Breaking News

ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ. ಇಬ್ಬರು ಪಿಂಪ್ ಗಳು ಸೇರಿ ನಾಲ್ಕು ಜನರ ಬಂಧನ.!

 ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ.
ಇಬ್ಬರು ಪಿಂಪ್ ಗಳು ಸೇರಿ ನಾಲ್ಕು ಜನರ ಬಂಧನ.!


ತುಂಗಾವಾಣಿ.
ಕೊಪ್ಪಳ: ಮಾ-27 ಜಿಲ್ಲೆಯ ಕನಕಗಿರಿ ಪಟ್ಟಣದ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂದು ಖಚಿತ ಮಾಹಿತಿ ಬಂದ ಹಿನ್ನೆಲೆ, ಮಾ-26 ಮಧ್ಯಾಹ  3-45 ಸಮಯದಲ್ಲಿ ದಾಳಿ ಮಾಡಿ ಇಬ್ಬರು ಪಿಂಪ್ ಗಳು ಸೇರಿ ನಾಲ್ವರನ್ನು ವಶಕ್ಕೆ ಪಡೆದು ಇಬ್ಬರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ.

ಕನಕಗಿರಿ ಪಟ್ಟಣದ ಮಾನಸ ಬಾರ್ & ರೆಸ್ಟೋರೆಂಟ್ ಲಾಡ್ಜ್ ನ ರೂಮ್ ನಂ 202 ಮತ್ತು 207 ರ ಮೇಲೆ ದಾಳಿ ಮಾಡಿದ ಕನಕಗಿರಿ ಪೋಲಿಸರು ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ,
ನಾಲ್ವರಲ್ಲಿ, ಶ್ರೀನಿವಾಸ ತ.ನಾರಾಯಣ, ಮತ್ತು ಗಜೇಂದ್ರ ಸತ್ಯನಾರಾಯಣ ಗದ್ದಿ, ಎಂಬ ವ್ಯಕ್ತಿಗಳು ಇವರು ಸಿಂಧನೂರು ತಾಲ್ಲೂಕಿನ ಹಂಚಿನಾಳ ಕ್ಯಾಂಪ್ ನಿವಾಸಿಗಳು.


(ಪಿಂಪ್) ಕೆಲಸ ಮಾಡುತ್ತಿದ್ದ. ಹನುಮಂತರಾಯ @ಶಸಿ ಮಸ್ಸಿ ಬನ್ನಿಗಿಡದ ಕ್ಯಾಂಪ್, ಮತ್ತು ಪ್ರಭು ಬರಮಣ್ಣ ಮಹೆಬೂಬು ನಗರ ಗಂಗಾವತಿ, ಇವರು ಯುವತಿಯರನ್ನು ಕರೆ ತಂದು ತಮ್ಮ ಆದಾಯಕ್ಕಕಾಗಿ  ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಲಂ 3 (1) , 3 (2) (ಎ) , 4 , 5 ಅನೈತಿಕ ಸಾಗಾಣಿಕೆ ( ತಡೆಗಟ್ಟುವಿಕೆ ) ಕಾಯ್ದೆ 1956 ( ಐ.ಟಿ.ಪಿ.ಎ ) ನೇ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ಜೋಗದ ನಾರಾಯಣಪ್ಪ. ಕೆಲೋಜಿ ಸೇರಿದಂತೆ ಹಲವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವೆ. ಎಂದಿದ್ದ ಪೂಜಾರಿ ಮೇಲೆ ಕೇಸ್ ದಾಖಲು.!

ಜೋಗದ ನಾರಾಯಣಪ್ಪ. ಕೆಲೋಜಿ ಸೇರಿದಂತೆ ಹಲವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವೆ. ಎಂದಿದ್ದ ಪೂಜಾರಿ ಮೇಲೆ ಕೇಸ್ ದಾಖಲು.! ತುಂಗಾವಾಣಿ. …