Breaking News

ಗಂಗಾವತಿ: ಅತ್ಯಾಚಾರಿಗೆ ಕಠಿಣ ಶಿಕ್ಷೆ. ಸಂತ್ರಸ್ಥ ಬಾಲಕಿಗೆ ನ್ಯಾಯ ಒದಗಿಸಿದ ಜಿಲ್ಲಾ ನ್ಯಾಯಾಲಯ

ಗಂಗಾವತಿ: ಅತ್ಯಾಚಾರಿಗೆ ಕಠಿಣ ಶಿಕ್ಷೆ.
ಸಂತ್ರಸ್ಥ ಬಾಲಕಿಗೆ ನ್ಯಾಯ ಒದಗಿಸಿದ ಜಿಲ್ಲಾ ನ್ಯಾಯಾಲಯ.

ತುಂಗಾವಾಣಿ
ಕೊಪ್ಪಳ ನ 18 ಗಂಗಾವತಿಯಲ್ಲಿ 2016 ರಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸತ್ರ ನ್ಯಾಯಾಲಯವು ತೀವ್ರ ವಿಚಾರಣೆಯ ಬಳಿಕ ತೀರ್ಪು ನೀಡಿದ್ದು ಗಂಗಾವತಿಯ ಲಕ್ಷ್ಮಿ ಕ್ಯಾಂಪ್ ನಿವಾಸಿ ಅತ್ಯಾಚಾರ ಆರೋಪಿ ಹನುಮೇಶ ತಂದೆ ಹನುಮಂತಪ್ಪ (26) ನಿಗೆ ಹತ್ತು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ 25000/- ದಂಡ ವಿಧಿಸಿ ತೀರ್ಪು ನೀಡಿದೆ.

ಜಾಹೀರಾತು
2016 ರಲ್ಲಿ ಆರೋಪಿ ಹನುಮೇಶ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ವಂಚಿಸಿದ್ದ ನಂತರ ಅಪ್ರಾಪ್ತ ಬಾಲಕಿಯು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು ಈ ಸಂಬಂಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪೋಕ್ಸೋ ಕಾಯ್ದೆ 2012 ರಡಿ ಪ್ರಕರಣ ದಾಖಲಾಗಿತ್ತು
ತನಿಖೆ ಕೈಗೊಂಡ ಗ್ರಾಮೀಣ ಠಾಣೆಯ ಅಧಿಕಾರಿಗಳು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು ಸದ್ರಿ ನ್ಯಾಯಾಲಯವು ಆರೋಪಿ ಹನುಮೇಶ ತಪ್ಪಿತಸ್ಥನೆಂದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ) ದ ನ್ಯಾಯಾಧೀಶರಾದ ಶಂಕರ ಜಾಲವಾಡಿ ಅವರು ಇಂದು ದಿನಾಂಕ 18-11-2020 ರಂದು ಆರೋಪಿತನಿಗೆ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಹತ್ತು ವರ್ಷ ಕಾರಾಗೃಹ ಶಿಕ್ಷೆಯ ಜೊತೆ 25 ಸಾವಿರ ರೂಗಳ ದಂಡ ವಿದಿಸಿದ್ದು ದಂಡ ಕಟ್ಟವುದು ತಪ್ಪಿದ್ದಲ್ಲಿ ಇನ್ನೂ ಆರು ತಿಂಗಳ ಹೆಚ್ಚುವರಿ ಶಿಕ್ಷೆಯನ್ನು ನೀಡಿ ಆದೇಶಿಸಿ ಅಪ್ರಾಪ್ತ ಬಾಲಕಿಗೆ ನ್ಯಾಯ ಒದಗಿಸಿದೆ.

ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.

 

Check Also

ಗಂಗಾವತಿ ಖಾಸಗಿ ಶಾಲೆಗೆ ಸರ್ಕಾರದ ಆದೇಶ ಲೆಕ್ಕಕ್ಕಿಲ್ಲ.!! ರಾಜ್ಯ ಮತ್ತು ಕೇಂದ್ರ ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು.!?

ಗಂಗಾವತಿ ಖಾಸಗಿ ಶಾಲೆಗೆ ಸರ್ಕಾರದ ಆದೇಶ ಲೆಕ್ಕಕ್ಕಿಲ್ಲ.!! ರಾಜ್ಯ ಮತ್ತು ಕೇಂದ್ರ ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು.!? ತುಂಗಾವಾಣಿ. ಗಂಗಾವತಿ: ನಗರದ …