Breaking News

ಕಲ್ಲು ಕ್ವಾರಿಗೆ ದಿಢೀರ್ ಭೇಟಿಕೊಟ್ಟ DC.

ಕಲ್ಲು ಕ್ವಾರಿಗೆ ದಿಢೀರ್ ಭೇಟಿಕೊಟ್ಟ DC.


ತುಂಗಾವಾಣಿ.
ಗಂಗಾವತಿ: ಪೆ-11 ತಾಲ್ಲೂಕಿನ ವೆಂಕಟಗಿರಿ ಹೋಬಳಿ ಮತ್ತು ಮಲ್ಲಾಪುರ ಸೀಮೆ ಹೀಗೆ ಅನೇಕ ಕಡೆ ದಿಢೀರ್ ಭೇಟಿ ಕೊಟ್ಟ ಜಿಲ್ಲಾಧಿಕಾರಿ ಪ್ರತ್ಯಕ್ಷ ವರದಿ.

ಕೊಪ್ಪಳದ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್ ಗಂಗಾವತಿ ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕೃತ ಮತ್ತು ಅನಧಿಕೃತ ಕಲ್ಲು ಕ್ವಾರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ತುಂಗಾವಾಣಿ ಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಕ್ರಷರ್ ಮಾಲೀಕರು ಕಲ್ಲು ಕ್ವಾರಿಗಳಲ್ಲಿ ಬ್ಲಾಸ್ಟ್ ಮಾಡುವ ಪರವಾನಿಗೆ ಯಾವಾಗ ತಗೆದುಕೊಂಡಿದ್ದರು, ಎಲ್ಲಿಯವರೆಗೆ ಅವಧಿ ಇದೆ ಎಂದು ಪರಿಶೀಲನೆ ನಡೆಸಲಾಗಿದೆ, ಇದುವರೆಗೆ ಯಾರು ಯಾರು ಬ್ಲಾಸ್ಟ್ ಪರವಾನಿಗೆ ತಗೆದುಕೊಂಡಿದ್ದಾರೆ, ಎಷ್ಟರಮಟ್ಟಿಗೆ ಬ್ಲಾಸ್ಟ್ ಮಾಡಲು ಅವಕಾಶ ಪರವಾನಿಗೆ ಇದೆ, ಜಿಲ್ಲಾಡಳಿತಕ್ಕೆ ಇದುವರೆಗೆ ಬ್ಲಾಸ್ಟ್ ಬಗ್ಗೆ ಮಾಹಿತಿ ಎಷ್ಟು ನೀಡಿದ್ದಾರೆ ಅದರ ಪರಿಶೀಲನೆ ನಡೆದಿದೆ,

ಅನಧಿಕೃತವಾಗಿ ಬೋರ್ ಬ್ಲಾಸ್ಟ್ ಮಾಡುವ ಕ್ರಷರ್ ಮಾಲೀಕರಿಗೆ ಪರವಾನಿಗೆ ಕೊಡಬೇಕೋ ಅಥವಾ ಬೇಡವೊ ಎಂದು ಅರಣ್ಯ ಇಲಾಖೆ ಮತ್ತು ಗಣಿ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು,

ಕಳೆದ ಜ-22 ರಂದು “ಬೋರ್ ಬ್ಲಾಸ್ಟ್ ಗೆ ನಲುಗುತ್ತಿದೆ ವೆಂಕಟಗಿರಿ.!” ಮುತ್ತಪ್ಪನ ಘನಾಂಧಾರಿ ಕೆಲಸ ಎಂಥದ್ದು ಗೊತ್ತಾ..? ಎಂಬ ಶೀರ್ಷಿಕೆ ಅಡಿಯಲ್ಲಿ ತುಂಗಾವಾಣಿ ವಿಸ್ತೃತ ವರದಿ ಮಾಡಿತ್ತು.

ಬೋರ್ ಬ್ಲಾಸ್ಟ್ ಗೆ ನಲುಗುತ್ತಿದೆ ವೆಂಕಟಗಿರಿ.! ಮುತ್ತಪ್ಪನ ಘನಾಂಧಾರಿ ಕೆಲಸ ಎಂಥದ್ದು ಗೊತ್ತಾ..?

 

ಜಿಲ್ಲಾಧಿಕಾರಿಗಳ ಭೇಟಿಕೊಟ್ಟ ಸಂದರ್ಭದಲ್ಲಿ ಗಂಗಾವತಿ ತಹಶೀಲ್ದಾರರು ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಹಾಗು ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತಿ ಇದ್ದರು,

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129