ಕೊಪ್ಪಳ ಜಿಲ್ಲೆಯಲ್ಲಿಂದು ಪತ್ತೆಯಾದ ಪ್ರಕರಣಗಳೆಷ್ಟು..? ಗಂಗಾವತಿ ಯಲ್ಲಿ ಭರ್ಜರಿ ರನ್ ಬಾರಿಸಿದ ಕೋವಿಡ್..! ಕೌರವನ ಶ್ರೀಮತಿ ಸೇರಿ ಐದು ಜನರಿಗೆ ಸೊಂಕು ದೃಡ.!

ಕೊಪ್ಪಳ ಜಿಲ್ಲೆಯಲ್ಲಿಂದು ಪತ್ತೆಯಾದ ಪ್ರಕರಣಗಳೆಷ್ಟು..?
ಗಂಗಾವತಿ ಯಲ್ಲಿ ಭರ್ಜರಿ ರನ್ ಬಾರಿಸಿದ ಕೋವಿಡ್..!
ಕೌರವನ ಶ್ರೀಮತಿ ಸೇರಿ ಐದು ಜನರಿಗೆ ಸೊಂಕು ದೃಡ.!

ತುಂಗಾವಾಣಿ.
ಕೊಪ್ಪಳ: ಜುಲೈ,31 ಜಿಲ್ಲೆಯಲ್ಲಿ ಇಂದು 98 ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ, ಇದರೊಂದಿಗೆ ಕೊಪ್ಪಳ ಜಿಲ್ಲೆಯಲ್ಲಿ 1194 ಸೊಂಕಿತರ ಸಂಖ್ಯೆ,
ಜಿಲ್ಲೆಯಲ್ಲಿ ಇಂದು 98 ಕೇಸ್ ಗಳಲ್ಲಿ ಗಂಗಾವತಿ ತಾಲ್ಲೂಕಿನಲ್ಲಿ 53, ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ, ಹಾಗೇಯೆ
ಕುಷ್ಟಗಿ ತಾಲೂಕಿನಲ್ಲಿ 17,
ಕೊಪ್ಪಳ ತಾಲೂಕಿನಲ್ಲಿ 27, ಯಲಬುರ್ಗಾ ತಾಲ್ಲೂಕಿನಲ್ಲಿ 1, ಪ್ರಕರಣಗಳು ಪತ್ತೆಯಾಗಿವೆ,
ಇಂದು ಗುಣಮುಖರಾಗಿ ಬಿಡುಗಡೆ ಯಾದವರು 68 ಜನ,
ಒಟ್ಟಾರೆ ಜಿಲ್ಲೆಯಲ್ಲಿ ಬಿಡುಗಡೆ ಯಾದವರ ಸಂಖ್ಯೆ 757 ,
184 ಜನರು ವಿವಿಧ ನಿಗದಿತ ಕೊವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,
ಹೋಮ್ ಐಸೋಲೆಷನ್ ನಲ್ಲಿ 175.ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,
52 ಜನರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ,
ಇಂದು ಇಬ್ಬರು ಸಾವನ್ನಪ್ಪಿದ್ದಾರೆ
ಒಟ್ಟು ಇದುವರೆಗೆ 26 ಜನ ಸಾವನ್ನಪ್ಪಿದ್ದಾರೆ..!

ಕೌರವನ ಶ್ರೀಮತಿ ಸೇರಿ ಐದು ಜನರಿಗೆ ಸೊಂಕು,

ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವ ಬಿಸಿ ಪಾಟೀಲ್ ಪತ್ನಿ ಅಳಿಯ ಹಾಗು ಸಿಬ್ಬಂದಿ ಸೇರಿ ಕುಟುಂಬದ ಐದು ಜನರಿಗೆ ಸೊಂಕು ದೃಡವಾದ ಹಿನ್ನೆಲೆ ಅವರನ್ನು ನಿಗದಿತ ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಯಿತು, ಬೇಗ ಗುಣಮುಖರಾಗಲಿ ಎಂದು ಪ್ರಾರ್ಥನಿಸುತ್ತೆನೆ ನಿಮ್ಮೆಲ್ಲರ ಹಾರೈಕೆ ಇರಲಿ ಎಂದು ಟ್ವಿಟರ್ ಮೂಲಕ ಸಚಿವ ಬಿಸಿ ಪಾಟೀಲ್ ತಿಳಿಸಿದ್ದಾರೆ,

ಆತ್ಮೀಯ ಓದುಗರರೇ. ತುಂಗಾವಾಣಿ ನ್ಯೂಸ್
ಕರೊನಾ ಸಂಬಂಧಿಸಿದ ಸೊಂಕಿತರ, ಗುಣಮುಖರಾಗಿದ್ದವರ, ಮೃತಪಟ್ಟವರ ಮಾಹಿತಿಯನ್ನು ಕಾಲ ಕಾಲಕ್ಕೆ ತಮ್ಮ ಮುಂದೆ ಸುದ್ದಿ ಬಿತ್ತರಿಸುತ್ತಾ ಬಂದಿದೆ, ನಾವು ನೀಡುವ ಮಾಹಿತಿ ಓದಿ ಯಾರು ಆತಂಕ ಗೊಳ್ಳ ಬೇಡಿ,
ಕರೊನಾ ಸಂದರ್ಭವನ್ನು ಎದುರಿಸುವುದು ಹೇಗೆ, ಸೊಂಕು ಬಂದಾಗ ಏನು ಮಾಡಬೇಕು..? ಇನ್ನೂ ಹಲವು ಮಾಹಿತಿಗಳನ್ನು ನುರಿತ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ, ಹಲವು ವೈದ್ಯರು ಬರೆದಿರುವ ಲೇಖನಗಳನ್ನು ಓದಿ, ಯಾವುದೇ ಕಾರಣಕ್ಕೂ ಆತಂಕಕ್ಕೆ, ಉದ್ವೇಗಕ್ಕೆ ಒಳಗಾಗದಿರಿ, ಗಾಬರಿಗೊಳ್ಳಬೇಡಿ, ಧೈರ್ಯದಿಂದ ಎದುರಿಸಿ, ಕಾಲ ಕಾಲಕ್ಕೆ ಸ್ಯಾನಿಟೈಸರ್ ನಿಂದ ಕೈ ತೊಳೆದುಕೊಳ್ಳುತ್ತಾ, ಮಾಸ್ಕ್ ಧರಿಸಿ ಹೊರಗಡೆ ಬನ್ನಿ, ಸುರಕ್ಷಿತ ಅಂತರ ಕಾಪಾಡಿಕೊಳ್ಳಿ,
ಧೈರ್ಯದಿಂದಲೇ ಕರೊನಾವನ್ನು ಎದುರಿಸೋಣ ಇದು ತುಂಗಾವಾಣಿ ಬಳಗದ ಕಳಕಳಿ..!

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Check Also

ಕೊಪ್ಪಳ ಜಿಲ್ಲೆಯಲ್ಲಿ ಇಂದು ಕರೊನಾಗೆ ಮೂರು ಬಲಿ. 139 ಪಾಜಿಟಿವ್ ಪತ್ತೆಯಾಗಿವೆ.!

ಕೊಪ್ಪಳ ಜಿಲ್ಲೆಯಲ್ಲಿ ಇಂದು ಕರೊನಾಗೆ ಮೂರು ಬಲಿ. 139 ಪಾಜಿಟಿವ್ ಪತ್ತೆಯಾಗಿವೆ.! ತುಂಗಾವಾಣಿ. ಕೊಪ್ಪಳ: ಆ,17, ಜಿಲ್ಲೆಯಲ್ಲಿ, ಮತ್ತೆ ಸಾವಿನ …