ಗಂಗಾವತಿ ನಗರಸಭೆ ಉಪಾಧ್ಯಕ್ಷೆ ನಾಪತ್ತೆ.!?
ಮತ್ತೊಂದು ಹೈಡ್ರಾಮಕ್ಕೆ ಸಾಕ್ಷಿ ಯಾಗುತ್ತಾ ಗಂಗಾವತಿ ನಗರಸಭೆ..!?

ತುಂಗಾವಾಣಿ.
ಗಂಗಾವತಿ: ನ-20 ಉಚ್ಚ ನ್ಯಾಯಾಲಯ ನಗರಸಭೆ ಪುರಸಭೆ ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ರದ್ದು ಪಡಿಸಿ ನಿನ್ನೆ ಮಹತ್ವದ ತೀರ್ಪು ನೀಡಿತ್ತು,
ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ರದ್ದು ಹಿನ್ನೆಲೆ ಗಂಗಾವತಿ ನಗರಸಭೆ ಯ ನೂತನ ಉಪಾಧ್ಯಕ್ಷೆ ಸುಧಾ ಸೋಮನಾಥ ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ,
ನವೆಂಬರ್-2 ರಂದು ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಚಿಹ್ನೆಯಿಂದ ಗೆದ್ದು ಕಾಂಗ್ರೆಸ್ ಸದಸ್ಯರ ಬೆಂಬಲವನ್ನು ಪಡೆದು ಉಪಾಧ್ಯಕ್ಷೆ ಸ್ಥಾನ ಅಲಂಕರಿಸಿದ ಸುಧಾ ಸೋಮನಾಥ ನಿನ್ನೆ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಉಪಾಧ್ಯಕ್ಷೆ, ಕೋರ್ಟ್ ತಡೆಯಾಜ್ಞೆ ಬರುತ್ತಿದ್ದಂತೆ ನಾಪತ್ತೆಯಾಗಿರುವುದು ಕಾಂಗ್ರೆಸ್ ವಲಯದಲ್ಲಿ ದೊಡ್ಡ ಬಿರುಗಾಳಿಯೆ ಎಬ್ಬಿಸಿದೆ,!
ಹೌದು ಗಂಗಾವತಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿಯನ್ನು ಕೋರ್ಟ್ ರದ್ದು ಪಡಿಸಿದೆ ಎನ್ನುವ ಸುದ್ದಿ ಹಬ್ಬುತ್ತಲೇ ಉಪಾಧ್ಯಕ್ಷೆ ಕಾಣೆಯಾಗದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿರುವುದು ಭಾರಿ ಸಂಚಲನ ಮೂಡಿದೆ, ಈ ಕುರಿತು ತುಂಗಾವಾಣಿ ಸುಧಾ ಸೋಮನಾಥರವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರ ಪೋನ್ ಗೆ ದೊರೆತಿಲ್ಲ..!!
ಮತ್ತೆ ನಗರಸಭೆ ಗದ್ದುಗೆ ಯಾರ ಪಾಲಿಗೆ..?
ಮತ್ತೆ ಯಾರು ಗದ್ದುಗೆ ಹಿಡಿಯುತ್ತಾರೆ, ಎನ್ನುವ ಕುತೂಹಲ ಕೆರಳಿಸಿರುವುದಂತೂ ಸತ್ಯ..!!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.
Tungavani News Latest Online Breaking News
