Breaking News

ತುಂಗಾವಾಣಿ ಬಿಗ್ ಇಂಪ್ಯಾಕ್ಟ್. 100 ಮೆಟ್ರಿಕ್ ಟನ್ ಮರಳು ವಶ.

ತುಂಗಾವಾಣಿ ಬಿಗ್ ಇಂಪ್ಯಾಕ್ಟ್.
100 ಮೆಟ್ರಿಕ್ ಟನ್ ಮರಳು ವಶ.

ತುಂಗಾವಾಣಿ.
ಕೊಪ್ಪಳ ನ-23 ತುಂಗಾವಾಣಿ ವರದಿಗೆ ಎಚ್ಚೆತ್ತ ಅಧಿಕಾರಿಗಳ ತಂಡ ತಡರಾತ್ರಿ ಮರಳು ಸ್ಟಾಕ್ ಯಾರ್ಡ್ ಗೆ ದಾಳಿ ಮಾಡಿ 100 ಮೆಟ್ರಿಕ್ ಟನ್ ಮರಳನ್ನು ವಶಕ್ಕೆ ಪಡೆದಿದ್ದಾರೆ.
ನಿನ್ನೆ ತುಂಗಾವಾಣಿಯಲ್ಲಿ “ಅಕ್ರಮ ಮರಳು ದಂಧೆಗೆ ಅಧಿಕಾರಿಗಳು ಸಾಥ್.!?” ಎಂಬ ಶೀರ್ಷಿಕೆ ಅಡಿಯಲ್ಲಿ ವಿಸ್ತ್ರತ ವರದಿ ಮಾಡಿತ್ತು.


ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಯವರ ಮಾರ್ಗದರ್ಶನದಲ್ಲಿ

ರಾತ್ರಿ ಸುಮಾರು 11-45 ಕ್ಕೆ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದ ಹತ್ತಿರ ಅಕ್ರಮ ಮರಳು ಸಂಗ್ರಹ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ರೂಪಾ, ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್ಐ ಡೊಡ್ಡಪ್ಪ ಜೇ, ಕಂದಾಯ ಇಲಾಖೆಯ RI ಹನುಮಂತಪ್ಪ, VA ರಾಜುಭಜಂತ್ರಿ ಒಳಗೊಂಡ ತಂಡ ದಾಳಿ ಮಾಡಿದ್ದು, ಲಕ್ಷಾಂತರ ರೂಪಾಯಿ ಬೆಲೆಬಾಳುವ 100 ಮೆಟ್ರಿಕ್ ಟನ್ ಮರಳು, ಮತ್ತು ಮರಳನ್ನು ಸಾಗಿಸಲು ಉಪಯೋಗಿಸುತ್ತಿದ್ದ ಟ್ರಾಕ್ಟರ್ ಜಪ್ತಿ ಮಾಡಿಕೊಂಡಿದ್ದಾರೆ, ಸಂಗ್ರಹ ಮಾಡಿದವರ ಮಾಹಿತಿ ಪಡೆದು ಕಾನೂನು ಕ್ರಮ ಕೈಗೊಂಡು ತನಿಖೆ ಕೈಗೊಂಡಿದ್ದಾರೆ.
ಸ್ಥಳಕ್ಕೆ ಗ್ರಾಮೀಣ CPI ಉದಯರವಿ ಅವರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಗಂಗಾವತಿ: ಅಕ್ರಮ ಮರಳು ದಂಧೆಗೆ ಅಧಿಕಾರಿಗಳು ಸಾಥ್..!?

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ಬೋರ್ ಬ್ಲಾಸ್ಟ್ ಗೆ ನಲುಗುತ್ತಿದೆ ವೆಂಕಟಗಿರಿ.! ಮುತ್ತಪ್ಪನ ಘನಾಂಧಾರಿ ಕೆಲಸ ಎಂಥದ್ದು ಗೊತ್ತಾ..?

  ಬೋರ್ ಬ್ಲಾಸ್ಟ್ ಗೆ ನಲುಗುತ್ತಿದೆ ವೆಂಕಟಗಿರಿ.! ಮುತ್ತಪ್ಪನ ಘನಾಂಧಾರಿ ಕೆಲಸ ಎಂಥದ್ದು ಗೊತ್ತಾ..? ತುಂಗಾವಾಣಿ. ಗಂಗಾವತಿ: ಜ-22 ತಾಲ್ಲೂಕಿನ …