಮತ್ತು
ಟ್ಯಾಕ್ಟರ್ ನಂಬರ್: KA36-TC5957 ಆದರೆ ಟ್ಯ್ರಾಲಿ ನಂಬರ್ ಇರುವುದಿಲ್ಲ
ಸ್ಥಳಕ್ಕೆ ಗ್ರಾಮೀಣ ಪೋಲಿಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಮುಂದಿನ ತನಿಖೆ ನಡೆಸಿದ್ದಾರೆ,
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.