ಕೊಪ್ಪಳ, ಕ್ರೂರಿ ಕರೊನಾ ವೈರಸ್ ಗೆ ಬಿಜೆಪಿ ಮುಖಂಡ ಸೇರಿ ಮೂವರು ಬಲಿ.
ಸಾವಿನ ಸಂಖ್ಯೆ:29 ಕ್ಕೆ ಏರಿಕೆ.
ತುಂಗಾವಾಣಿ.
ಕೊಪ್ಪಳ:ಆ,2, ಜಿಲ್ಲೆಯಲ್ಲಿ ಕ್ರೂರಿ ಕರೊನಾ ತನ್ನ ಅಟ್ಟಹಾಸ ಮುಂದುವರೆಸಿದೆ, ಜಿಲ್ಲೆಯಲ್ಲಿ ಇಂದು ಬಿಜೆಪಿ ಹಿರಿಯ ಮುಖಂಡ ಸೇರಿ ಮೂವರನ್ನು ಬಲಿ ತೆಗೆದುಕೊಂಡಿದೆ,
ಕೊಪ್ಪಳ ತಾಲ್ಲೂಕಿನ ಬೆಟಗೇರಿ ಗ್ರಾಮದ ನಿವಾಸಿ 58 ವರ್ಷದ ವ್ಯಕ್ತಿ ಕರೊನಾ ಸೊಂಕಿಗೆ ಮೃತಪಟ್ಟಿರುತ್ತಾರೆ,
ಯಲಬುರ್ಗಾ ತಾಲ್ಲೂಕಿನ ಮಂಡಲಮರಿ ಗ್ರಾಮದ ನಿವಾಸಿ 70 ವರ್ಷದ ವೃದ್ಧ ಕರೊನಾ ಸೊಂಕಿಗೆ ಇಂದು ಬೆಳಿಗ್ಗೆ ಮೃತಪಟ್ಟಿರುತ್ತಾರೆ,
ಗಂಗಾವತಿ ನಗರದ ಬಿಜೆಪಿಯ ಹಿರಿಯ ಮುಖಂಡ ಸೋಮಶೇಖರಗೌಡ (54) ಕರೊನಾ ಪಾಜಿಟಿವ್ ಗೆ ಮೃತಪಟ್ಟಿರುವುದು ದೃಢಪಟ್ಟಿದೆ, ಎಂದು ವಾಣಿಜ್ಯೋದ್ಯಮಿ ಸಿಂಗನಾಳ ಪಂಪಾಪತಿಯವರು ತುಂಗಾವಾಣಿಗೆ ತಿಳಿಸಿದ್ದಾರೆ ಗಂಗಾವತಿ ನಗರದ ಪ್ರತಿಷ್ಟಿತ ಕುಟುಂಬದ ವ್ಯಕ್ತಿ ಬಿಜೆಪಿಯ ಹಿರಿಯ ಮುಖಂಡ ನೇರ ನಿಷ್ಠುರವಾಗಿ ಮಾತನಾಡುತ್ತಿದ್ದ ವ್ಯಕ್ತಿ ಸೋಮಶೇಖರಗೌಡ ಗಂಗಾವತಿಯಲ್ಲಿ ಬಿಜೆಪಿ ನೆಲೆಯೂರಲು ಇವರ ಕೊಡುಗೆಯು ಬಹಳಷ್ಟು ಇದೆ, ಹಾಗೆಯೇ ಮುಖ್ಯಮಂತ್ರಿ ಯಡಿಯೂರಪ್ಪರ ಜಗದೀಶ್ ಶೆಟ್ಟರ್ ಗೋವಿಂದ ಕಾರಜೋಳ ಇನ್ನೂ ಅನೇಕ ಬಿಜೆಪಿ ನಾಯಕರ ಜೊತೆ ನೇರ ಸಂಪರ್ಕವಂದಿದ್ದರು ಅವರ ಸಾವು ಬಿಜೆಪಿಗೆ ಹಾಗು ನಮ್ಮ ಸ್ನೇಹಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಾಣಿಜ್ಯೋದ್ಯಮಿ ಪಂಪಾಪತಿ ಸಿಂಗನಾಳ,ಹಾಗು ರೈತ ಮುಖಂಡ ವಕೀಲ ತಿಪ್ಪೇರುದ್ರಸ್ವಾಮಿ ತೀರ್ವ ಸಂತಾಪ ವ್ಯಕ್ತಪಡಿಸಿದರು.!
ಜಿಲ್ಲೆಯಲ್ಲಿ ಇಂದು ಮೂವರ ಬಲಿಯೊಂದಿಗೆ ಒಟ್ಟು ಸಾವಿನ ಸಂಖ್ಯೆ: 29 ಕ್ಕೆ ಏರಿಕೆಯಾಗಿದೆ..!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.