Breaking News

ವಕ್ಫ ಬೋರ್ಡ್ ಜಿಲ್ಲಾಧ್ಯಕ್ಷ ನೂರುದ್ದೀನ್ ಖಾದ್ರಿ (ನವಾಬಸಾಬ ನಿಧನ)

ವಕ್ಫ ಬೋರ್ಡ್ ಜಿಲ್ಲಾಧ್ಯಕ್ಷ ನೂರುದ್ದೀನ್ ಖಾದ್ರಿ (ನವಾಬಸಾಬ ನಿಧನ)

ತುಂಗಾವಾಣಿ
ಗಂಗಾವತಿ: ನಂ12, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಆಪ್ತರಾಗಿದ್ದ ಹಾಗು ಜಿಲ್ಲಾ ವಕ್ಫ ಬೋರ್ಡ್ ಜಿಲ್ಲಾಧ್ಯಕ್ಷರಾಗಿದ್ದ ಸೈಯ್ಯದ್ ನೂರುದ್ದೀನ್ ಖಾದ್ರಿ (ನವಾಬಸಾಬ) ರವರು ಇಂದು ದಿ 12-11-20 ರ ಗುರುವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ನಿಕಟರಾಗಿದ್ದ ನವಾಬಸಾಹೇಬರು ಸಮಾಜಸೇವೆಯ ಜೊತೆ ಸಕ್ರೀಯ ರಾಜಕಾರಣಿಯಾಗಿದ್ದು ಈ ಹಿಂದೆ ಜನತಾದಳದಲ್ಲಿ ವಿವಿದ ಹುದ್ದೆ ಅಲಂಕರಿಸಿದ್ದರು.
ಗುಲ್ಬರ್ಗಾ ಖಾಜಾ ಬಂದೇನವಾಜ ಟ್ರಷ್ಟ್ ನಿರ್ದೇಶಕರ ಹುದ್ದೆಯಲ್ಲಿದ್ದು ಕಳೆದ ಎರಡು ಅವಧಿಗೆ ಕೊಪ್ಪಳ ಜಿಲ್ಲಾ ವಕ್ಫ ಬೋರ್ಡ್ ಅಧ್ಯಕ್ಷರಾಗಿ ಅಲ್ಪಸಂಖ್ಯಾತರಿಗೆ ಸರಕಾರದ ವಿವಿಧ ಸೌಲಭ್ಯ ಕೊಡಿಸುವಲ್ಲಿ ಶ್ರಮಿಸಿದ್ದರು.
ಅವರ ಅಂತಿಮ ಸಂಸ್ಕಾರವೂ ಇಂದು ಸಂಜೆ 7 ಗಂಟೆಗೆ ಗಂಗಾವತಿ ನಡೆಯಲಿದೆ.
ಮಡದಿ ಹಾಗು ಆರು ಜನ ಮಕ್ಕಳನ್ನು ಹಾಗು ಅಪಾರ ಪ್ರೀತಿ ಪಾರ್ತರನ್ನು ಬಿಟ್ಟು ಅಗಲಿದ ಹಿರಿಯ ಜೀವಕ್ಕೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗು ಮಾಜಿ ಸಂಸದ ಶಿವರಾಮಗೌಡ  ಅವರು ತೀರ್ವ ಸಂತಾಪ ವ್ಯಕ್ತಪಡಿಸಿದ್ದಾರೆ.

ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.

Check Also

ಮಾತೃಭೂಮಿ ಕರ್ನಾಟಕ ರಕ್ಷಣಾ ವೇದಿಕೆ ಯಿಂದ ಎಸ್,ಪಿ,ಬಿ,ಗೆ ಶ್ರದ್ಧಾಂಜಲಿ.

ಮಾತೃಭೂಮಿ ಕರ್ನಾಟಕ ರಕ್ಷಣಾ ವೇದಿಕೆ ಯಿಂದ ಎಸ್,ಪಿ,ಬಿ,ಗೆ ಶ್ರದ್ಧಾಂಜಲಿ. ತುಂಗಾವಾಣಿ. ಗಂಗಾವತಿ,’ಈ ದೇಶ ಕಂಡ ದಿಗ್ಗಜ ಗಾಯಕ ಬಾಲಸುಬ್ರಹ್ಮಣ್ಯಂ ಅವರು …