ಫಿಲ್ಟರ್ ಮರಳು ಅಡ್ಡೆ ಮೇಲೆ ದಾಳಿ.!
ಮುಂದೇನಾಯ್ತು..!?
ತುಂಗಾವಾಣಿ.
ಗಂಗಾವತಿ: ಜ-10 ತಾಲ್ಲೂಕಿನಲ್ಲಿ ಮತ್ತೆ ತಲೆ ಎತ್ತಿದ ಅಕ್ರಮ ಫಿಲ್ಟರ್ ಮರಳು ಮಾಫಿಯಾ.!
ಗಂಗಾವತಿ ತಾಲ್ಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಫಿಲ್ಟರ್ ಮರಳು ದಂಧೆಗೆ, ಬಲಾಢ್ಯ ವ್ಯಕ್ತಿಗಳಿಗೆ, ಅಧಿಕಾರಿಗಳು ಸಾಥ್ ಕೊಡ್ತಾಯಿದ್ದಾರಾ ಎನ್ನುವ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಕಾಡುತ್ತಿವೆ.!?
ಇದಕ್ಕೆ ಪುಷ್ಠಿ ಎನ್ನುವಂತೆ ಜ-8 ರಂದು ಖಚಿತ ಮಾಹಿತಿ ಮೇರೆಗೆ ಕೊಪ್ಪಳದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ತಾಲ್ಲೂಕಿನ ದಾಸನಾಳ ಗ್ರಾಮದ ಸೀಮೆಯಲ್ಲಿ ಬರುವ ಆರಾ಼ಳ ಹತ್ತಿರದ ಸರ್ವೆ ನಂಬರ್: 71/1/* 5.ಎಕರೆ 11 ಗುಂಟೆ ಸರ್ಕಾರಿ ಸ್ವಾಮ್ಯದ ಜಾಗದಲ್ಲಿ 1-20 ಎಕರೆ ಜಮೀನಿನಲ್ಲಿ ಮಣ್ಣು ತಗೆದು ಅದರಲ್ಲಿ ಸುಮಾರು 20×30 ನೀರಿನ ತೊಟ್ಟಿ ನಿರ್ಮಿಸಿದ ಅಕ್ರಮ ದಂಧೆಕೊರರು ರಾಜಾರೋಷವಾಗಿ ಅಕ್ರಮ ಫಿಲ್ಟರ್ ಮರಳು ಮಾಫಿಯಾ ನಡೆಸುತ್ತಿದ್ದರು, ಪಕ್ಕದ ಜಮೀನಿಗೆ ಹೋಗುವ ನೀರನ್ನು ಪಂಪ್ ಸೆಟ್ ಮೂಲಕ ನೀರು ಹರಿಸಿ ಮಣ್ಣನ್ನು ನೀರಿನಲ್ಲಿ ತೊಳೆದು ಅದನ್ನು ಉಸುಗು (ಮರಳು) ಪರಿವರ್ತನೆ ಮಾಡುತ್ತಿದ್ದರು. ಅಸ್ವಾಭಾವಿಕ ಮರಳುನ್ನು ಸ್ವಾಭಾವಿಕ ಮರಳು ಎಂದು ಬಿಂಬಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ದಂಧೆಯ ಮೇಲೆ ದಾಳಿ ಮಾಡಿ. ಅವರ ವಿರುದ್ಧ ಸರ್ವೆ ನಂ: 71/1/* ರ ಸರ್ಕಾರಿ ಸ್ವಾಮ್ಯದ ಜಮೀನಿನಲ್ಲಿ ಅನಧಿಕೃತವಾಗಿ ಅತಿಕ್ರಮ ಪ್ರವೇಶಿಸಿ ಸರ್ಕಾರಿ ಆಸ್ತಿಗೆ ದಕ್ಕೆ ಉಂಟು ಮಾಡಿದ್ದಾರೆ ಎಂದು ಐ,ಪಿ,ಸಿ, ಕಲಂ 447, ರೆಡ್ ವಿತ್ 34, ಮತ್ತು 3(1) ಹಾಗು ಆಕ್ಟ್ 1984 ಕಲಂ ಗಳ ಅಡಿಯಲ್ಲಿ ಸರ್ಕಾರಿ ಸ್ವಾಮ್ಯದ ಜಮೀನಿನಲ್ಲಿ ಅಕ್ರಮ ಫಿಲ್ಟರ್ ಮರಳು ಮಾಡುತ್ತಿದ್ದವರ ವಿರುದ್ಧ ಹೆಸರು ಸಮೇತ ದೂರು ದಾಖಲಿಸದೆ, ಟ್ಯಾಕ್ಟರ್ ಮತ್ತು ಟ್ರಾಲಿ, ನಂ: KA37 TB 0229 ಮೇಲೆ ಮಾತ್ರ ದೂರು ದಾಖಲಿಸಿದ್ದು ಅನುಮಾನಕ್ಕೆ ಕಾರಣವಾಗಿದೆ.!?
ಅಧಿಕಾರಿಗಳ ಮೇಲೆ ಅನುಮಾನದ ಹುತ್ತ..!?
ಸ್ಥಳೀಯ ಕಂದಾಯ ನಿರೀಕ್ಷಕರಿಗೆ ತಮ್ಮ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಇಂಚಿಂಚೂ ಮಾಹಿತಿ ಗೊತ್ತು, ಒಂದು ಕಡ್ಡಿ ಅಲುಗಾಡಿದರು ಮಾಹಿತಿ ತಲುಪುತ್ತೆ ಅಷ್ಟರ ಮಟ್ಟಿಗೆ ಪವರ್ ಪುಲ್, ಆದರೆ ನಮಗೆ ಯಾವುದೆ ಅಕ್ರಮ ದಂಧೆ ನಡೆಯುವುದು ಗೊತ್ತಿಲ್ಲ ಎನ್ನುವ ಹಾರಿಕೆ ಉತ್ತರ ಇ ಅಧಿಕಾರಿಗಳದ್ದು.!?
ಅನೇಕ ವರ್ಷಗಳಿಂದ ಠಿಕಾಣಿ ಹೂಡಿದ ಗಂಗಾವತಿ ತಾಲ್ಲೂಕಿಗೆ ಸಂಬಂಧಿಸಿದ ಕಂದಾಯ ನಿರೀಕ್ಷಕರು ಬೇರೆಡೆ ವರ್ಗವಾದರೆ ಮಾತ್ರ ಅಕ್ರಮ ದಂಧೆಕೊರರಿಗೆ ಕಡಿವಾಣ ಹಾಕಲು ಸಾಧ್ಯ ಎನ್ನುತ್ತಾರೆ ಸ್ಥಳಿಯರು,! ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳುತ್ತೆ ಕಾದು ನೋಡಬೇಕಿದೆ.!?
ಈ ಸಂದರ್ಭದಲ್ಲಿ ಗಣಿ ಕಿರಿಯ ಭೂ ವಿಜ್ಞಾನಿ ರೂಪ ನವೀನ ಹಾಗು ಗಂಗಾವತಿ ಗ್ರಾಮೀಣ CPI ಉದಯರವಿ, PSI ದೊಡ್ಡಪ್ಪ, ಕಂದಾಯ ನಿರೀಕ್ಷಕ ಬಸವರಾಜ ಅಂಗಡಿ, ಗ್ರಾಮ ಲೇಕ್ಕಾಧಿಕಾರಿ ಷಹಾಜಾನ್, ಗ್ರಾಮೀಣ ಪೋಲೀಸ್ ಸಿಬ್ಬಂದಿಗಳು ಉಪಸ್ಥಿತಿ ಇದ್ದರು.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.
Tungavani News Latest Online Breaking News
