ಗಂಗಾವತಿ: ತಾಲ್ಲೂಕಿನಲ್ಲಿ ಐಟಿ ದಾಳಿ.

ಗಂಗಾವತಿ: ತಾಲ್ಲೂಕಿನಲ್ಲಿ
ಐಟಿ ದಾಳಿ.

ತುಂಗಾವಾಣಿ.
ಗಂಗಾವತಿ: ಅ-7 ತಾಲೂಕಿನ ಶ್ರೀರಾಮನಗರದ ಹತ್ತಿರ ಬರುವ ಕೋಟೆಯ್ಯ ಕ್ಯಾಂಪ್ ಆಂದ್ರ ಮೂಲದ ವ್ಯಕ್ತಿಯ ಮನೆಯ ಮೇಲೆ ಐಟಿ ಅಧಿಕಾರಿಗಳಿಂದ ಬೆಳ್ಳಂಬೆಳಿಗ್ಗೆ ದಾಳಿ ನಡೆದಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಳ್ಳಂಬೆಳಗ್ಗೆಯೇ ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಉಮೇಶ್ ಮನೆ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆದು ಶಾಕ್ ಕೊಟ್ಟಿದ್ದರು. ಅದರ ಬೆನ್ನಲ್ಲೇ.

ಗಂಗಾವತಿ ತಾಲೂಕಿನ ಕೋಟಯ್ಯಕ್ಯಾಂಪ್​​ನಲ್ಲಿರುವ ಮನೆ ಮೇಲೆ ಹುಬ್ಬಳ್ಳಿಯಿಂದ ಬಂದಿರುವ 6 ಜನ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದೆ.ಕೋಟಯ್ಯಕ್ಯಾಂಪ್ ನಿವಾಸಿ ಶ್ರೀನಿವಾಸ ಎಂಬುವವರು ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ಹಲವಾರು ಕಾಮಗಾರಿಗಳನ್ನು ಮಾಡಿದ್ದಾರೆ. ಕಾವೇರಿ ಜಲ ನಿಗಮ. ಕೃಷ್ಣ ಜಲ ನಿಗಮ ಮತ್ತು ತುಂಗಭದ್ರಾ ಜಲನಿಗಮಗಳಲ್ಲಿ ಮಾಜಿ ಸಿ.ಎಮ್. ಬಿಎಸ್‌ವೈ ಆಪ್ತ ಉಮೇಶ್ ಬಳಿ ಕಾಮಗಾರಿಗಳನ್ನು ಪಡೆದು ಕಳಪೆ ಕಾಮಗಾರಿ ಮಾಡಿ ಬಿಲ್ ಎತ್ತುವಳಿ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.!

ಕೋಟಯ್ಯಕ್ಯಾಂಪ್ ನಿವಾಸಿ ಯಾದರೂ ಕೂಡ ಎರಡು ಮೂರು ತಿಂಗಳಿಗೊಮ್ಮ ಈ ಮನೆಗೆ ಬಂದು ಹೋಗುತ್ತಿದ್ದರು.!

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129
error: Content is protected !!