ಮಳೆ ಅವಾಂತರ. ಸರ್ಕಾರ ಶೀಘ್ರ ಸ್ಪಂದಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ HR ಶ್ರೀನಾಥ್.!

ಮಳೆ ಅವಾಂತರ. ಸರ್ಕಾರ ಶೀಘ್ರ ಸ್ಪಂದಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ HR ಶ್ರೀನಾಥ್.!

ತುಂಗಾವಾಣಿ.
ಕೊಪ್ಪಳ: ನ-20 ಜಿಲ್ಲೆಯ ಗಂಗಾವತಿ ತಾಲೂಕಿನಾದ್ಯಂತ ನಿರಂತರ ಮಳೆಯಿಂದ ರೈತಾಪಿ ವರ್ಗವು ಕಂಗಾಲಾಗಿದ್ದು ಅತೀ ಶೀಘ್ರವಾಗಿ ಸರ್ಕಾರ ಸ್ಪಂದಿಸಬೇಕು ಎಂದು ಮಾಜಿ MLC HR ಶ್ರೀನಾಥ್ ಆಗ್ರಹಿಸಿದ್ದಾರೆ.

ತಾಲೂಕಿನ ಸಂಗಾಪುರ ಮಲ್ಲಾಪುರ ರಾಂಪುರ ಗೂಗಿಬಂಡಿ ಆನೆಗೊಂದಿ ಕಡೆಬಾಗಿಲು ಭಾಗದಲ್ಲಿ ಸಂಚರಿಸಿದ ಶ್ರೀನಾಥ್ ರೈತರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿ ಸರ್ಕಾರ ನೇರವಾಗಿ ಬೆಳೆಹಾನಿಯ ಬಗ್ಗೆ ಸಮಿತಿ ರಚಿಸಿ ಬೆಳೆಹಾನಿಯಾದ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ಘೋಷಣೆ ಮಾಡಬೇಕು ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129
error: Content is protected !!