ಆಸ್ಪತ್ರೆ ಆವರಣದಲ್ಲಿ ರೋಗಿ ಆತ್ಮಹತ್ಯೆಗೆ ಯತ್ನ.
ಕಾರಣ ಏನು ಗೊತ್ತೆ ??
ತುಂಗಾವಾಣಿ
ಕುಷ್ಟಗಿ ಜ 28 ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದ ಅಂಬಾಜಿ ಮಾರುತಿ ಮರಾಠ (35) ಎಂಬ ವ್ಯಕ್ತಿ ಸರ್ಕಾರಿ ಆಸ್ಪತ್ರೆಯ ವಸತಿ ಗೃಹದ ಕಟ್ಟಡದ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಮತ್ತು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಆತನ ಮನವಲಿಸಿ ಕೆಳಗೆ ಇಳಿಸಿದ್ದಾರೆ.
ಅನಾರೋಗ್ಯ ಪೀಡಿತನಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಂಬಾಜಿ ಕೌಟಂಬಿಕ ಕಲಹದಿಂದ ಮಾನಸಿಕವಾಗಿ ಜರ್ಜರಿತನಾಗಿದ್ದು ಪತ್ರಕರ್ತರು ಮಾಧ್ಯಮದವರು ಸ್ಥಳಕ್ಕೆ ಬಂದು ತನ್ನ ಕಷ್ಟವನ್ನು ಕೇಳಿ ಪತ್ರಿಕೆ/ಮಾಧ್ಯಮಗಳಲ್ಲಿ ಪ್ರಕಟಿಸಬೇಕು ಎಂದು ಪಟ್ಟು ಹಿಡಿದಿದ್ದ,
ಆಸ್ಪತ್ರೆಯ ಸಿಬ್ಬಂದಿಯ ಸಮಯಪ್ರಜ್ನೆ ಮತ್ತು ಅಗ್ನಿಶಾಮಕದಳದ ಅಧಿಕಾರಿಗಳು ಮತ್ತು ಪೋಲಿಸ್ ಅಧಿಕಾರಿಗಳ ಶತಪ್ರಯತ್ನದಿಂದ ಕಟ್ಟಡದ ಮೇಲಿದ್ದ ವ್ಯಕ್ತಿಯ ಎಲ್ಲಾ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವುದಾಗಿ ಅಗ್ನಿಶಾಮಕದಳದ ಅಧಿಕಾರಿಗಳು ಮಾತುಕೊಟ್ಟು ಮಾನಸಿಕವಾಗಿ ಜರ್ಜರಿತನಾದ ವ್ಯಕ್ತಿಯನ್ನು ಸುರಕ್ಷಿತ ವಾಗಿ ಕೆಳಗಿಳಿಸುವಲ್ಲಿ ಸಫಲರಾಗಿದ್ದಾರೆ.
ಮಾನಸಿಕ ಅಸ್ವಸ್ಥ ಮತ್ತು ಅನಾರೋಗ್ಯ ಪೀಡಿತನಾಗಿರುವ ಅಂಬಾಜಿ ಸದ್ಯ ಕುಷ್ಟಗಿ ಪೋಲಿಸ್ ವಶದಲ್ಲಿದ್ದು ಸುರಕ್ಷಿತವಾಗಿದ್ದಾನೆ ಎಂದು ಆಸ್ಪತ್ರೆಯ ಮೂಲಗಳಿಂದ ತಿಳಿದು ಬಂದಿದೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.
Tungavani News Latest Online Breaking News