Breaking News

ಸಮಾವೇಶಕ್ಕೆ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರನ್ನು ದುಡ್ಡು ಕೊಟ್ಟು ಕರೆದು ಕೊಂಡು ಬಂದಿದ್ದಾರೆ ರೆಡ್ಡಿ ಆರೋಪ.!

ಸಮಾವೇಶಕ್ಕೆ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರನ್ನು ದುಡ್ಡು ಕೊಟ್ಟು ಕರೆದು ಕೊಂಡು ಬಂದಿದ್ದಾರೆ ರೆಡ್ಡಿ ಆರೋಪ.!

ತುಂಗಾವಾಣಿ.
ಕಾರಟಗಿ: ಪೆ-20 ತಾಲ್ಲೂಕಿನಲ್ಲಿ ಇಂದು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದ ಅಧ್ಯಕ್ಷ ಉಪಾಧ್ಯಕ್ಷರ ಅಭಿನಂದನಾ ಅದ್ದೂರಿ ಸಮಾವೇಶ ಸಮಾರಂಭಕ್ಕೆ ಶಾಸಕ ದಡೆಸೂಗುರು ಬಸವರಾಜ ರವರು ಆಯೋಜಿಸಿದ ಕಾರ್ಯಕ್ರಮಕ್ಕೆ,

ಮುಖ್ಯಮಂತ್ರಿ ಸುಪುತ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ,ವಾಯ್, ವಿಜಯೇಂದ್ರ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ , ಸಚಿವ ಬಿ, ಶ್ರೀರಾಮುಲು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕೆಲಸಕ್ಕೆ ಹೋಗುವ ಜನರನ್ನು ಸಮಾವೇಶಕ್ಕೆ ಕರೆದು ಕೊಂಡು ಬಂದಿದ್ದಾರೆ ಪುರುಷರು ಮತ್ತು ಮಹಿಳೆಯರನ್ನು ₹200 ರೂಪಾಯಿ,ಕೊಟ್ಟು ಮತ್ತು ಟ್ಯಾಕ್ಟರ್ ಬಾಡಿಗೆ ₹3000-/ ಸಾವಿರ ರೂಪಾಯಿ ಯಂತೆ ಕೊಟ್ಟು ಸಮಾವೇಶಕ್ಕೆ ಕರೆತರಲಾಗಿದೆ ತಮ್ಮ ಅಧಿಕಾರದ ಬಲದಿಂದ ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಉದ್ಯೋಗ ಖಾತ್ರಿ ಯೋಜನಡಿಯಲ್ಲಿ ಕೆಲಸಕ್ಕೆ ಹೋಗುವ ಕಾರ್ಮಿಕರನ್ನು ಬಿಜೆಪಿ ಸಮಾವೇಶಕ್ಕೆ ಕರೆದುಕೊಂಡು ಹೋಗಿ, ಮತ್ತು ಎನ್.ಎಮ್.ಆರ್ ನಲ್ಲಿ ಎಂಟ್ರಿ ಮಾಡಿ ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗದೆ ಸಮಾವೇಶ ಹೋಗುವಂತೆ ಸಹಕರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿರುವುದು ಖೇಧಕರ ಅಧಿಕಾರಿಗಳ ನಡೆ ಬಗ್ಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಖಂಡಿಸಿದ್ದಾರೆ.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ರಾಜಕೀಯ ಮಾಡುತ್ತಿದ್ದಾರೆ ಪ್ರಭಾರಿ ಈ.ಓ. ಡಾ.ಮೋಹನ.!? ಅಷ್ಟಕ್ಕೂ ಇ,ಓ ಮಾಡಿದ್ದೆನು.!?

ರಾಜಕೀಯ ಮಾಡುತ್ತಿದ್ದಾರೆ ಪ್ರಭಾರಿ ಈ.ಓ. ಪಶುವೈದ್ಯ ಡಾ.ಮೋಹನ.!? ಅಷ್ಟಕ್ಕೂ ಇ,ಓ ಮಾಡಿದ್ದೆನು.!? ತುಂಗಾವಾಣಿ. ಗಂಗಾವತಿ: ಪೆ-20 ತಾಲ್ಲೂಕಿನ ತಾಲ್ಲೂಕು ಪಂಚಾಯತನ …