112 ರ ಕಾಲ್ ಕಾರ್ಯ ವೈಖರಿಯ ಬಗ್ಗೆ ಒಂದು ಝಲಕ್.!
ತುಂಗಾವಾಣಿ.
ಕೊಪ್ಪಳ: ಪೆ-15 ಜಿಲ್ಲೆಯಲ್ಲಿ 112 ಹೇಗೆ ಕಾರ್ಯ ನಿರ್ವಹಿಸುತ್ತಿದೆ ಗೊತ್ತಾ.?
ಜನಸಾಮಾನ್ಯರಿಗೆ ಇದರ ಪ್ರಯೋಜನ ಏನಾಗಿದೆ.?
ಜನರ ಕಷ್ಟಕ್ಕೆ ತಲುಪುತ್ತಿದೆಯಾ 112.?
112 ರ ಪ್ರಯೋಜನದ ಬಗ್ಗೆ ಜನಸಾಮಾನ್ಯರ ಪ್ರಶ್ನೆ ಏನಾಗಿತ್ತು.?
112 ರ ಕಾಲ್ ಕರೆ ಮಾಡಿದಾಗ ಯಾರು ಸ್ಪಂದಿಸಿದರು.? ಇವೆಲ್ಲ ಪ್ರಶ್ನೆಗೆ ನಿಮ್ಮ ತುಂಗಾವಾಣಿ ಸಮಗ್ರ ಮಾಹಿತಿ ಕಲೆ ಹಾಕುವ ಸಣ್ಣ ಪ್ರಯತ್ನ ಮಾಡಿದೆ.!
ಕೊಪ್ಪಳ ಜಿಲ್ಲೆ ಮುನಿರಾಬಾದ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ.!
ಪೆ-14 ರ ತಡರಾತ್ರಿ 00-40 am ಸಮಯಕ್ಕೆ 112 ಕ್ಕೆ ಕರೆ ಹೋಗುತ್ತೆ, ತಕ್ಷಣ ಸ್ಪಂದಿಸಿದ ಅಧಿಕಾರಿಗಳು, ಹುಲಗಿ ಗ್ರಾಮದ ಹುಲಿಗೇಮ್ಮ ದೇವಸ್ಥಾನದ ಹತ್ತಿರ ಸಂಶಯಾಸ್ಪದ ವ್ಯಕ್ತಿಯ ಚಲನವಲನ ಕುರಿತು ERV ವಾಹನದಲ್ಲಿ ಬಂದ ಅಧಿಕಾರಿಗಳ ತಂಡ, ಸ್ಥಳಕ್ಕೆ ಭೇಟಿ ನೀಡಿ. ಪರಿಶೀಲನೆ ನಡೆಸಿ, ಮುಂದಿನ ಕ್ರಮಕ್ಕಾಗಿ ಸ್ಥಳೀಯ ಮುನಿರಾಬಾದ್ ಪೋಲಿಸ್ ಠಾಣೆಗೆ ಮಾಹಿತಿ ಕೊಟ್ಟಿದೆ, ಮುನಿರಾಬಾದ್ ಪೋಲಿಸರು ತನಿಖೆ ಕೈಗೊಂಡು ಪರಿಶೀಲನೆ ನಡೆಸುತ್ತಿದ್ದಾರೆ,
ಪೆ-14 ರ ಬೆಳಿಗ್ಗೆ 05-38 am ಸಮಯಕ್ಕೆ, ಚಿಕ್ಕವಂಕಲಕುಂಟಾ ಗ್ರಾಮದಿಂದ ಕುರಿ ಕಳ್ಳರು ಬಂದಿದ್ದಾರೆ ಎನ್ನುವ ಕುರಿತು ಕರೆ ಬರುತ್ತೆ ಆಗ ERV ವಾಹನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂಭವಿಸಿದ ಸ್ಥಳೀಯ ಪೋಲಿಸ್ ಠಾಣೆಗೆ ಮಾಹಿತಿ ನೀಡಿ ತನಿಖೆಗೆ ಸಹಕರಿಸಲು ತಿಳಿಸಿದರು,
ಪೆ-14 ಜಿಲ್ಲೆಯ ಕನಕಗಿರಿ ಪಟ್ಟಣದ ಮುಚ್ಚಿಗೇರ ವಾರ್ಡ್ ನಂ:15 ರಲ್ಲಿ ಕೌಟುಂಬಿಕ ಕಲಹದ ಬಗ್ಗೆ 112 ಕ್ಕೆ ಕರೆ ಬಂದ ತಕ್ಷಣ ERSS-112 ವಾಹನ ಬಂದು ಕೌಟುಂಬಿಕ ಜಗಳ ಬಗೆಹರಿಸಿದ ಪೋಲಿಸರು, ಸ್ಥಳೀಯ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದಾರೆ,
ಪೆ-14 ಜಿಲ್ಲೆಯ 12-30ಕ್ಕೆ ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದಲ್ಲಿ ಕೌಟುಂಬಿಕ ಕಲಹದ ಬಗ್ಗೆ ಕರೆ ಬಂದ ಹಿನ್ನೆಲೆ, ಕೂಡಲೇ ಸ್ಥಳಕ್ಕೆ ಬಂದ ERSS-112 ವಾಹನ ಸ್ಪಂದಿಸಿ, ಜಗಳವನ್ನು ಬಗೆಹರಿಸಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಿದ್ದಾರೆ,
ಪೆ-14 ಜಿಲ್ಲೆಯ ಮುನಿರಾಬಾದ್ ಠಾಣಾ ವ್ಯಾಪ್ತಿಯ ಹೊಸ ಲಿಂಗಾಪುರದಲ್ಲಿ ಕೌಟುಂಬಿಕ ಕಲಹ ಮಾಡುತ್ತಿರುವ ಕುರಿತು ERSS112 ಗೆ ಕರೆ ಬಂದಿದ್ದು, ಕರೆಗೆ ಕೂಡಲೇ ಸ್ಪಂದಿಸಿ ERV ವಾಹನ ಸ್ಥಳಕ್ಕೆ ಭೇಟಿ ನೀಡಿ ಜಗಳವನ್ನು ಬಗೆಹರಿಸಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಲಾಯಿತು,
ಪೆ-14 ರ ಸಮಯ 11-16 pm ಸಮಯಕ್ಕೆ ಗಂಗಾವತಿ ನಗರದ ಹಿರೇಜಂತಕಲ್ ತಂದೆ ಮಗನ ಜಗಳ ಮಾಡುತ್ತಿರುವುದಾಗಿ ERSS112 ಗೆ ಕರೆ ಬಂದಿದ್ದು, ಕರೆಗೆ ಕೂಡಲೇ ಸ್ಪಂದಿಸಿ ERV ವಾಹನ ಸ್ಥಳಕ್ಕೆ ಭೇಟಿ ನೀಡಿ ಜಗಳವನ್ನು ಬಗೆಹರಿಸಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಲಾಯಿತು
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 14 ಪೋಲಿಸ್ ಠಾಣೆಗಳಿದ್ದು ಸಧ್ಯಕ್ಕೆ 112 ಏಳು ವಾಹನ ಸಂಚರಿಸುತ್ತಿವೆ, ಮುಂದಿನ ದಿನಗಳಲ್ಲಿ ಇನ್ನೂ ಏಳು ವಾಹನಗಳು ಬರಲಿವೆ.
ಹೀಗೆ ಹಲವು ಕರೆಗಳು 112 ಕ್ಕೆ ಬರುತಿದ್ದು ಕೂಡಲೇ ಸ್ಪಂದಿಸುತ್ತಿರುವ ಪೋಲಿಸ್ ಅಧಿಕಾರಿಗಳು ಮತ್ತು ಜಿಲ್ಲಾ ವರಿಸ್ಠಾಧಿಕಾರಿ ಟಿ, ಶ್ರೀಧರ್ ರವರ ಮಾರ್ಗದರ್ಶನದಲ್ಲಿ ಬಹಳ ಅಚ್ಚುಕಟ್ಟಾಗಿ ನಿಬಾಹಿಸುತ್ತಿರುವ. 112- ಪೋಲಿಸ್ ಇಲಾಖೆ ಕಾರ್ಯ ವೈಖರಿಯ ಬಗ್ಗೆ ಕೊಪ್ಪಳದ ಜನತೆಯಿಂದ ಶ್ಲಾಘನೀಯ ವ್ಯಕ್ತವಾಗುತ್ತಿದೆ, ಕೊಪ್ಪಳದ ಜನತೆಗೆ ಇನ್ನಷ್ಟು ಹತ್ತಿರ ವಾಗಲಿ ಪೋಲಿಸ್ ಇಲಾಖೆ ಎನ್ನುವುದು ತುಂಗಾವಾಣಿಯ ಆಶಯ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.