ಗಂಗಾವತಿ: ಪೋಲಿಸ್ ಮೇಲೆ ಹಲ್ಲೇ.
ಮೂವರ ಮೇಲೆ FIR.
ಓರ್ವನ ಬಂಧನ.!

ತುಂಗಾವಾಣಿ.
ಗಂಗಾವತಿ: ಮಾ-28 ನಗರದ ಗುಂಡಮ್ಮಕ್ಯಾಂಪ್ ನ ಮಾರ್ಕೆಟ್ ಪ್ರದೇಶದಲ್ಲಿ ನಗರದ ಟ್ರಾಫಿಕ್ ಪೋಲಿಸ್ ಮೇಲೆ ಹಲ್ಲೇ ನಡೆದ ಘಟನೆ ಮಾ-27 ರ ಸಂಜೆ ನಡೆದಿದೆ.
ನಗರದ ಟ್ರಾಫಿಕ್ ಹೆಡ್ ಕಾನಿಸ್ಟೇಬಲ್ ರವೀಂದ್ರ ಮಹಾವೀರ ಸರ್ಕಲ್ ಹತ್ತಿರ ಟ್ರಾಫಿಕ್ ಕಂಟ್ರೋಲ್ ಕರ್ತವ್ಯದಲ್ಲಿರುವಾಗ. ಮೋಟಾರ ಸೈಕಲ್ ನಂ . ಕೆ.ಎ.-35 ಹೆಚ್ -4214 ನಲ್ಲಿದ್ದ ಮೂವರು ಯುವಕರು ಒಂದೆ ಬೈಕ್ ನಲ್ಲಿ ಅಡ್ಡಾ – ದಿಡ್ಡಿಯಾಗಿ ರಸ್ತೆಯಲ್ಲಿ ಚಲಾಯಿಸುತ್ತಿದ್ದು. ಇದರಿಂದ ಸಾರ್ವಜನಿಕರಿಗೆ ತೊಂದರೆ ಯಾಗಬಹುದು ಎಂದು ಅರೆತ ಕರ್ತವ್ಯದಲ್ಲಿದ್ದ ಟ್ರಾಫಿಕ್ H,C, ರವೀಂದ್ರ ಬೈಕ್ ನಿಲ್ಲಿಸಲು ಪ್ರಯತ್ನಿಸುತ್ತಾರೆ, ಆದರೆ ಬೈಕ್ ಸವಾರರು ನಿಲ್ಲಿಸಿರುವುದಿಲ್ಲ. ಬೈಕ್ ಸವಾರರು ಯಾವುದೇ ರೀತಿಯ ಸಾರ್ವಜನಿಕರಿಗೆ ಅನಾಹುತ ಆಗದಂತೆ ನೋಡಿಕೊಳ್ಳುವ ಸಲುವಾಗಿ ತಮ್ಮ ಮೋಟಾರ ಸೈಕಲ್ ತಗೆದುಕೊಂಡು ಹಿಂಬಾಲಿಸುತ್ತಾರೆ ಹೆಡ್ ಕಾನಿಸ್ಟೇಬಲ್ ರವೀಂದ್ರ
ಪೋಲಿಸ್ ನಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎಂದು ಗಮನಿಸಿದ ಮೂವರು ಸವಾರರು ನೇರವಾಗಿ ಗುಂಡಮ್ಮ ಕ್ಯಾಂಪಿನಲ್ಲಿಯ ಹೊಸ ಮಾರ್ಕೇಟ್ ಒಳಗಡೆಗೆ ಹೋಗ್ತಾರೆ, ಮಾರ್ಕೇಟ್ ಒಳಗಡೆಗೆ ಹೋದ ತಕ್ಷಣ, ಅರ್ಬಾಜಬಾನ್ ಮತ್ತು ರಜ್ಜಾರಖಾನ್ ಮತ್ತು ಇನ್ನೊಬ್ಬ ಒಟ್ಟು ಮೂವರು ಸೇರಿಕೊಂಡು. ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ಹಲ್ಲೇ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ ಎಂದು, ಕಲಂ 353 , 332 , 307 , 504 , 506 ಸಹಿತ 34 ಐ.ಪಿ.ಸಿ ನೇ ಪ್ರಕಾರ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ, ಸಧ್ಯಕ್ಕೆ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು ಇನ್ನಿಬ್ಬರ ಶೋದ ಕಾರ್ಯ ನಡೆದಿದೆ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Tungavani News Latest Online Breaking News