Breaking News

ಗಂಗಾವತಿ: ಹಾಡು ಹಗಲೇ ಮನೆಗಳ್ಳತನ.

ಗಂಗಾವತಿ: ಹಾಡು ಹಗಲೇ ಮನೆಗಳ್ಳತನ.


ತುಂಗಾವಾಣಿ.
ಗಂಗಾವತಿ: ಪೆ-12 ನಗರದಲ್ಲಿ ಹಾಡುಹಗಲೇ ಮನೆ ಕಳ್ಳತನ ಆಗಿರುವುದು ತಡವಾಗಿ ಬೆಳಕಿಗೆ ಬಂದಿದೆ,
ಗಂಗಾವತಿ ನಗರದಲ್ಲಿ ಇತ್ತಿಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಜಾಸ್ತಿಯಾಗ್ತಿವೆ, ನಗರದ ಹಿರೇಕಂತಕಲ್ ಬಸವಣ್ಣ ದೇವರಗುಡಿ ಹತ್ತಿರದ ನಿವಾಸಿ ಗೌರಮ್ಮ ಗುಗ್ಗರಿ ಎನ್ನುವವರ ಮನೆ ಹಾಡುಹಗಲೇ ಕಳ್ಳತನ ವಾಗಿರುವುದು ಹಿರೇಜಂತಕಲ್ ಜನರು ಬೆಚ್ಚಿ ಬೀಳಿಸುವಂತಾಗಿದೆ, ಗೌರಮ್ಮ ಕುಟುಂಬ ತಮ್ಮ ಹೊಲದ ಕೆಲಸಕ್ಕೆ ಹೋದಾಗ ಹೊಂಚು ಹಾಗಿದ ಕಳ್ಳರು ಅವರ ಮನೆಯ ಬಾಗಿಲ ಚೀಲಕವನ್ನು ತುಂಡರಿಸಿ ಕಳ್ಳತನ ಮಾಡಿದ್ದಾರೆ,

ಇದೆ ಪೆ-10 ರ ಬೆಳಿಗ್ಗೆ ಹತ್ತರಿಂದ ಸಂಜೆ ನಾಲ್ಕು ಘಂಟೆಯ ಅವಧಿಯಲ್ಲಿ ಕಳ್ಳತನ ವಾಗಿದೆ ಎಂದು ಗೌರಮ್ಮ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ,

ನಗದು ಸಹಿತ ಚಿನ್ನಾಭರಣ ಕಳವು.!
ಮನೆಯ ಬಾಗಿಲದ ಬೀಗದ ಚಿಲಕವನ್ನು ಕೊರೆದು , ಮನೆಯೊಳಗೆ ಪ್ರವೇಶ ಮಾಡಿದ ಕಳ್ಳರು, ಮನೆಯ ದೇವರ ಕೋಣೆಯಲ್ಲಿ ಇರಿಸಲಾದ ಟ್ರೆಜರಿ ಲಾಕರ್‌ ಮುರಿದು ಅದರಲ್ಲಿದ್ದ 1 ) ತಲಾ 5 ಗ್ರಾಂ ತೂಕದ ನಾಲ್ಕು ಬಂಗಾರದ ಸುತ್ತುಂಗುರಗಳು ಒಟ್ಟು ತೂಕ 20 ಗ್ರಾಂ, ₹1,00,000-/
2 ) 10 ಗ್ರಾಂ ತೂಕದ ಒಂದು ಬಂಗಾರದ ಬೋರಮಾಳ ಸರ ₹50,000-/
3 ) 5 ಗ್ರಾಂ ತೂಕದ ಒಂದು ಬಂಗಾರದ ಬೋರಮಾಳ ಸರ ₹25,000-00-/
4 ) 7 ಗ್ರಾಂ ತೂಕದ ಒಂದು ಜೊತೆ ಬಂಗಾರದ ಜುಮಕಿ ಬೆಂಡೋಲೆ ₹30,000-00-/
5 ) 5 ಗ್ರಾಂ ತೂಕದ ಬಂಗಾರದ ಒಂದು ಜೊತೆ ಮಾಟಿಲ್ ₹25,000-00-/
6 ) 2.5 ಗ್ರಾಂ ತೂಕದ ಒಂದು ಜೊತೆ ಬಂಗಾರದ ತಾಲಕಡಿ ₹12,000-/
7 ) 10 ಗ್ರಾಂ ತೂಕದ ಒಂದು ಬಂಗಾರದ ಕಠಾಣಿ ಸರ ₹50,000-/
8 ) 150 ಗ್ರಾಂ , ಒಂದು ಜೊತೆ ಬೆಳ್ಳಿಯ ಕಾಲು ಚೈನು ₹9,000-/ 9 ) ಹಾಗೂ ಭತ್ತ ಮಾರಾಟ ಮಾಡಿ ಬಂದ ನಗದು ಹಣ ₹2,50,000-/ ಹೀಗೆ ಒಟ್ಟು 59.5 ಗ್ರಾಂ . ಬಂಗಾರದ ಆಭರಣ ಒಟ್ಟು ಮೌಲ್ಯ, ₹2,92,000-/ ಮತ್ತು 150 ಗ್ರಾಂ , ಬೆಳ್ಳಿಯ ಆಭರಣ ಒಟ್ಟು ಮೊತ್ತ ₹9,000-00 ರೂ , ಒಟ್ಟು ₹5,51,000-/ರೂ ಬೆಲೆಬಾಳುವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ಕಲಂ : 454 , 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ, ಪ್ರಕರಣ ದಾಖಲಿಸಿಕೊಂಡ ನಗರ ಠಾಣೆಯ ಪೋಲಿಸರು ಬೆರಳಚ್ಚು ತಜ್ಞರು ಮತ್ತು ಶ್ವಾನ ದಿಂದ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.!

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ಕೊಪ್ಪಳ: ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ ವ್ಯಕ್ತಿ ಗಡಿಪಾರು.! ಯಾರು ಆ ವ್ಯಕ್ತಿ.!?

ಕೊಪ್ಪಳ: ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ ವ್ಯಕ್ತಿ ಗಡಿಪಾರು.! ಯಾರು ಆ ವ್ಯಕ್ತಿ.!? ತುಂಗಾವಾಣಿ. ಕೊಪ್ಪಳ: ಪೆ-9 ಜಿಲ್ಲೆಯಲ್ಲಿದೆ ಪದೇ …