Breaking News

ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಇನ್ನಿಲ್ಲ

ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಇನ್ನಿಲ್ಲ


ತುಂಗಾವಾಣಿ.
ಬೆಂಗಳೂರು: ರವಿ ಬೆಳಗೆರೆ ಎಂಬ ಅಕ್ಷರ ಮಾಂತ್ರಿಕ ದೈತ್ಯ ಪ್ರತಿಭೆ.. ಅಕ್ಷರಗಳನ್ನೇ ಬದುಕಾಗಿಸಿಕೊಂಡವರು. ಹಾಯ್​ ಬೆಂಗಳೂರು ಎಂಬ ಪತ್ರಿಕೆಯಿಂದ ಕನ್ನಡಿಗರ ಮನ ಗೆದ್ದವರು ಅವರು. ವೈಯಕ್ತಿಕ ಬದುಕಿನಲ್ಲಿ ಹಾಗೂ ಆರೋಗ್ಯದ ದೃಷ್ಟಿಯಿಂದಲೂ ಸಾಕಷ್ಟು ಏಳು ಬೀಳು ಕಂಡ ರವಿ ಬೆಳಗೆರೆ ಅವರಿಗೆ ತೀವ್ರ ಹೃದಯಾಘಾತವಾಯಿತು ಆ ಸಮಯದಲ್ಲೂ ಸಹ ಅಕ್ಷರ ಪೋಣಿಸುತಿದ್ದರು, ನಿನ್ನೆ ತಡರಾತ್ರಿವರೆಗೂ ಅವರು ಕಚೇರಿಯಲ್ಲೇ ಇದ್ದರು. ಸುಮಾರು 12 ಗಂಟೆಗೆ ತೀವ್ರ ಹೃದಯಾಘಾತವಾಗಿದ್ದೂ ಕೂಡ ಪದ್ಮನಾಭ ನಗರದ ಅವರ ಕಚೇರಿಯಲ್ಲಿಯೇ. ಬಳಿಕ ಅಲ್ಲಿನ ಸಿಬ್ಬಂದಿ ಅಪೋಲೋ ಆಸ್ಪತ್ರೆಗೆ ಕರೆದೋಯ್ದಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆ ರಾತ್ರಿ ಸುಮಾರು 2.30ರ ವೇಳೆಗೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.


ಇನ್ನು ರವಿ ಬೆಳಗೆರೆಯವರಿಗೆ ಇಬ್ಬರು ಪತ್ನಿಯರಿದ್ದು ನಾಲ್ವರು ಮಕ್ಕಳಿದ್ದಾರೆ. ಮೊದಲ ಪತ್ನಿ ಲಲಿತಾ ಅವರ ಮಕ್ಕಳಾದ ಕರ್ಣ, ಭಾವನ ಬೆಳಗೆರೆ, ಚೇತನ ಬೆಳಗೆರೆ ಮತ್ತು ಎರಡನೇ ಪತ್ನಿ ಯಶೋಮತಿ ಹಾಗೂ ಮಗ ಹೀಮವಂತ ಅವರನ್ನು ಅಗಲಿದ್ದಾರೆ. ಖ್ಯಾತ ಚಿತ್ರ ನಟ ಶ್ರೀನಗರ ಕಿಟ್ಟಿ ಅವರ ಎರಡನೇ ಮಗಳು ಭಾವನಾ ಬೆಳಗೆರೆ ಪತಿಯಾಗಿದ್ದಾರೆ.
ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಯವರ ಆತ್ಮಕ್ಕೆ ಶಾಂತಿ ಸಿಗಲಿ
ತುಂಗಾವಾಣಿ ಬಳಗ

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Check Also

ಮಾತೃಭೂಮಿ ಕರ್ನಾಟಕ ರಕ್ಷಣಾ ವೇದಿಕೆ ಯಿಂದ ಎಸ್,ಪಿ,ಬಿ,ಗೆ ಶ್ರದ್ಧಾಂಜಲಿ.

ಮಾತೃಭೂಮಿ ಕರ್ನಾಟಕ ರಕ್ಷಣಾ ವೇದಿಕೆ ಯಿಂದ ಎಸ್,ಪಿ,ಬಿ,ಗೆ ಶ್ರದ್ಧಾಂಜಲಿ. ತುಂಗಾವಾಣಿ. ಗಂಗಾವತಿ,’ಈ ದೇಶ ಕಂಡ ದಿಗ್ಗಜ ಗಾಯಕ ಬಾಲಸುಬ್ರಹ್ಮಣ್ಯಂ ಅವರು …