Breaking News

ಪೋಲಿಸರೆದುರೆ. ಸರ್ಕಾರಿ ಅಧಿಕಾರಿಯ ಮೇಲೆ ಮಾರಣಾಂತಿಕ ಹಲ್ಲೇ.! ಎಂಟು ಜನರ ಬಂಧನ.

ಪೋಲಿಸರೆದುರೆ. ಸರ್ಕಾರಿ ಅಧಿಕಾರಿಯ ಮೇಲೆ ಮಾರಣಾಂತಿಕ ಹಲ್ಲೇ.!
ಎಂಟು ಜನರ ಬಂಧನ.

ತುಂಗಾವಾಣಿ.
ಕೊಪ್ಪಳ: ಮಾ-26 ತಾಲೂಕಿನ ಹಿಟ್ನಾಳ್ – ಬಸಾಪುರ ಟೋಲ್ ಗೇಟ್ ಬಳಿ ಟೋಲ್ ನಲ್ಲಿ ಕಾರ್ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಟೋಲ್ ನಲ್ಲಿ ಕೆಲಸ ಮಾಡುತ್ತಿದ್ದ ಹಿಟ್ನಾಳ್ ಗ್ರಾಮದ ಯುವಕ. ಸರ್ಕಾರಿ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿ, ಮಾತಿನ ಚಕಮಕಿ ನಡೆಸಿದ್ದಾನೆ. ಅದನ್ನೆ ನೆಪ ಮಾಡಿಕೊಂಡ ಸಿಬ್ಬಂದಿ ಹಿಟ್ನಾಳ್ ಗ್ರಾಮದ ಪುಡಿ ರೌಡಿಗಳ ಗ್ಯಾಂಗ್ ಬರಮಾಡಿಕೊಂಡು ಅಧಿಕಾರಿ ಮತ್ತು ಡ್ರೈವರ್ ಹಾಗು ಗುತ್ತಿಗೆದಾರ ಒಟ್ಟು ಮೂರು ಜನರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿಸಿದ್ದಾನೆ.

ಹಲ್ಲೇ ಗೊಳಗಾದವರು ಗಂಗಾವತಿಯ ಜಿಲ್ಲಾ ಪಂಚಾಯತ್ ಕುಡಿಯುವ ನೀರಿನ ವಿಭಾಗದಲ್ಲಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಚಿದಾನಂದ ಹಲ್ಲೆಗೊಳಗಾದ ಅಧಿಕಾರಿ.
ಸ್ಥಳದಲ್ಲೇ ಪೋಲಿಸರು ಇದ್ದರು ಸಹ AEE ಚಿದಾನಂದ ಮತ್ತು ಡ್ರೈವರ್ ಗೆ, ಸಿಕ್ಕ ಸಿಕ್ಕವರು ಹೊಡೆಯುವುದುದನ್ನು ನೋಡಿದರೆ ಇವರಿಗೆ ಮನುಷ್ಯತ್ವ ಇಲ್ಲವೇನೊ ಎನ್ನಿಸ ತೀರದು.

ಮುನಿರಾಬಾದ್ ASI ಮೇಲೆಯೂ ಹಲ್ಲೇ.!
ಇಷ್ಟಕ್ಕೆ ಬಿಡದ ಪುಡಿ ರೌಡಿಗಳು ಸ್ಥಳಕ್ಕೆ ಬಂದ ಮುನಿರಾಬಾದ್ ASI ಯವರನ್ನು ಸಹ ತಳ್ಳಾಡಿ ಹಲ್ಲೇ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ.

ಗಂಭೀರ ಗಾಯಗೊಂಡ ಗಂಗಾವತಿ ಪ್ರಭಾರಿ AEE ಚಿದಾನಂದ ಮತ್ತು ಇನ್ನಿಬ್ಬರನ್ನು ಸ್ಥಳೀಯ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೇ. ಮತ್ತು ಸ್ಥಳೀಯ ASI ಯವರ ಮೇಲೆ ಹಲ್ಲೇ ಕರ್ತವ್ಯಕ್ಕೆ ಅಡ್ಡಿ. ಹೀಗೆ ಪ್ರತ್ಯೇಕ ಎರಡು ಪ್ರಕರಣ ದಾಖಲಿಸಲಾಗಿದೆ.
8 ಜನರನ್ನು ವಶಕ್ಕೆ ಪಡೆದು ಜೈಲಿಗಟ್ಟಿದ್ದಾರೆ. ಇನ್ನೂಳಿದ ಕೆಲವರಿಗೆ ಬಲೆ ಬಿಸಿದ್ದಾರೆ ಮುನಿರಾಬಾದ್ ಪೋಲಿಸರು.!

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ಜೋಗದ ನಾರಾಯಣಪ್ಪ. ಕೆಲೋಜಿ ಸೇರಿದಂತೆ ಹಲವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವೆ. ಎಂದಿದ್ದ ಪೂಜಾರಿ ಮೇಲೆ ಕೇಸ್ ದಾಖಲು.!

ಜೋಗದ ನಾರಾಯಣಪ್ಪ. ಕೆಲೋಜಿ ಸೇರಿದಂತೆ ಹಲವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವೆ. ಎಂದಿದ್ದ ಪೂಜಾರಿ ಮೇಲೆ ಕೇಸ್ ದಾಖಲು.! ತುಂಗಾವಾಣಿ. …