ಧೂಳು ಮುಕ್ತ ಮಾಡಲು ಹೋರಟವರು ಯಾರು ಗೊತ್ತೆ..!?
ಪೊರಕೆ ಹಿಡಿದವರು ಯಾರು ಯಾರು!?
ತುಂಗಾವಾಣಿ.
ಗಂಗಾವತಿ: ಜ-4 ನಗರ ಮೊದಲಿನ ಹಾಗೆ ಇಲ್ಲ ಯಾವುದೇ ರಸ್ತೆ ನೋಡಿದರು ಧೂಳು ಧೂಳು ಅಷ್ಟು ಗಬ್ಬೆದ್ದು ಹೋಗಿದ್ದು ನಗರಸಭೆಯ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ, ಇದನ್ನು ಮನಗಂಡ ನಗರಸಭೆಯ ನೂತನ ಅಧ್ಯಕ್ಷೆ ಮಾಲಾಶ್ರೀ ಮತ್ತು ಅವರ ಪಕ್ಷದ ಎಲ್ಲಾ ಸದಸ್ಯರು ಮತ್ತು ಪೌರಾಯುಕ್ತ ಅರವಿಂದ ಜಮಖಂಡಿ ನಗರದ ಪ್ರಮುಖ ವೃತ್ತದಲ್ಲಿ ಕಸಬರಗಿ ಹಿಡಿದು ಕಸ ಗುಡಿಸುವ ಮುಖಾಂತರ ಅಚ್ಚರಿ ಮೂಡಿಸಿದರು,
ಹೌದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇಂದು ಬೆಳಂಬೆಳಿಗ್ಗೆ ಪೊರಕೆ ಹಿಡಿದು ರಸ್ತೆಗೆ ಬಂದ ಅಧ್ಯಕ್ಷೆ ಮಾಲಾಶ್ರೀ ಸರಳತೆ ಮರೆದರು, ಇಂದಿನಿಂದ ಪ್ರತಿ ರವಿವಾರ ಮತ್ತು ಗುರುವಾರ ನಗರದ ಎಲ್ಲಾ ವೃತ್ತದಲ್ಲಿ ಸ್ವಚ್ಚತೆಗೆ ಆಧ್ಯತೆ ಕೊಡಲಾಗುವುದು ಎಂದು ತಿಳಿಸಿದರು, ಈ ಕಾರ್ಯಕ್ರಮ ಮುಂದೆ ಹೀಗೆ ಸಾಗುತ್ತಾ ಅಥವಾ ಪೋಟೊ ಪೋಜ್ ಆಗುತ್ತಾ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,?
ಈ ಸಂದರ್ಭದಲ್ಲಿ ನಗರಸಭೆಯ ಸ್ಥಾಯಿಸಮಿತಿ ಅಧ್ಯಕ್ಷ ಬಿಚುಗತ್ತಿ ಜಬ್ಬಾರ್, ಉಪಾಧ್ಯಕ್ಷೆ ಸುಧಾ, ಹಿರಿಯ ಸದಸ್ಯರಾದ ಶಾಮೀದ್ ಮನಿಯಾರ್ ಮನೋಹರ ಸ್ವಾಮಿ, ಮೌಲಾಸಾಬ, ರಾಮು ಕಿರಿಕಿರಿ, ಇನ್ನೂ ಅನೇಕ ಸದಸ್ಯರು ಭಾಗಿಯಾಗಿದ್ದರು.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.