Breaking News

ತುಂಗಾವಾಣಿ ಮನವಿಗೆ ಸ್ಪಂದಿಸಿದ ಕನಕಗಿರಿ ಶಾಸಕ ಬಸವರಾಜ ದಡೆಸೂಗುರು. ಹುಸೇನಬಾಷಾನ ಮನೆಗೆ ಬಂತು ತ್ರಿಚಕ್ರ ವಾಹನ.

ತುಂಗಾವಾಣಿ ಮನವಿಗೆ ಸ್ಪಂದಿಸಿದ ಕನಕಗಿರಿ ಶಾಸಕ ಬಸವರಾಜ ದಡೆಸೂಗುರು.

ಹುಸೇನಬಾಷಾನ ಮನೆಗೆ ಬಂತು ತ್ರಿಚಕ್ರ ವಾಹನ.

ಕೊಪ್ಪಳ
ತುಂಗಾವಾಣಿ ನ 17 ಕಳೆದ ಮೂರ್ನಾಲ್ಕು ವರ್ಷಗಳಿಂದ ತ್ರಿಚಕ್ರ ವಾಹನ ಪಡೆಯಲು ಸರಕಾರಿ ಕಛೇರಿ ಸುತ್ತಿ ಸುತ್ತಿ ಬೇಸತ್ತಿದ್ದ ಕನಕಗಿರಿಯ ವಿಕಲಚೇತನ ಹುಸೇನಬಾಷ ನಿಗೆ ನೆರವಾಗಲು ಕನಕಗಿರಿ ಕ್ಷೇತ್ರದ ಶಾಸಕ ದಡೇಸೂಗೂರ ಬಸವರಾಜ್ ರನ್ನು ತುಂಗಾವಾಣಿ ಪತ್ರಿಕೆ ಮಾಡಿದ ಮನವಿಗೆ ಸ್ಪಂದಿಸಿದ ಶಾಸಕರು ವಿಕಲಚೇತನ ಹುಸೇನಬಾಷನಿಗೆ ದೀಪಾವಳಿಯ ಹಬ್ಬದ ದಿನ ತ್ರಿಚಕ್ರ ವಾಹನವನ್ನು ನೀಡಿದ್ದಾರೆ.


ತ್ರಿ ಚಕ್ರ ವಾಹನ ಪಡೆದು ಮಾತನಾಡಿದ ಹುಸೇನಬಾಷಾ ಇಪ್ಪತ್ತು ವರ್ಷಗಳ ಹಿಂದೆ ರೈಸ್ ಮಿಲ್ಲನಲ್ಲಿ ಕೆಲಸದ ವೇಳೆ ಅವಘಡ ಸಂಭವಿಸಿ ಕಾಲು ಕಳೆದುಕೊಂಡಿದ್ದು ಉಪಜೀವನಕ್ಕೆ ಕಟ್ಟಿಗೆ ಒಡೆಯುವ ಕಾಯಕ ಮಾಡುತ್ತಿದ್ದೇನೆ, ಕೆಲಸಕ್ಕಾಗಿ ಹೊರಹೋಗಲು ತುಂಬಾ ಅನಾನುಕೂಲವಾಗುತ್ತಿತ್ತು ಸರಕಾರದಿಂದ ಕೊಡುವ ತ್ರಿಚಕ್ರ ವಾಹನ ಪಡೆಯಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದೆ ಆದರೆ ಯಾವುದೇ ಪ್ರಯೋಜನವಾಗದೇ ನಿಸ್ಸಾಯಕನಾಗಿದ್ದೆ ಕಳೆದ ಅಗಷ್ಟನಲ್ಲಿ ತುಂಗಾವಾಣಿ ಪತ್ರಿಕೆ ಯವರು ನನ್ನ ಕಷ್ಟ ನೋಡಲಾಗದೇ ಶಾಸಕರಿಗೆ ವಿನಂತಿಮಾಡಿದ್ದರು ಈಗ ಶಾಸಕರು ನನಗೆ ತ್ರೀಚಕ್ರ ವಾಹನ ಮಂಜೂರು ಮಾಡಿದ್ದಾರೆ ನನಗೆ ತುಂಬ ಖುಷಿಯಾಗಿದ್ದು ಕನಕಗಿರಿ ಶಾಸಕ ದಡೇಸುಗೂರ ಬಸವರಾಜ ಹಾಗು ತುಂಗಾವಾಣಿ ಪತ್ರಿಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ಸವಾರನಿಲ್ಲದೆ ಚಲಿಸುತ್ತೆ ಬೈಕ್..! ಸಿ,ಸಿ,ಟಿವಿಯಲ್ಲಿ ಬಯಲು..!

ಸವಾರನಿಲ್ಲದೆ ಚಲಿಸುತ್ತೆ ಬೈಕ್..! ಸಿ,ಸಿ,ಟಿವಿಯಲ್ಲಿ ಬಯಲು..! ತುಂಗಾವಾಣಿ. ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಧ್ಯರಾತ್ರಿ …