ನಿಮ್ಮ ಗ್ರಾಮಕ್ಕೆ ಬರಲಿದ್ದಾರೆ ಜಿಲ್ಲಾಧಿಕಾರಿಗಳು.
ಸ್ಥಳದಲ್ಲೇ ಪರಿಹಾರ.!
ತುಂಗಾವಾಣಿ.
ಗಂಗಾವತಿ: ಪೆ-18 ತಾಲ್ಲೂಕಿನ ವಿವಿಧ ಹೋಬಳಿ ಗಳಿಗೆ ಭೇಟಿಕೊಟ್ಟು ವಾಸ್ತವ್ಯ ಹೂಡಲಿದ್ದಾರೆ, ಜನರ ಕುಂದುಕೊರತೆಗಳನ್ನು ಸ್ಥಳದಲ್ಲೇ ಆಲಿಸಿ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಕೊಪ್ಪಳದ ಜಿಲ್ಲಾಧಿಕಾರಿ ವಿಕಾಶ ಕಿಶೋರ್ ಸುರಳ್ಕರ್ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ, ಇವರಿಗೆ ಕಂದಾಯ ಇಲಾಖೆ ಸೇರಿದಂತೆ ಅನೇಕ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸಾಥ್ ನೀಡಲಿದ್ದಾರೆ,
ಪ್ರತಿ ತಿಂಗಳ ಮೂರನೇ ಶನಿವಾರ ಗಂಗಾವತಿ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯಕ್ಕಾಗಿ ಗ್ರಾಮಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಗಿರುತ್ತದೆ. ಗ್ರಾಮ ವಾಸ್ತವ್ಯಕ್ಕಾಗಿ ಆಯ್ಕೆ ಮಾಡಲಾಗಿರುವ ಗ್ರಾಮಗಳ ವಿವರ.
ಫೆಬ್ರವರಿ 20/02/2021 ಗಂಗಾವತಿ ತಿರುಮಲಾಪೂರ
ಮಾರ್ಚ 20/03/2021 ವೆಂಕಟಗಿರಿ ಎಡಹಳ್ಳಿ
ಎಪ್ರೀಲ್ 17/04/2021 ಮರಳಿ ಅಯೋಧ್ಯ
ಮೇ 15/05/2021 ವೆಂಕಟಗಿರಿ ಅರಳಿಹಳ್ಳಿ
ಜೂನ್ 19/06/2021 ಗಂಗಾವತಿ ರಂಗಾಪೂರ
ಜುಲೈ 17/07/2021 ಮರಳಿ ಹೆಬ್ಬಾಳ
21/08/2021 ಭಟ್ಟರಹಂಚಿನಾಳ
ಸೆಪ್ಟೆಂಬರ್ 18/09/2021 ವೆಂಕಟಗಿರಿ ಲಿಂಗದಹಳ್ಳಿ
ಅಕ್ಟೋಬರ್ 16/10/2021
ಗಂಗಾವತಿ ಹೊಸಳ್ಳಿ ನವೆಂಬರ 20/11/2021 ಮರಳಿ ಮರಳಿ
ಡಿಸೆಂಬರ್ 18/12/2021
ವೆಂಕಟಗಿರಿ ಬಂಡ್ರಾಳ
ಮೇಲ್ಕಾಣಿಸಿದ ಎಲ್ಲಾ ಗ್ರಾಮಗಳಲ್ಲಿ ಆಯಾ ತಿಂಗಳ 3 ನೇ ಶನಿವಾರದಂದು ಗ್ರಾಮ ವಾಸ್ತವ್ಯ ಇರುವುದರಿಂದ ಇದರ ಸದುಪಯೋಗ ಪಡೆದುಕೊಳ್ಳುವಂತೆ ಗಂಗಾವತಿ ತಾಲ್ಲೂಕ ಆಡಳಿತ ತಿಳಿಸಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.