Breaking News

ದೇವಸ್ಥಾನದ ಹುಂಡಿಗೆ ಕನ್ನ ಹಾಕಿದ ಖತರ್ನಾಕ ಕಳ್ಳರ ಬಂಧನ.

ದೇವಸ್ಥಾನದ ಹುಂಡಿಗೆ ಕನ್ನ ಹಾಕಿದ ಖತರ್ನಾಕ ಕಳ್ಳರ ಬಂಧನ.

ತುಂಗಾವಾಣಿ.
ಗಂಗಾವತಿ: ಎ-5 ಗಂಗಾವತಿ ಹಾಗು ಕಾರಟಗಿ ತಾಲ್ಲೂಕಿನ ದೇವಸ್ಥಾನಗಳ ಹುಂಡಿಗಳನ್ನು ಕದ್ದೋಯುತ್ತಿದ್ದ ಖತರ್ನಾಕ್ ಕಳ್ಳರ ಆಟಕ್ಕೆ ಬ್ರೇಕ್ ಹಾಕಿದ ಗಂಗಾವತಿ ಪೋಲಿಸರು.

ಹೌದು ದೇವರು, ದೇವಸ್ಥಾನ ಎಂದರೆ ನಮ್ಮ ಜನಕ್ಕೆ ಭಯ ಭಕ್ತಿ ಜಾಸ್ತಿ, ಆದರೆ ಇಲ್ಲಿ ಮಾತ್ರ ವಿಚಿತ್ರ ರೀತಿಯ ಘಟನೆ ನಡೆದಿದೆ,
ಗಂಗಾವತಿ ಹಾಗು ಕಾರಟಗಿ ತಾಲ್ಲೂಕಿನ ಕೆಲ ದೇವಸ್ಥಾನಕ್ಕೆ ಹೊಂಚು ಹಾಕಿ ದೇವಸ್ಥಾನದ ಹುಂಡಿಯನ್ನೆ ಕೊಂಡೊಯ್ಯುತ್ತಿದ್ದ ಖತರ್ನಾಕ್ ಕಳ್ಳರನ್ನು ಗಂಗಾವತಿ ಪೋಲಿಸರು CDR (ಪೋನ್ ಕಾಲ್) ಮುಖಾಂತರ ಬಲೆಗೆ ಬೀಸಿ ಗಾಳಕ್ಕೆ ಕೆಡವಿದ್ದಾರೆ.

ಜಂಗಮರ ಕಲ್ಗುಡಿ ಗ್ರಾಮದ ಕೋದಂಡರಾಮ ದೇವಸ್ಥಾನ. ಶ್ರೀರಾಮನಗರದ ಕನಕದುರ್ಗಾ ದೇವಸ್ಥಾನ. ಕೃಷ್ಣಾಪೂರ್ ಕ್ಯಾಂಪ್ ಗುಂಡೂರ್ ಕ್ರಾಸಿನಲ್ಲಿರುವ ಶ್ರೀರಾಮ ದೇವಸ್ವಾನ. ರುದೇಶ್ವರದ ನಗರದ ರುದ್ರೇಶ್ವರ ದೇವಸ್ಥಾನ. ವಡ್ಡರಹಟ್ಟಿ ಕ್ಯಾಂಪಿನ ರಾಮದೇವರ ದೇವಸ್ಥಾನ. ದಾಸನಾಳ ಗ್ರಾಮದ ಈಶ್ವರ ದೇವಸ್ಥಾನಗಳ ಹುಂಡಿ ಹೊಡೆದು ಮತ್ತು ಹುಂಡಿ ಸಮೇತವಾಗಿ ಕಳ್ಳತನವಾಗಿದ್ದರ ಬಗ್ಗೆ ಗ್ರಾಮೀಣ ಮತ್ತು ನಗರ ಹಾಗು ಕಾರಟಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ.ಟಿ. ರವರ ಮಾರ್ಗದರ್ಶನದ ಮೇರೆಗೆ ಗಂಗಾವತಿ ಡಿವೈಎಸ್ಪಿ ಆರ್.ಎಸ್ . ಉಜ್ಜನಕೊಪ್ಪ. ಹಾಗು ಉದಯರವಿ CPI ರವರ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ವೈಜ್ಞಾನಿಕ ತಂತ್ರಜ್ಞಾನದ ನೆರವಿನ ಚಾಣಾಕ್ಷತೆಯಿಂದ ಕಳ್ಳರನ್ನು ಸೇರೆಹಿಡಿಯಲಾಗಿದೆ.

ಆರೋಪಿತರಾದ ತಾಯಣ್ಣ ಅಲಿಯಾಸ್ ಬೋಸ್ ಬಾಬರಡ್ಡಿಕ್ಯಾಂಪ್. ಪ್ರಕಾಶ ಗೋವಿಂದ ಬಾಬರಡ್ಡಿಕ್ಯಾಂಪ್, ಮಹೇಶ ನರಸಪ್ಪ ಗೋನಾಳ, ಇವರನ್ನು ಬಂಧಿಸಿ ಒಟ್ಟು 6 ಪ್ರಕರಣಗಳನ್ನು ಭೇದಿಸಿ ಸದರಿ ಆರೋಪಿತರಿಂದ ದೇವಸ್ಥಾನದ ಹುಂಡಿಗಳ ಹಣ ಕಳ್ಳತನ ಮಾಡಿದ ನಗದು ಹಣ ಮತ್ತು ಕೃತ್ಯಕ್ಕೆ ಉಪಯೋಗಿಸಲಾದ ನಾಲ್ಕು ಮೊಬೈಲ್ ಫೋನ್‌ಗಳು ಮತ್ತು ಒಂದು ಮೊಟಾರ್ ಸೈಕಲ್‌ನ್ನು ಜಪ್ತಿ ಪಡಿಸಿಕೊಂಡು ಖತರ್ನಾಕ್ ಕಳ್ಳರನ್ನು ಜೈಲಿಗಟ್ಟಿದ್ದಾರೆ.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ಜೋಗದ ನಾರಾಯಣಪ್ಪ. ಕೆಲೋಜಿ ಸೇರಿದಂತೆ ಹಲವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವೆ. ಎಂದಿದ್ದ ಪೂಜಾರಿ ಮೇಲೆ ಕೇಸ್ ದಾಖಲು.!

ಜೋಗದ ನಾರಾಯಣಪ್ಪ. ಕೆಲೋಜಿ ಸೇರಿದಂತೆ ಹಲವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವೆ. ಎಂದಿದ್ದ ಪೂಜಾರಿ ಮೇಲೆ ಕೇಸ್ ದಾಖಲು.! ತುಂಗಾವಾಣಿ. …