ಪ್ರೀತಿಗಾಗಿ ಜೀವಗಳ ಬಲಿ.
ತುಂಗಾವಾಣಿ
ಕೊಪ್ಪಳ ಜುಲೈ 4 ಕುಷ್ಟಗಿ ತಾಲೂಕಿನ ಮಾದಾಪುರ ಗ್ರಾಮದ ಯುವಕ ಯುವತಿ ಒಂದೇ ಹಗ್ಗದಲ್ಲಿ ಕುಣಿಕೆಮಾಡಿ ನೇಣುಬಿಗಿದುಕೊಂಡು ಜೆ ರಾಂಪುರ ಗ್ರಾಮದ ಹತ್ತಿರ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಮಾದಾಪುರ ಗ್ರಾಮದ ವಿರುಪಾಕ್ಷಗೌಡ (20) ಹಾಗು ಹುಲಿಗೆಮ್ಮ (18) ಗೆ ವಿವಾಹವಾಗಲು ಜಾತಿ ಅಡ್ಡಬಂದಿದೆ ಎನ್ನಲಾಗಿದೆ. ಮದುವೆಗೆ ಎರಡೂ ಕುಟುಂಬಗಳು ಒಪ್ಪದ ಕಾರಣ ಮನನೊಂದು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ ಎನ್ನಲಾಗುತ್ತಿದೆ.
ತಾವರಗೇರಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.