Breaking News

ನೂತನ ಗೂಡ್ಸ್ ರೈಲು ಆಗಮನ, ಸಾವಿರಾರು ಕಾರ್ಮಿಕರಿಗೆ ಸಿಕ್ಕಿತು ಕೆಲಸ.

ನೂತನ ಗೂಡ್ಸ್ ರೈಲು ಆಗಮನ,
ಸಾವಿರಾರು ಕಾರ್ಮಿಕರಿಗೆ ಸಿಕ್ಕಿತು ಕೆಲಸ.


ತುಂಗಾವಾಣಿ.
ಗಂಗಾವತಿ.ಜ-14 ನಗರದಲ್ಲಿ ಇಂದು ನೂತನವಾಗಿ ಗೂಡ್ಸ್ ರೈಲು ಆಗಮನವಾಯಿತು.
ಕೊಪ್ಪಳ ಜಿಲ್ಲೆ ಗಂಗಾವತಿ ಭತ್ತದ ನಾಡು ಎಂದೆ ಖ್ಯಾತಿ, ಇಲ್ಲಿಯ ಸೋನಾಮಸೂರಿ ಅಕ್ಕಿ ಹಾಗೂ ಭತ್ತ ಹೊರ ರಾಜ್ಯ, ದೇಶ-ವಿದೇಶಗಳಲ್ಲಿ ಗಂಗಾವತಿ ಅಕ್ಕಿ ಎಂದು ಹೆಸರುವಾಸಿಯಾಗಿದ್ದು, ಇಲ್ಲಿಂದ ಬೆಳೆಯುವ ಭತ್ತ ದಿನ ನಿತ್ಯ ನೂರಾರು ಲಾರಿಗಳಲ್ಲಿ ಹೊರ ರಾಜ್ಯಗಳಿಗೆ ರವಾನಿಸಿದ್ದು, ಇದರಿಂದ ರೈತರಿಗೆ, ವ್ಯಾಪಾರಿ ವರ್ತಕರಿಗೆ ತೊಂದರೆಗಳಿದ್ದವು,

ಈ ಭಾಗಕ್ಕೆ ಈಗ ಗೂಡ್ಸ್ ರೈಲು ಸಂಚಾರವನ್ನು ಪ್ರಾರಂಭಿಸಿರುವುದು ಒಳ್ಳೆಯ ಬೆಳವಣಿಗೆ, ಈ ಮೊದಲು ಪ್ಯಾಸೆಂಜರ್ ರೈಲು ಬರುತ್ತಿತ್ತು ಈಗ
ಹುಬ್ಬಳ್ಳಿಯಿಂದ ನೇರವಾಗಿ ಗಂಗಾವತಿಗೆ ಹೊಸದಾಗಿ ಗೂಡ್ಸ್ ರೈಲ್ವೆ ಸಂಚಾರವನ್ನು ಪ್ರಾರಂಭಿಸಿದ್ದು ಸಾವಿರಾರು ಕಾರ್ಮಿಕ ಕುಟುಂಬ ಹರ್ಷ ವ್ಯಕ್ತಪಡಿಸಿದರು, ಗೂಡ್ಸ್ ರೈಲು ಬಂದಿದ್ದು, ನೂರಾರು ಲಾರಿಯ ಮುಖಾಂತರ ಸಾವಿರದ ಮುನ್ನೂರು ಟನ್ ಅಕ್ಕಿಯನ್ನು ಅಸಾಂ ರಾಜ್ಯಕ್ಕೆ ರವಾನೆಯಾಗಲು ಸಜ್ಜಾಗಿ ನಿಂತಿದೆ.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

72 ನೇ ಗಣರಾಜ್ಯೋತ್ಸವ ಪ್ರಯುಕ್ತ ಖುರೇಶಿ ಗ್ರೂಪಿನಿಂದ ವೃಧ್ದಾಶ್ರಮದಲ್ಲಿ ಊಟದ ವ್ಯವಸ್ಥೆ.

72 ನೇ ಗಣರಾಜ್ಯೋತ್ಸವ ಪ್ರಯುಕ್ತ ಖುರೇಶಿ ಗ್ರೂಪಿನಿಂದ ವೃಧ್ದಾಶ್ರಮದಲ್ಲಿ ಊಟದ ವ್ಯವಸ್ಥೆ. ತುಂಗಾವಾಣಿ ಗಂಗಾವತಿ ಜ 26 ಇಂದು ಗಂಗಾವತಿ …