ಆರೋಪಿ ಬಂಧನ ಆಗೋ ವರೆಗೂ ಕದಲುವುದಿಲ್ಲ. ಮಾಜಿ ಸಚಿವ ತಂಗಡಗಿ.

ಆರೋಪಿ ಬಂಧನ ಆಗೋ ವರೆಗೂ ಕದಲುವುದಿಲ್ಲ.
ಮಾಜಿ ಸಚಿವ ತಂಗಡಗಿ.

ತುಂಗಾವಾಣಿ
ಗಂಗಾವತಿ ಅ 03 ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಕಾಂಗ್ರೇಸ್ ಕಿಸಾನ್ ಸಂಘಟನೆಯ ಅಧ್ಯಕ್ಷ ವಿ ಪ್ರಸಾದ್ ನ ಮೇಲೆ ಟ್ರಾಕ್ಟರನಿಂದ ಹಲ್ಲೆ ಮಾಡಿರುವ ಆರೋಪಿ ಮುರಳಿಕೃಷ್ಣನನ್ನು ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಮಾಜಿ ಶಾಸಕ ಶಿವರಾಜ್ ತಂಗಡಗಿ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಧರಣಿ ಕುಳಿತಿದ್ದಾರೆ.

ಕನಕಗಿರಿ ಕ್ಷೇತ್ರದ ಜಂಗಮರ ಕಲ್ಗುಡಿಯಲ್ಲಿ ಜೆಜೆಎಮ್ ಸ್ಕೀಮ್ ನಲ್ಲಿ ಕಾಮಗಾರಿ ಕೈಗೊಳ್ಳುವ ಕುರಿತಂತೆ ವಿ ಪ್ರಸಾದ ಹಾಗು ಮುರಳಿಕೃಷ್ಣರ ನಡುವೆ ಇಂದು ಬೆಳಿಗ್ಗೆ ಎಂಟು ಗಂಟೆಗೆ ವಾಕ್ಸಮರ ವಾಗಿ ಕನಕಗಿರಿ ಶಾಸಕ ಬಸವರಾಜ ದಡೆಸೂಗೂರು ಬೆಂಬಲಿಗ ಮುರಳಿಕೃಷ್ಣ ಕಾಂಗ್ರೆಸ್ ಕಾರ್ಯಕರ್ತ ಹಾಗು ಕಿಸಾನ್ ಸಂಘಟನೆಯ ಮುಖಂಡನಾದ ವಿ ಪ್ರಸಾದ್ ನ ಮೇಲೆ ಟ್ರಾಕ್ಟರ್ ಹಾಯಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಹತ್ತು ತಾಸು ಕಳೆದರೂ ಆರೋಪಿಯನ್ನು ಬಂಧನವಾಗದ ಕಾರಣ ನೂರಾರು ಕಾರ್ಯಕರ್ತರ ಜೊತೆ ಗ್ರಾಮೀಣ ಠಾಣೆಗೆ ಆಗಿಮಿಸಿದ ಮಾಜಿ ಸಚಿವರು ಠಾಣೆಯಲ್ಲೇ ಠಿಕಾಣಿ ಹೂಡಿದ್ದಾರೆ.
ಠಾಣೆಯ ಪಿಎಸ್‌ಐ ಶಾರಧಮ್ಮ ಅವರು ಮಾಜಿ ಸಚಿವರನ್ನು ಸಮಜಾಯಿಲು ಮುಂದಾದಾಗ ಮಾತಾನಾಡಿದ ತಂಗಡಗಿ ನನ್ನ ಕಾರ್ಯಕರ್ತ ಆಸ್ಪತ್ರೆಯಲ್ಲಿ ಜೀವನ್ಮರಣದಲ್ಲಿ ಹೋರಾಡುತ್ತಿರುವಾಗ ನಾನು ಎಸಿ ಯಲ್ಲಿ ಕೂರಲು ಹೇಗೆ ಸಾಧ್ಯ ? ಇಂದು ಬೆಳಿಗ್ಗೆ ಎಂಟು ಗಂಟೆಗೆ ಘಟನೆ ನಡೆದಿದ್ದರೂ ಸಂಜೆಯ ವರೆಗೂ ಎಫ್‌ಐಆರ್ ದಾಖಲಿಸಿದ್ದಿಲ್ಲ ನಾನು ಬಂದ ಮೇಲೆ ದಾಖಲಿಸಿದ್ದೀರಿ, ಆರೋಪಿಯು ಗ್ರಾಮದಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದಾನೆ ಪೋಲಿಸರು ಶಾಸಕನ ಕೈಗೊಂಬೆಯಂತೆ ಆಡುತ್ತಿದ್ದಾರೆ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಇದೆಯೇ ಎಂದು ಹರಿಹಾಯ್ದರು, ನನ್ನ ಬೆಂಬಲಿಗನ ಮೇಲೆ ಹಲ್ಲೆ ಮಾಡಿರುವ ಆರೋಪಿಯನ್ನು ಬಂಧಿಸುವವರೆಗೂ ಇಲ್ಲಿಂದ ಕದಲುವುದಿಲ್ಲ ರಾತ್ರಿ ಹತ್ತು ಗಂಟೆಯ ವರೆಗೇ ಬಂದನವಾಗ ಬೇಕು ಇಲ್ಲದಿದ್ದಲ್ಲಿ ಠಾಣೆಯ ಆವರಣದಲ್ಲಿ ಅಹೋರಾತ್ರಿ ಧರಣಿ ಕೂಡುತ್ತೇನೆ ಎಂದರು.

ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ಕನಕಗಿರಿ: ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ಗಂಗಾಧರ ಸ್ವಾಮಿ ಆಯ್ಕೆ ಬಹುತೇಕ ಖಚಿತ. ಪಕ್ಷದ ಕಾರ್ಯಕರ್ತರಿಗೆ ಏನ್ ಹೇಳಿದ್ರು ರೆಡ್ಡಿ ಶ್ರೀನಿವಾಸ.!

ಕನಕಗಿರಿ: ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ಗಂಗಾಧರ ಸ್ವಾಮಿ ಆಯ್ಕೆ ಬಹುತೇಕ ಖಚಿತ. ಪಕ್ಷದ ಕಾರ್ಯಕರ್ತರಿಗೆ ಏನ್ ಹೇಳಿದ್ರು ರೆಡ್ಡಿ ಶ್ರೀನಿವಾಸ.! …

error: Content is protected !!