Breaking News

ಕನಕಗಿರಿ: ಅಂಬೇಡ್ಕರ್ ನಾಮಫಲಕ ತೆರವು, ದಾಂದಲೆ. ಹನ್ನೆರಡು ಜನರ ಮೇಲೆ FIR

ಕನಕಗಿರಿ: ಅಂಬೇಡ್ಕರ್ ನಾಮಫಲಕ ತೆರವು, ದಾಂದಲೆ.
ಹನ್ನೆರಡು ಜನರ ಮೇಲೆ FIR


ತುಂಗಾವಾಣಿ.
ಕನಕಗಿರಿ: ಎ-7 ತಾಲೂಕಿನ ಉಮಳಿ ಕಾಟಾಪುರ ಗ್ರಾಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ನಾಮ ಫಲಕ ಅಳವಡಿಸುವ ವೇಳೆ ಆದ ಗಲಾಟೆ ಸಂಬಂದಿಸಿದಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಮಳಿ ಕಾಟಾಪುರ ಗ್ರಾಮದ ಹನುಮಂತ ತಂದೆ ಕನಕಪ್ಪ ಉಪ್ಪಾರ ವಿರುಪಾಕ್ಷಿ ತಂದೆ ಹನುಮಂತ, ಯಂಕಣ್ಣ ತಂದೆ ಹನುಮಂತ ಬಸರಿಹಾಳ , ಹುಲಗಪ್ಪ ಗಡಾದ, ಕುಂಟೆಪ್ಪ ತಂದೆ ಹನುಮಂತಪ್ಪ ಪೂಜಾರಿ ಆಂಜನೇಯ ತಂದೆ ಹನುಮಂತ ಪೂಜಾರಿ, ಪರಸಪ್ಪ ತಂದೆ ಪವಾಡೆಪ್ಪ ಗಡಾದ, ಮಾನಪ್ಪ ಗಡಾದರ, ಕುಂಟೆಪ್ಪ ತಂದೆ ತಿರುಪತಿಪ್ಪ ಕಟಗಿಹಳ್ಳಿ, ಬಸವರಾಜ ತಂದೆ ಈರಪ್ಪ ತಳವಾರ, ಯಂಕಪ್ಪ ತಂದೆ ಪುಂಡಯ್ಯ, ಲಕ್ಷ್ಮೀಕಾಂತ ತಂದೆ ಹನುಮಂತ ನಾಯಕ , ಇತರರು ಸೇರಿಕೊಂಡು ಉಮಳಿಕಾಟಾಪುರ ಗ್ರಾಮದ ಮಾದಿಗ ಓಣಿಯಲ್ಲಿ ಹಾಕಲಾಗುತ್ತಿದ್ದ ಡಾ ಬಿ ಆರ್‌ ಅಂಬೇಡ್ಕರ್ ನಾಮಫಲಕ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿ ಜಾತಿನಿಂದನೆ ಮಾಡಿ ಗ್ರಾಮದ ಯುವಕರ ಮೇಲೆ ಹಲ್ಲೆ ಮಾಡಿ ಗಲಭೆ ಸೃಷ್ಟಿಸಿದ್ದು ಈ ಸಂಬಂದ ಈ ಮೇಲಿನ ಹನ್ನೆರಡು ಜನ ಆರೋಪಿತರ ಮೇಲೆ ಕನಕಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪಿಎಸ್‌ಐ ತಾರಾಬಾಯಿ ತನಿಖೆ ಕೈಗೊಂಡಿದ್ದಾರೆ.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ಜೋಗದ ನಾರಾಯಣಪ್ಪ. ಕೆಲೋಜಿ ಸೇರಿದಂತೆ ಹಲವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವೆ. ಎಂದಿದ್ದ ಪೂಜಾರಿ ಮೇಲೆ ಕೇಸ್ ದಾಖಲು.!

ಜೋಗದ ನಾರಾಯಣಪ್ಪ. ಕೆಲೋಜಿ ಸೇರಿದಂತೆ ಹಲವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವೆ. ಎಂದಿದ್ದ ಪೂಜಾರಿ ಮೇಲೆ ಕೇಸ್ ದಾಖಲು.! ತುಂಗಾವಾಣಿ. …