ಭೀಕರ ರಸ್ತೆ ಅಪಘಾತ
ಸ್ಥಳದಲ್ಲೆ ಯುವಕ ಸಾವು ಇನ್ನೊಬ್ಬರ ಸ್ಥಿತಿ ಗಂಭೀರ.!
ತುಂಗಾವಾಣಿ.
ಗಂಗಾವತಿ: ಜ-25 ತಾಲ್ಲೂಕಿನ ಗಂಗಾವತಿ ಕಂಪ್ಲಿ ರಸ್ತೆಯ ಮಧ್ಯ ಬರುವ ದೇವಿನಗರದ ಹತ್ತಿರ ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಯುವಕ ಮೃತಪಟ್ಟ ಘಟನೆ ನಡೆದಿದೆ,
ಮೃತಪಟ್ಟ ದುರ್ದೈವಿ ಬಸವರಾಜ ಬಾದನಟ್ಟಿ ಪಂಪಾಪತಿ (19) ಎಂದು ಗುರುತಿಸಲಾಗಿದೆ,
ಇನ್ನೊಬ್ಬ ವ್ಯಕ್ತಿ ಅಂಬರೀಶ್ ಚಿಕ್ಕ ಜಂತಕಲ್, ಗಾಯಾಳು ಸ್ಥಿತಿ ಗಂಭೀರ ಸ್ವರೂಪದ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ರವಾನಿಸಲಾಗಿದೆ,
ಇಬ್ಬರು ತಾಲ್ಲೂಕಿನ ಚಿಕ್ಕ ಜಂತಕಲ್ ನಿವಾಸಿಗಳು, ಘಟನಾ ಸ್ಥಳಕ್ಕೆ ಗ್ರಾಮೀಣ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.