Breaking News

ರೈಸ್‌ಮಿಲ್‌ಗಳ ಮೇಲೆ ದಾಳಿ ಅಪಾರ ಪ್ರಮಾಣದ ಪಡಿತರ ಅಕ್ಕಿ ಜಪ್ತಿ.

ರೈಸ್‌ಮಿಲ್‌ಗಳ ಮೇಲೆ ದಾಳಿ ಅಪಾರ ಪ್ರಮಾಣದ ಪಡಿತರ ಅಕ್ಕಿ ಜಪ್ತಿ.

ತುಂಗಾವಾಣಿ
ಗಂಗಾವತಿ ಜ 21 ಗಂಗಾವತಿ ತಾಲೂಕಿನ ಆರು ಕಡೆಗಳಲ್ಲಿ ದಾಳಿ ಮಾಡಿದ ಜಿಲ್ಲಾಡಳಿತದ ಅಧಿಕಾರಿಗಳು ಅಪಾರ ಪ್ರಮಾಣದ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ ಜಪ್ತಿ ಮಾಡಿರುವ ಅಕ್ಕಿಯು ಸರ್ಕಾರ ವಿತರಿಸುವ ಅನ್ನಭಾಗ್ಯ ಅಕ್ಕಿಯೇ ? ಅಥವಾ ಮಂಡಕ್ಕಿ ತಯಾರಿಸಲು ಉಪಯೋಗಿಸುವ ಐಆರ್64 ಅಕ್ಕಿಯೇ ? ಅನ್ನುವ ಗೊಂದಲ ಏರ್ಪಟ್ಟಿದೆ.? ನಗರದಲ್ಲಿ ಪಡಿತರ ಅಕ್ಕಿಯನ್ನು ಅಕ್ರಮ ದಾಸ್ತಾನು ಮಾಡಿ ಮಿಲ್ಲುಗಳಲ್ಲಿ ಪಾಲಿಶ್ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಗುಮಾನಿ ಇದ್ದೆ ಇದೆ. ಆದರೆ ಇಂದು ಜಪ್ತಿ ಮಾಡಿರುವ ಅಕ್ಕಿಯು ಐಆರ್ 64 ಮಾದರಿಯ ಅಕ್ಕಿಯಾಗಿದ್ದು ಪಡಿತರ ವಿತರಿಸುವ ಅಕ್ಕಿ ಅಲ್ಲ ಅಂತ ಅಕ್ಕಿ ದಾಸ್ತಾನು ಹೊಂದಿದ್ದ ರೈಸ್‌ಮಿಲ್‌ ಮಾಲೀಕರ ಅಂಬೋಣವಾಗಿದೆ.

ಸ್ವತಃ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ವರಿಷ್ಠಾಧಿಕಾರಿ ಟಿ ಶ್ರೀಧರ್, ಜಿಲ್ಲಾ ಉಪ ವಿಭಾಗಾಧಿಕಾರಿ ನಾರಾಯಣ ರೆಡ್ಡಿ , ಜಿಲ್ಲಾ ಆಹಾರ ಉಪ ನಿರ್ದೇಶಕ ಶಾಂತಗೌಡ ನೇತೃತ್ವದಲ್ಲಿ ತಾಲೂಕಿನ ಕಂದಾಯ ಇಲಾಖೆ, ಆಹಾರ ಇಲಾಖೆ ಅಧಿಕಾರಿಗಳು ಹಾಗು ಪೋಲಿಸ್ ಇಲಾಖೆ ಅಧಿಕಾರಿಗಳ ಜೊತೆ ಅಹೋರಾತ್ರಿ ಮತ್ತು ಇಂದು ದಾಳಿ ಮಾಡಿದ್ದು ಎರಡು ಖಾಸಗಿ ರೈಸ್‌ಮಿಲ್ ಹಾಗು ಗೋಡಾನುಗಳು ಮತ್ತು ಕೆಲವು ಮನೆಗಳನ್ನು ಪರಿಶೀಲಿಸಿ ಪಡಿತರ ವಿತರಿಸುವ ಅನ್ನಭಾಗ್ಯ ಅಕ್ಕಿಯನ್ನು ಹೋಲುವ ನಾಲ್ಕು ಲೋಡ್ ಅಕ್ಕಿಯನ್ನು ಜಪ್ತಿಮಾಡಿ ಲಾರಿ ಮಾಲೀಕರು ಹಾಗು ಅಕ್ರಮ ದಾಸ್ತಾನು ಹೊಂದಿರುವ ರೈಸ್‌ಮಿಲ್ ಗೋಡಾನ್ ಮಾಲೀಕರ ಮೇಲೆ ಪ್ರಕರಣ ದಾಖಲು ಮಾಡುತ್ತಿದ್ದಾರೆ.

ತುಂಗಾವಾಣಿಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಜಿಲ್ಲೆಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ವಿದೇಶಗಳಿಗೆ ರಪ್ತು ಮಾಡುತ್ತಿರುವ ಬಗ್ಗೆ ಎಸ್ ಪಿ ಅವರಿಗೆ ಮಾಹಿತಿ ಬಂದಿದ್ದು ಅದರಂತೆ ನಿನ್ನೆ ರಾತ್ರಿಯಿಂದ ಗಂಗಾವತಿ ತಾಲೂಕಿನ ವಿವಿದ ಕಡೆಗಳಲ್ಲಿ ದಾಳಿ ಮಾಡಿದ್ದು ನಾಲ್ಕು ಲೋಡ್‌ಗಳಷ್ಟು ಅಕ್ಕಿಯನ್ನು ಜಪ್ತಿ ಮಾಡಲಾಗಿದೆ ಜಪ್ತಿ ಮಾಡಿರುವ ಅಕ್ಕಿಯ ಪ್ರಮಾಣ ಮತ್ತು ಅಕ್ಕಿಯ ನೈಜತೆ ಜಿಲ್ಲಾ ಆಹಾರ ಇಲಾಖೆಯ ಅಧಿಕಾರಿಗಳು ಪರೀಶಿಲಿಸಿ ವರದಿ ನೀಡಲಿದ್ದಾರೆ ಆಹಾರ ಇಲಾಖೆಯ ವರದಿ ಆಧರಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಜಿಲ್ಲೆಯ ಇತರೆ ತಾಲೂಕುಗಳಲ್ಲಿ ದಾಳಿ ಮಾಡಲು ತಂಡ ರಚಿಸಲಾಗಿದೆ ಎಂದರು.

ರೈಸ್‌ಮಿಲ್‌ಗಳ ಮಾಲೀಕರ ಹೇಳಿಕೆಯಂತೆ ಅಧಿಕಾರಿಗಳು ಜಪ್ತಿಮಾಡಿದ ಅಕ್ಕಿಯು ಮಂಡಕ್ಕಿ ತಯಾರಿಸಲು ಉಪಯೋಗಿಸುವ ಗಂಗಾವತಿ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆಯುವ ಐಆರ್ 64 ಅಕ್ಕಿಯಾಗಿದ್ದು ತಾಲೂಕಿನ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸತ್ಯವಲ್ಲದ ಮಾಹಿತಿ ನೀಡಿದ್ದಾರೆ ಅಕ್ಕಿಯನ್ನು ನುರಿತ ಆಹಾರ ತಜ್ಞರಿಂದ ಪರೀಶಿಲಿದರೆ ಗೊತ್ತಾಗಲಿದೆ ಎನ್ನುತ್ತಿದ್ದಾರೆ.

ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ಗಂಗಾವತಿ: ಹಾಡು ಹಗಲೇ ಮನೆಗಳ್ಳತನ.

ಗಂಗಾವತಿ: ಹಾಡು ಹಗಲೇ ಮನೆಗಳ್ಳತನ. ತುಂಗಾವಾಣಿ. ಗಂಗಾವತಿ: ಪೆ-12 ನಗರದಲ್ಲಿ ಹಾಡುಹಗಲೇ ಮನೆ ಕಳ್ಳತನ ಆಗಿರುವುದು ತಡವಾಗಿ ಬೆಳಕಿಗೆ ಬಂದಿದೆ, …