ತೆರವು ಕಾರ್ಯಾಚರಣೆಗೆ ತೀರ್ವ ವಿರೋಧ.!

ತೆರವು ಕಾರ್ಯಾಚರಣೆಗೆ ತೀರ್ವ ವಿರೋಧ.!

ತುಂಗಾವಾಣಿ
ಗಂಗಾವತಿ ನ 25 ಗಂಗಾವತಿ ನಗರದ ಮುಸ್ಲಿಮ್ ಖಬರಸ್ಥಾನದ ಜಾಗೆ ನಿರ್ಮಿಸಿರುವ ವಾಣಿಜ್ಯ ಮಳಿಗೆ ತೆರವು ಕಾರ್ಯಾಚರಣೆಗೆ ತೆರಳಿದ್ದ ನಗರಸಭೆ ಸಿಬ್ಬಂದಿಗೆ ಸಾರ್ಜನಿಕರಿಂದ ತೀರ್ವ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತವಾಗಿದೆ.
ವಕ್ಫ್ ಬೋರ್ಡ್‌ಗೆ ಸಂಬಂಧಿಸಿದ ಮುಸ್ಲಿಂ ಖಬರಸ್ಥಾನ (ಸ್ಮಶಾನ) ಜಾಗೆಯಲ್ಲಿ ವಾಣಿಜ್ಯ ಮಳಿಗೆಯನ್ನು ನಿರ್ಮಿಸಿ ಬಾಡಿಗೆ ನೀಡಲಾಗಿದೆ ಆದರೆ ಮಳಿಗೆಯು ಚರಂಡಿಯ ಮೇಲೆ ನಿರ್ಮಿಸಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪೌರಾಯುಕ್ತ ಅರವಿಂದ ಜಮಖಂಡಿ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿ ಕಟ್ಟಡ ತೆರವಿಗೆ ತೆರಳಿತ್ತು. ಮುಖ್ಯರಸ್ತೆಯ ನಗರಸಭೆಗೆ ಸಂಭಂದಿಸಿದ ಚರಂಡಿಯನ್ನು ಹಾಗೂ ಪಾದಾಚಾರಿ ರಸ್ತೆಯನ್ನು ಬಿಟ್ಟು ಕಟ್ಟಿರುವ ಕಟ್ಟಡದಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಆದ್ದರಿಂದ ಕಟ್ಟಡ ತೆರವು ಕಾರ್ಯಾಚರಣೆ ಕೈ ಬಿಡಬೇಕು ಎಂದು ಅಲ್ಲಿನ ನಿವಾಸಿಗಳು ಪಟ್ಟು ಹಿಡಿದರು.

ಆಡಳಿತ ಮಂಡಳಿ ಆರೋಪ.
ಹವಾಮಾನ ವೈಪರಿತ್ಯದಿಂದಾಗಿ ಸುರಿದ ಮಳೆಗೆ ವಾರ್ಡುಗಳಲ್ಲಿ ಚರಂಡಿಗಳಲ್ಲಿ ಕಸಕಡ್ಡಿ ತುಂಬಿಕೊಂಡು ಮಳೆನೀರು ಮನೆಗಳಿಗೆ ನುಗ್ಗಿದೆ ಅಲ್ಲದೆ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತು ಮಾರಕ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿವೆ, ಮಳೆಯಿಂದಾಗಿ ಬೀದಿದೀಪಗಳು ಹಾಳಾಗಿದ್ದು ಕ್ಷಿಪ್ರಗತಿಯಲ್ಲಿ ಕಾರ್ಯ ಕೈಗೊಂಡು ನಾಗರೀಕರ ಮೂಲಸೌಲಭ್ಯಗಳ ಒದಗಿಸುವಲ್ಲಿ ನಿರತವಾಗಿರ ಬೇಕಾದ ಪೌರಾಯುಕ್ತರು ನಗರಸಭೆ ಅಧ್ಯಕ್ಷರ ಹಾಗು ಆಡಳಿತ ಮಂಡಳಿ ಗಮನಕ್ಕೂ ತರದೆ ಯಾರದೋ ಒತ್ತಡಕ್ಕೆ ಮಣಿದು ಕಟ್ಟಡ ತೆರವಿಗೆ ಮುಂದಾಗಿದ್ದಾರೆ ಎಂದರು.
ಖಬರಸ್ತಾನ ಕಮೀಟಿಯು ಯಾವುದೇ ಸರಕಾರಿ ಜಾಗೆ ಒತ್ತುವರಿ ಮಾಡಿಲ್ಲ ನಮ್ಮ ಸಮುದಾಯದ ಇನ್ನೂ ಬಹಳಷ್ಟು ಜಾಗ ಅತಿಕ್ರಮಣ ಮಾಡಲಾಗಿದೆ ಅದನ್ನು ಅಳತೆ ಮುಖಾಂತರ ಮಾಡಿದರೆ ಸಾಕಷ್ಟು ಭೂಮಿ ಖಬರಸ್ತಾನಕ್ಕೆ ಮರಳಿ ಬರಲಿದೆ, ಆದರೆ ನಗರಸಭೆ ಪೌರಾಯುಕ್ತರು ಖಬರಸ್ಥಾನ ಕಮೀಟಿಗೆ ನೋಟೀಸು ನೀಡಿ ಉತ್ತರ ಪಡೆಯದೇ ಏಕ ಪಕ್ಷೀಯವಾಗಿ ನಿರ್ಣಯ ತಗೆದುಕೊಂಡು ತೆರವು ಕಾರ್ಯಚರಣೆಗೆ ಬಂದಿದ್ದು ಇದರಲ್ಲಿ ರಾಜಕೀಯ ಪ್ರೇರಿತ ದಾಳಿ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ, ಆಡಳಿತ ಮಂಡಳಿಯ ಗಮನಕ್ಕೂ ತರದೆ ಪೌರಾಯುಕ್ತರು ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದಾರೆ ಎಂದು ಸಮುದಾಯದ ಯುವ ಮುಖಂಡ ಜಬೇರ್ ಆಕ್ರೋಶ ವ್ಯಕ್ತಪಡಿಸಿದರು.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129
error: Content is protected !!